ಹಿಂದೂ ಹುಡುಗನ ಜೊತೆ ಪ್ರೀತಿ; ಕಾಲೇಜಿಂದಲೇ ವಿದ್ಯಾರ್ಥಿನಿಯನ್ನ ಹೊತ್ತೊಯ್ದ ಪೋಷಕರು

Published : Nov 21, 2026, 08:28 AM IST
Couple

ಸಾರಾಂಶ

ಹಿಂದೂ ಯುವಕನನ್ನು ಪ್ರೀತಿಸುತ್ತಿದ್ದ ಮುಸ್ಲಿಂ ವೈದ್ಯಕೀಯ ವಿದ್ಯಾರ್ಥಿನಿಯನ್ನು ಆಕೆಯ ಕುಟುಂಬಸ್ಥರೇ ಕಾಲೇಜಿನಿಂದ ಬಲವಂತವಾಗಿ ಕರೆದೊಯ್ದಿದ್ದಾರೆ. ನಂತರ ಪೊಲೀಸರು ಆಕೆಯನ್ನು ರಕ್ಷಿಸಿ ಸಾಂತ್ವನ ಕೇಂದ್ರಕ್ಕೆ ಕಳುಹಿಸಿದ್ದು, ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಕ್ಷಿಣ ಕನ್ನಡ: ಹಿಂದೂ ಯುವಕನನ್ನು ಪ್ರೀತಿಸುತ್ತಿದ್ದಳು ಎನ್ನಲಾದ ವಿದ್ಯಾರ್ಥಿನಿಯನ್ನು ಆಕೆಯ ಕುಟುಂಬಸ್ಥರು ಕಾಲೇಜಿಗೆ ಆಗಮಿಸಿ ಬಲವಂತವಾಗಿ ಕರೆದೊಯ್ದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ನಾಟೆಕಲ್ಲಿನ ಮೆಡಿಕಲ್‌ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿನಿಯನ್ನು ಕುಟುಂಬಸ್ಥರು ಆಕೆಯ ವಿರೋಧದ ನಡುವೆಯೂ ಒತ್ತಾಯಪೂರ್ವಕವಾಗಿ ಹೊತ್ತೊಯ್ದಿದ್ದಾರೆ. ಘಟನೆ ಸಂಬಂಧ ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೇರಳದಿಂದ ವಿದ್ಯಾರ್ಥಿನಿಯನ್ನು ರಕ್ಷಿಸಿ ಸಾಂತ್ವನ ಕೇಂದ್ರಕ್ಕೆ ಕಳುಹಿಸಲಾಗಿದೆ. ಪ್ರಕರಣ ಸಂಬಂಧ ಇಬ್ಬರಿಗೆ ನೋಟಿಸ್‌ ಜಾರಿಗೊಳಿಸಲಾಗಿದೆ.

ಬೆಳ್ತಂಗಡಿ ಮೂಲದ ವಿದ್ಯಾರ್ಥಿನಿ, ಬಾಗಲಕೋಟೆ ಮೂಲದ ಯುವಕ

ಬೆಳ್ತಂಗಡಿ ಮೂಲದ ಮುಸ್ಲಿಂ ವಿದ್ಯಾರ್ಥಿನಿ ಮಂಗಳೂರಿನ ಶಿಕ್ಷಣ ಸಂಸ್ಥೆಯೊಂದರಲ್ಲಿ ವ್ಯಾಸಂಗ ಮಾಡುತ್ತಿರುವ ಬಾಗಲಕೋಟೆ ಮೂಲದ ಹಿಂದೂ ವಿದ್ಯಾರ್ಥಿಯೊಂದಿಗೆ ಪ್ರೇಮ ಸಂಬಂಧವಿತ್ತು ಎನ್ನಲಾಗಿದೆ. ಈ ವಿಚಾರ ಕುಟುಂಬಸ್ಥರ ಗಮನಕ್ಕೆ ಬಂದಿದ್ದು, ಸಂಬಂಧಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು ಎಂದು ತಿಳಿದುಬಂದಿದೆ.

ಅಪಹರಣವೆಂದು ಬಿಂಬಿಸುವುದು ಸರಿಯಲ್ಲ

ವೈದ್ಯಕೀಯ ವಿದ್ಯಾರ್ಥಿನಿಯನ್ನು ಮನೆಮಂದಿ ಕರೆದುಕೊಂಡು ಹೋಗಲು ಬಂದಾಗ ವಿರೋಧ ವ್ಯಕ್ತಪಡಿಸಿದ್ದಳು. ಮನೆಮಂದಿ ಆಕೆಯನ್ನು ಕರೆದುಕೊಂಡು ಹೋಗುವುದರಲ್ಲಿ ತಪ್ಪಿಲ್ಲ. ಘಟನೆಯನ್ನು ಅಪಹರಣವೆಂದು ಬಿಂಬಿಸುವುದು ಸರಿಯಲ್ಲ ಎಂದು ಕಣಚೂರು ವೈದ್ಯಕೀಯ ಕಾಲೇಜು ಡೀನ್‌ ಡಾ। ಶಾನವಾಝ್‌ ಮಾಣಿಪ್ಪಾಡಿ ತಿಳಿಸಿದ್ದಾರೆ.

ಹಾಡಹಗಲೇ ಮಂಗಳೂರಿನ ಕಾಲೇಜು ಆವರಣದಿಂದ ವಿದ್ಯಾರ್ಥಿನಿಯೊಬ್ಬಳನ್ನು ಹಲವು ವ್ಯಕ್ತಿಗಳು ಬಲವಂತವಾಗಿ ಕಾರಿನಲ್ಲಿ ಎಳೆದೊಯ್ದಿರುವುದು ಆಘಾತಕಾರಿ ಎಂದು ಶಾಸಕ ವೇದವ್ಯಾಸ ಕಾಮತ್‌ ಕಳವಳ ವ್ಯಕ್ತಪಡಿಸಿದ್ದಾರೆ.

PREV
Read more Articles on
click me!

Recommended Stories

Winter: ಬೆಂಗಳೂರಿನಲ್ಲಿ ತಾಪಮಾನ ದಿಢೀರ್ ಕುಸಿತ: ನವೆಂಬರ್‌ನಲ್ಲಿ ಚಳಿ ದಾಖಲೆ ಉಡೀಸ್
ಕಿಡ್ನಿ ದಾನ ಮಾಡಿ ಉಳಿಸಿಕೊಂಡಿದ್ದ ಪತ್ನಿ ಹಿಟ್ ಅಂಡ್ ರನ್ ಗೆ ಬಲಿ, ವಿಧಿಯ ಕ್ರೂರ ಆಟಕ್ಕೆ ಕಣ್ಣೀರಿಟ್ಟ ಪತಿ!