ಸಂಸ್ಕಾರ ಇಲ್ಲದ ಮಕ್ಕಳು ಅಪಾಯ: ಸ್ವಾಮೀಜಿ

By Kannadaprabha NewsFirst Published May 29, 2023, 5:55 AM IST
Highlights

ಬಸವಾದಿ ಶಿವಶರಣರು ನೀಡಿದ ಸಂಸ್ಕಾರವನ್ನು ಮಕ್ಕಳಿಗೆ ಕಲಿಸದಿದ್ದರೆ ವೀರಶೈವ ಲಿಂಗಾಯತ ಧರ್ಮಕ್ಕೆ ನಷ್ಟಆಗಲಿದೆ ಎಂದು ಬೆಟ್ಟಹಳ್ಳಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಎಚ್ಚರಿಸಿದ್ದಾರೆ.

 ಕುಣಿಗಲ್‌ :  ಬಸವಾದಿ ಶಿವಶರಣರು ನೀಡಿದ ಸಂಸ್ಕಾರವನ್ನು ಮಕ್ಕಳಿಗೆ ಕಲಿಸದಿದ್ದರೆ ವೀರಶೈವ ಲಿಂಗಾಯತ ಧರ್ಮಕ್ಕೆ ನಷ್ಟಆಗಲಿದೆ ಎಂದು ಬೆಟ್ಟಹಳ್ಳಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಎಚ್ಚರಿಸಿದ್ದಾರೆ.

ತುಮಕೂರು ರಸ್ತೆಯ ಅಟವೀಶ್ವರಸ್ವಾಮಿ ದೇವಾಲಯದಲ್ಲಿ ಏರ್ಪಡಿಸಿದ್ದ ಬಸವೇಶ್ವರರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿ ಮಾತನಾಡಿದರು.

Latest Videos

ರಾಜ್ಯದಲ್ಲಿ ಮತಾಂತರಗೊಂಡ ಸಮುದಾಯಗಳ ಪಟ್ಟಿಗಮನಿಸಿದಾಗ ವೀರಶೈವ ಲಿಂಗಾಯತ ಧರ್ಮದ ಪಟ್ಟಿದೊಡ್ಡದಿದೆ. ಇದಕ್ಕೆ ಕಾರಣ ಈ ಧರ್ಮದ ತಂದೆ ತಾಯಿಗಳು ತಮ್ಮ ಮಕ್ಕಳಿಗೆ ಸರಿಯಾದ ಧರ್ಮ ಶಿಕ್ಷಣ ನೀಡುತ್ತಿಲ್ಲ. ಇದರಿಂದ ನಿಮ್ಮ ಮಕ್ಕಳು ಅನ್ಯಧರ್ಮದ ಕಡೆಗೆ ವಾಲುವುದು ಸಾಮಾನ್ಯ ಸಂಗತಿ ಎಂದು ಆತಂಕ ವ್ಯಕ್ತಪಡಿಸಿದರು.

ಅನುಭವ ಮಂಟಪದಂತಹ ಉತ್ತಮ ವ್ಯವಸ್ಥೆ, ವಚನ ಸಾಹಿತ್ಯದಂತಹ ಉತ್ತಮ ಸಂದೇಶ ಸೇರಿದಂತೆ ಹಲವಾರು ವಿಚಾರಗಳನ್ನು ನೀಡಿರುವ ಬಸವ ಧರ್ಮದ ವಿಚಾರಗಳು ಕಾನೂನಾಗಿ ಪರಿವರ್ತನೆಗೊಂಡಿವೆ ಅವುಗಳನ್ನು ನಾವು ಕಲಿಯಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕುಣಿಗಲ್‌ ಶಾಸಕ ಡಾಕ್ಟರ್‌ ರಂಗನಾಥ್‌ ಸಂಸ್ಕಾರಯುತವಾದ ಧರ್ಮ ಎಂದರೆ ಅದು ವೀರಶೈವ ಲಿಂಗಾಯತ ಧರ್ಮವಾಗಿದೆ. ಈ ಸಂಸ್ಕಾರ ಸಮಾಜಕ್ಕೆ ಶಿಕ್ಷಣ ಆರೋಗ್ಯ ಸೇರಿದಂತೆ ಎಲ್ಲ ರೀತಿ ಸಹಕಾರ ನೀಡುತ್ತೇವೆ ಎಂದರು.

