Winter: ಬೆಂಗಳೂರಿನಲ್ಲಿ ತಾಪಮಾನ ದಿಢೀರ್ ಕುಸಿತ: ನವೆಂಬರ್‌ನಲ್ಲಿ ಚಳಿ ದಾಖಲೆ ಉಡೀಸ್

Published : Nov 21, 2026, 07:45 AM IST
Bengaluru Winter

ಸಾರಾಂಶ

ಬೆಂಗಳೂರಿನನಲ್ಲಿ ಚಳಿಯ ತೀವ್ರತೆ ಹೆಚ್ಚಾಗಿದ್ದು, ತಾಪಮಾನ ಗಣನೀಯವಾಗಿ ಕುಸಿದಿದೆ. ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನ 15.5 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಮೂಲಕ ನಾಲ್ಕು ವರ್ಷಗಳ ದಾಖಲೆ ಮುರಿದಿದೆ. ನವೆಂಬರ್ 24ರವರೆಗೆ ಇದೇ ರೀತಿಯ ಚಳಿಯ ವಾತಾವರಣ ಮುಂದುವರೆಯಲಿದೆ.

ಬೆಂಗಳೂರು: ನಗರದಲ್ಲಿ ರಾತ್ರಿ ಮತ್ತು ನಸುಕಿನಲ್ಲಿ ಚಳಿಯ ತೀವ್ರತೆ ಹೆಚ್ಚಾಗಿದ್ದು, ಶುಕ್ರವಾರ ಕನಿಷ್ಠ ತಾಪಮಾನ 15.5 ಡಿಗ್ರಿ ಸೆಲ್ಸಿಯಸ್ ದಾಖಲಾಗುವುದರೊಂದಿಗೆ ನವೆಂಬರ್ ತಿಂಗಳ ನಾಲ್ಕು ವರ್ಷಗಳ ದಾಖಲೆ ಮುರಿದಿದೆ. 2022ರ ನವೆಂಬರ್‌ನಲ್ಲಿ ಕನಿಷ್ಠ ತಾಪಮಾನ 13.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ನಂತರದ ವರ್ಷಗಳಲ್ಲಿ ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್ ಕೆಳಗೆ ದಾಖಲಾಗಿರಲಿಲ್ಲ. ಶುಕ್ರವಾರ ಬೆಳಗ್ಗೆ ನಗರದಲ್ಲಿ ಕನಿಷ್ಠ ತಾಪಮಾನ 15.5 ಡಿಗ್ರಿ ಸೆಲ್ಸಿಯಸ್ ಹಾಗೂ ಗ್ರಾಮಾಂತರದಲ್ಲಿ 14.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಎಚ್‌ಎಎಲ್ ಏರ್‌ಪೋರ್ಟ್‌ ಮತ್ತು ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಕ್ರಮವಾಗಿ 14.4 ಮತ್ತು 14.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ. ಇದು ನವೆಂಬರ್ ತಿಂಗಳ ಸರಾಸರಿಗಿಂತ 2.7 ರಿಂದ 3.5 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆ.

ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್

ಇದೇ ವೇಳೆ ಚಳಿಯ ಜೊತೆಗೆ ಮಧ್ಯಾಹ್ನದ ವೇಳೆ ಬಿಸಿಲಿನ ತಾಪವೂ ಜೋರಾಗಿದ್ದು, ಶುಕ್ರವಾರ ಮಧ್ಯಾಹ್ನ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ನ.24ರವರೆಗೂ ಚಳಿಯ ವಾತಾವರಣ ಮುಂದುವರೆಯಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ.

