* ಡಾ. ಶಿವಕುಮಾರ ಸ್ವಾಮೀಜಿ ಬಸವಣ್ಣನವರ ನೀತಿಯನ್ನೇ ಪಾಲಿಸಿದರು
* ಡಾ. ಶಿವಕುಮಾರ ಶ್ರೀ ಆಧುನಿಕ ಯುಗದ ಬಸವಣ್ಣ
* ಗಂಗೆಯಲ್ಲಿ ಮಿಂದರೆ ಪಾಪ ನಿರ್ಮೂಲನೆ, ಸಿದ್ಧಗಂಗೆಗೆ ಬಂದರೆ ಪುಣ್ಯ ಪ್ರಾಪ್ತಿ
ತುಮಕೂರು(ಏ.02): ಇದು ಸಿದ್ಧಗಂಗೆ ಕ್ಷೇತ್ರವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah) ಮುಕ್ತಕಂಠದಿಂದ ಹೊಗಳಿದ ಪರಿ. ಶುಕ್ರವಾರ ಸಿದ್ಧಗಂಗಾ ಮಠದಲ್ಲಿ ಲಿಂಗೈಕ್ಯ ಡಾ.ಶಿವಕುಮಾರ ಶ್ರೀಗಳ 115ನೇ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಅವರು ಶ್ರೀ ಮಠಕ್ಕೆ ಭೇಟಿ ನೀಡಿದಾಗ ಹೇಳಿದ್ದ ‘ಉತ್ತರದಲ್ಲಿ ಗಂಗೆ, ದಕ್ಷಿಣದಲ್ಲಿ ಸಿದ್ಧಗಂಗೆ ಇದೆ’ ಎಂಬ ಮಾತನ್ನು ಪುನರುಚ್ಚರಿಸಿದರು.
ನಡೆದಾಡುವ ದೇವರು ಎಂದೇ ಪ್ರಸಿದ್ಧರಾದ ಕಾಯಕ ಯೋಗಿ, ತ್ರಿವಿಧ ದಾಸೋಹಿ ಡಾ. ಶಿವಕುಮಾರ ಮಹಾಶಿವಯೋಗಿಗಳವರು(Dr Shivakumar Swamiji) ಬಸವಣ್ಣನವರ ನೀತಿಯನ್ನೇ ಪಾಲಿಸಿದರು. ಅವರು ಆಧುನಿಕ ಯುಗದ ಬಸವಣ್ಣ(Basavanna). ತಮ್ಮ ಜೀವನದ ಅಂತಿಮ ಘಟ್ಟದವರೆಗೆ ಯಾರಲ್ಲಿಯೂ ಯಾವುದೇ ಪಕ್ಷಪಾತ ಮಾಡದೆ, ಸಾವಿರಾರು ಜನರಿಗೆ ಅನ್ನ, ಅಕ್ಷರ, ಆಶ್ರಯ ನೀಡುವ ಮೂಲಕ ಬದುಕು ಕಟ್ಟಿಕೊಟ್ಟು ಎಂದೆಂದಿಗೂ ಅಮರರಾಗಿದ್ದಾರೆ. ಮಹಾನ್ ತಪಸ್ವಿಯ ತಪಸ್ಸಿನಿಂದ, ಕರ್ಮಯೋಗಿಯ ಕರ್ಮದಿಂದ ಮತ್ತು ಧಾರ್ಮಿಕ ಜೀವನ ನಡೆಸಿದ ಸಂತನಿಂದ ಇಂತಹ ಆಧ್ಯಾತ್ಮಿಕ ಸ್ಥಳ ನಿರ್ಮಾಣವಾಗಿದೆ ಎಂದು ಶ್ಲಾಘಿಸಿದರು.
News Hour: ಬಿಜೆಪಿಗೆ 150 ಟಾರ್ಗೆಟ್ ಫಿಕ್ಸ್ ಮಾಡಿದ ಅಮಿತ್.. ಈ ಪ್ರದೇಶಕ್ಕೆ ಮೊದಲ ಆದ್ಯತೆ!
ಸಿದ್ಧಗಂಗಾ ಮಠಕ್ಕೆ(Siddaganga Matha) ಇದು ತಮ್ಮ ಮೂರನೇ ಭೇಟಿಯಾಗಿದ್ದು, ಪ್ರತಿ ಬಾರಿ ಭೇಟಿ ನೀಡಿದಾಗಲೂ ಇಲ್ಲಿಂದ ಚೈತನ್ಯ, ಶಕ್ತಿ ಹಾಗೂ ಜೀವನೋತ್ಸವವನ್ನು ಮನದಲ್ಲಿ ತುಂಬಿಕೊಂಡು ಹೋಗಿದ್ದೇನೆ. ಹಲವಾರು ವರ್ಷಗಳಿಂದ ಅನೇಕರಿಗೆ ಶಿಕ್ಷಣ, ಆರೋಗ್ಯ ಮತ್ತು ಆಶ್ರಯ ನೀಡುವ ಕಾಯಕದಿಂದ ಈ ಮಠ ದೇಶದಲ್ಲಿಯೇ ಪ್ರಸಿದ್ಧಿ ಪಡೆದಿದೆ ಎಂದು ತಿಳಿಸಿದರು.
