ಮಹಿಳೆ ಸ್ನಾನ ಮಾಡುವಾಗ ವೀಡಿಯೋ ಮಾಡಿದ : ರೋಗಿ ನೋಡಲು ಬಂದು ಮಾಡಿದ್ದೇ ಬೇರೆ

By Kannadaprabha News  |  First Published Feb 15, 2021, 4:08 PM IST

ಆಸ್ಪತ್ರೆಯಲ್ಲಿದ್ದ ಪರಿಚಿತ ರೋಗಿಯನ್ನು ನೋಡಲು ಬಂದವ ಮಹಿಳೆಯ ಸ್ನಾನದ ವೀಡಿಯೋ ಮಾಡಿದ್ದಾನೆ. ಪರಿಚಿತನೇ ದುಷ್ಕೃತ್ಯ ಎಸಗಿ ಈಗ ಅರೆಸ್ಟ್ ಆಗಿದ್ದಾನೆ


ಉಳ್ಳಾಲ (ಫೆ.15): ಆಸ್ಪತ್ರೆಯ ಖಾಸಗಿ ಕೊಠಡಿಯಲ್ಲಿ ಸ್ನಾನ ಮಾಡುತ್ತಿದ್ದ ಮಹಿಳೆಯ ವೀಡಿಯೋ ಮಾಡಿದ್ದ ಆರೋಪಿಯನ್ನು ಉಳ್ಳಾಲದ ಪೊಲೀಸರ ತಂಡ ಬಂಧಿಸಿದೆ.

ಮದನಿನಗರ ನಿವಾಸಿ ಅಬ್ದುಲ್‌ ಮುನೀರ್‌ (40) ಬಂಧಿತ.

Tap to resize

Latest Videos

ಯುವತಿಯರ ಬೆತ್ತಲೆ ಶೂಟ್: ಖ್ಯಾತ ನಟಿಯ ಪತಿಗೆ ಬಂಧನ ಭೀತಿ .

ಅಸೌಖ್ಯ ನಿಮಿತ್ತ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಂಬಂಧಿಕರ ಜತೆಗಿದ್ದ ಮಹಿಳೆ, ಸ್ನಾನ ಮಾಡಲು ತೆರಳಿದ್ದ ಸಂದರ್ಭ ಆರೋಪಿ ಮುನೀರ್‌ ಮೊಬೈಲ್‌ನಲ್ಲಿ ವೀಡಿಯೋ ಮಾಡಿದ್ದ. ಇದನ್ನು ಗಮನಿಸಿದ ಮಹಿಳೆ ಕೂಡಲೇ ಹೊರಬಂದಾಗ, ಆರೋಪಿ ಮುನೀರ್‌ ತಲೆಮರೆಸಿಕೊಂಡಿದ್ದನು.

ನವ ಜೋಡಿಯೊಂದರ ಫಸ್ಟ್‌ನೈಟ್ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್

ಅಸೌಖ್ಯದಿಂದಿದ್ದ ತಂದೆಯನ್ನು ನೋಡಲೆಂದು ಮಹಿಳೆ ಕೂಡ ಆಸ್ಪತ್ರೆಯಲ್ಲಿದ್ದರು. ಅವರನ್ನು ನೋಡಲು ಪರಿಚಿತನೇ ಆಗಿರುವ ಮುನೀರ್‌ ಆಸ್ಪತ್ರೆ ಕೊಠಡಿಗೆ ಬಂದಿದ್ದ. ಈ ಸಂದರ್ಭ ದುಷ್ಕೃತ್ಯ ಎಸಗಿದ್ದಾನೆ.

click me!