ಹೆಚ್ಚುತ್ತಿರುವ ಚಳಿಗೆ ಥರಗುಟ್ಟುತ್ತಿರುವ ಜನತೆ

ಸಂಡೂರು:ದಿನದಿಂದ ದಿನಕ್ಕೆ ಚಳಿಯ ಪ್ರಭಾವ ತೀವ್ರವಾಗುತ್ತಿರುವುದರಿಂದ ಜನತೆ ಹೆಚ್ಚುತ್ತಿರುವ ಚಳಿಯಿಂದ ಥರಗುಡುತ್ತಿದ್ದಾರೆ. ಇತರೆಡೆಯಂತೆ ಸಂಡೂರಿನಲ್ಲಿಯೂ ಕೆಲ ದಿನಗಳಿಂದ ಚಳಿಯ ತೀವ್ರತೆ ಹೆಚ್ಚಾಗುತ್ತಿದೆ. ರಾತ್ರಿ ಹೊತ್ತಿನಲ್ಲಿ ಸುಮಾರು ೨೦ ಡಿಗ್ರಿ ಸೆಲ್ಸಿಯಸ್ ಆಸುಪಾಸಿಗೆ ಕುಸಿಯುವ ತಾಪಮಾನ, ಬೆಳಗ್ಗೆ ಸೂರ್ಯನ ಕಿರಣಗಳು ಭೂಮಿ ಸ್ಪರ್ಶಿಸುತ್ತಿದ್ದಂತೆ ನಿಧಾನವಾಗಿ ಚಳಿ ಮರೆಯಾಗಿ ತಾಪಮಾನ ಹೆಚ್ಚಾಗುವುದು. ಸಂಜೆಯಾಯಿತೆಂದರೆ ಪುನಾ ಚಳಿ ತನ್ನ ಪ್ರಭಾವ ಬೀರ ತೊಡಗುತ್ತದೆ.

ಬದಲಾದ ಜೀವನಶೈಲಿ

ಬೇಸಿಗೆಯಲ್ಲಿ ಸೂಟ್‌ಕೇಸ್, ಕಪಾಟು, ಟ್ರಂಕ್ ಸೇರಿದ್ದ ಸ್ವೆಟ್ಟರ್, ಮಫ್ಲರ್, ಉಣ್ಣೆಯ ಟೊಪ್ಪಿಗೆಗಳು, ಜರ್ಕಿನ್‌ಗಳು ಚಳಿಯ ಹಿನ್ನೆಲೆ ಹೊರ ತೆಗೆಯಲ್ಪಟ್ಟಿವೆ. ನಸುಕಿನಲ್ಲಿ ಮನೆಯಿಂದ ಹೊರ ಬರುವ ಬಹುತೇಕರು ದೇಹ ಬೆಚ್ಚಗಿಡಲು ಜರ್ಕಿನ್, ಸ್ವೆಟ್ಟರ್, ಮಫ್ಲರ್, ಉಣ್ಣೆಯ ಟೊಪ್ಪಿಗೆ ಧರಿಸುತ್ತಿದ್ದಾರೆ. ಕೆಲವರು ತಣ್ಣೀರು ಕುಡಿಯುವುದನ್ನು ಬಿಟ್ಟು, ಬಿಸಿ ನೀರು ಸೇವಿಸಲು ಆರಂಭಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿಗರಿಗೆ ನಮ್ಮ ಮೆಟ್ರೋದಿಂದ ಗುಡ್ ನ್ಯೂಸ್: ಏರ್‌ಪೋರ್ಟ್ ಸಂಪರ್ಕಿಸುವ ಬ್ಲೂ ಲೈನ್ ಟ್ರಯಲ್ ರನ್ ಅಧಿಕೃತ ಆರಂಭ!

PREV
Read more Articles on
click me!

Recommended Stories

ಸ್ಯಾಂಕಿ ಟ್ಯಾಂಕ್ ಬಳಿ ಹೊಸ ಬದಲಾವಣೆ: ಶ್ರೀರಾಂಪುರ ಮೆಟ್ರೋ ಬಳಿ ಬಹುಮಹಡಿ ಪಾರ್ಕಿಂಗ್
ಭಾರತ್ ಜೋಡೋ ಸಂಘಗಳಿಗೆ 1 ಸಾವಿರ ಕೋಟಿ ಕೊಡೋಕೆ ದುಡ್ಡಿದೆ, ಆಶಾ ಕಾರ್ಯಕರ್ತರ ಗೌರವ ಧನ ಹೆಚ್ಚಿಸೋಕೆ ಇಲ್ಲವಾ?