ಸ್ಮಶಾನಗಳ ಅಭಿವೃದ್ಧಿ ಹಾಗೂ ಸಮುದಾಯಗಳ ಭವನಗಳ ಮಂಜೂರಾತಿಗೆ ಸಹಕಾರ ನೀಡುತ್ತೇವೆ ಎಂದರು.

ಕಾರ್ಯಕ್ರಮಕ್ಕೆ ಮುನ್ನ ಪಟ್ಟಣದ ಮುಖ್ಯ ಬೀದಿಗಳಲ್ಲಿ ಅÜಟವೀಶ್ವರ ಸ್ವಾಮಿ, ಬಸವಣ್ಣ ಹಾಗೂ ರೇಣುಕರ ವಿಗ್ರಹಗಳ ಮೆರವಣಿಗೆಯನ್ನು ವೀರಗಾಸೆ ಕಲಾತಂಡಗಳೊಂದಿಗೆ ನಡೆಸಲಾಯಿತು,

ಕನ್ನಡ ಸಾಹಿತ್ಯ ಪರಿಷತ್‌ ನ ಜಿಲ್ಲಾಧ್ಯಕ್ಷ ಸಿದ್ದಲಿಂಗಪ್ಪ ನಿವೃತ್ತ ಪ್ರಾಂಶುಪಾಲರಾದ ಡಿ.ಎನ್‌.ಯೋಗೇಶ್‌ ಮಾತನಾಡಿದರು. ಸ್ವಾಮಿ ಕೃಷ್ಣ ಶಿವಕುಮಾರ್‌ ಯೋಗ ಬಂದು ರಾಮಣ್ಣ, ದೊಡ್ಡ ಮಾವತ್ತೂರು ಬಸವರಾಜಪ್ಪ ಕುಣಿಗಲ್‌ ವಸಂತ್‌, ನಟರಾಜ್‌, ಶಿವಣ್ಣ, ಕೊತ್ತಕೆರೆ ಬಸವರಾಜು, ವಿಶ್ವನಾಥ ಸೋಮಶೇಖರ್‌, ನಟರಾಜ್‌, ಗಿರಿರಾಜ ಇದ್ದರು.

ಲಿಂಗಾಯತರ ಕೈ ಹಿಡಿದ ಹೈ ಕಮಾಂಡ್

ಬೆಂಗಳೂರು (ಮೇ 25):  ಕರ್ನಾಟಕದ ಕಾಂಗ್ರೆಸ್‌ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಕಸರತ್ತು ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದು, ಇಮದು ರಾತ್ರಿ ವೇಳೆಗೆ ಸಚಿವ ಪಟ್ಟಿ ಹೊರಬೀಳಲಿದೆ. ಈ ಪೈಕಿ ಕೆಲವು ಸಂಭವನೀಯ ಸಚಿವ ಪಟ್ಟಿ ಏಷ್ಯಾನೆಟ್‌ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ.

ಕರ್ನಾಟಕದ ಕಾಂಗ್ರೆಸ್‌ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಕಸರತ್ತು ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದು, ರಾಜ್ಯದ 50ಕ್ಕೂ ಅಧಿಕ ಶಾಸಕರು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಏಷ್ಯಾನೆಟ್‌ ಸುವರ್ಣ ನ್ಯೂಸ್‌ಗೆ ಲಭ್ಯವಾಗಿರುವ ಸಚಿವರುಗಳ ಪಟ್ಟಿಯೇ ಬಹುತೇಕ ಖಚಿತವಾಗಲಿದೆ ಎಂಬ ಸುಳಿವು ಕೂಡ ಸಿಕ್ಕಿದೆ. ಆದರೆ, ಈ ಪಟ್ಟಿಯ ಹೊರತಾಗಿ ಇಬ್ಬರ ಹೆಸರು ತೆಗೆದುಕೊಂಡಿದ್ದು, ಅವರಲ್ಲಿ ಒಬ್ಬರ ಹೆಸರನ್ನು ಆಯ್ಕೆ ಮಾಡಲು ಹಗ್ಗ- ಜಗ್ಗಾಟ ಮುಂದುವರೆದಿದೆ. 

click me!