ಜೀವನವನ್ನು ಉತ್ತಮ ರೀತಿಯಲ್ಲಿ ಹೇಗೆ ನಡೆಸಬೇಕು ಎಂಬುದಕ್ಕೆ ಡಾ.ಶಿವಕುಮಾರ ಸ್ವಾಮೀಜಿ ಅವರ ಜೀವನವೇ ನಮ್ಮೆಲ್ಲರಿಗೂ ಪ್ರೇರಣೆಯಾಗಿದೆ. ತ್ರಿವಿಧ ದಾಸೋಹ ಸಿದ್ಧಾಂತವನ್ನು ಭೂಮಿಯ ಮೇಲೆ ತಂದು ಸಿದ್ಧಗಂಗಾ ಮಠದಲ್ಲಿ ಅನೇಕ ವರ್ಷಗಳ ಕಾಲ ಇದನ್ನು ಶ್ರೀಗಳು ಪಾಲಿಸಿದ್ದರು. ಶ್ರೀಮಠಕ್ಕೆ ಬಂದಂತಹ ಯಾರೂ ಸಹ ಇಲ್ಲಿಂದ ಉಪವಾಸ ಹೋಗುವುದಿಲ್ಲ. ಸಮಾಜದ ಎಲ್ಲಾ ವರ್ಗದ 10 ಸಾವಿರಕ್ಕೂ ಹೆಚ್ಚು ಮಕ್ಕಳು ಇಲ್ಲಿ ಉಚಿತವಾಗಿ ಶಿಕ್ಷಣ ಪಡೆಯುತ್ತಿದ್ದಾರೆ. ಇದೊಂದು ನಿಜಕ್ಕೂ ವಿಸ್ಮಯಕಾರಿ ಕಾಯಕವೇ ಸರಿ ಎಂದು ಹೇಳಿದರು.
ಮೋದಿಯಿಂದ ಶ್ರೀಗಳ ತತ್ವ ಪಾಲನೆ:
ಕೊರೋನಾ(Coronavirus) ಸಂಕಷ್ಟಕಾಲದಲ್ಲಿ ದೇಶದ 80 ಕೋಟಿ ಬಡ ಜನರಿಗೆ ಉಚಿತವಾಗಿ ಊಟ, 3 ಕೋಟಿ ಜನರಿಗೆ ಮನೆಯನ್ನು ನಿರ್ಮಿಸಿಕೊಡುವ ಮೂಲಕ ಪ್ರಧಾನಿ ಮೋದಿ(Narendra Modi) ಅವರು ಸಿದ್ಧಗಂಗಾಶ್ರೀಗಳ ಕಾಯಕ ತತ್ವದ ಆದರ್ಶವನ್ನು ಪಾಲನೆ ಮಾಡುತ್ತಿದ್ದಾರೆ ಎಂದರು. ಎಲ್ಲರೂ ತಮ್ಮ ಮಾತೃ ಭಾಷೆಯಲ್ಲಿ ವೈದ್ಯಕೀಯ, ತಾಂತ್ರಿಕ ಶಿಕ್ಷಣ ಪಡೆಯಲು ಅನುವಾಗುವಂತೆ ಶೈಕ್ಷಣಿಕ ಯೋಜನೆಯನ್ನು ಜಾರಿಗೆ ತರಲಾಗಿದೆ ಮತ್ತು 3 ಕೋಟಿ ಜನರಿಗೆ ವಸತಿ ಯೋಜನೆಯನ್ನು ಕೇಂದ್ರ ಸರ್ಕಾರ(Central Government) ಜಾರಿಗೊಳಿಸಿದೆ ಎಂದು ಹೇಳಿದರು.
ವಿಜಯೇಂದ್ರಗೆ ಭೇಷ್ ಎಂದ ಅಮಿತ್ ಶಾ
88 ವರ್ಷಗಳ ಕಾಲ ಶ್ರೀಗಳು ಸುದೀರ್ಘ ನಿಸ್ವಾರ್ಥ ಸೇವೆ ಸಲ್ಲಿಸುವ ಮೂಲಕ ಸಮಾಜಕ್ಕೆ ಸನ್ಮಾರ್ಗ ತೋರಿಸಿದ್ದಾರೆ. ಶ್ರೀಗಳ ಸನ್ಮಾನ, ಸನ್ನಡತೆ, ಕಾಯಕತತ್ವವನ್ನು ನಾವೆಲ್ಲರೂ ಅನುಕರಣೆ ಮಾಡಬೇಕಾಗಿರುವುದು ಆದ್ಯ ಕರ್ತವ್ಯ. ಸಿದ್ಧಗಂಗಾ ಮಠದ ಕಿರಿಯ ಸ್ವಾಮಿಗಳು ಶಿವಕುಮಾರ ಸ್ವಾಮೀಜಿಗಳ ಆದರ್ಶಗಳನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಸ್ವಾಮೀಜಿಗಳ ಕಾಯಕದ ಸಂದೇಶವನ್ನು ನಾವು ಮುನ್ನೆಡೆಸಿಕೊಂಡು ಹೋಗೋಣ ಎಂದರು.
ಗಂಗೆಯಲ್ಲಿ ಮಿಂದರೆ ಪಾಪ ನಿರ್ಮೂಲನೆ, ಸಿದ್ಧಗಂಗೆಗೆ ಬಂದರೆ ಪುಣ್ಯ ಪ್ರಾಪ್ತಿ: ಅಮಿತ್ ಶಾ
ತುಮಕೂರು ಸಿದ್ಧಗಂಗಾ ಮಠದಲ್ಲಿ ಶುಕ್ರವಾರ ನಡೆದ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿ ಅವರ 115ನೇ ಜಯಂತ್ಯುತ್ಸವವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಉದ್ಘಾಟಿಸಿದರು. ಸುತ್ತೂರು ಮಠಾಧೀಶ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕೇಂದ್ರ ಹಾಗೂ ರಾಜ್ಯದ ಸಚಿವರು ಉಪಸ್ಥಿತರಿದ್ದರು.