ಚಿತ್ರದುರ್ಗ: ಕಾಮಗಾರಿ ಆರಂಭವಾಗಿ 10 ವರ್ಷ ಕಳೆದರೂ ಪೂರ್ಣವಾಗದ‌ ಯುಜಿಡಿ ಯೋಜನೆ

By Girish Goudar  |  First Published Dec 19, 2023, 9:15 PM IST

ಈ ಸಮಸ್ಯೆ ಬಗ್ಗೆ  ನಗರಸಭೆ ಪೌರಾಯುಕ್ತರು ಹಾಗೂ ಕಿರು ನೀರು ಸರಬರಾಜು ಇಲಾಖೆ ಅಧಿಕಾರಿಗಳನ್ನು ಕೇಳಿದ್ರೆ, ಪೈಪ್ ಲೈನ್ ಮತ್ತು ರಸ್ತೆ ಅಗಲಿಕರಣ ಕಾಮಗಾರಿಗಳಿಂದ ಈ ದುಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಮ್ಯಾನ್ ಹೋಲ್ ರಿಪೇರಿ ಮಾಡುವಂತೆ ಸಂಬಂಧಪಟ್ಟವರಿಗೆ ಸೂಚಿಸಿದ್ದೇವೆ ಅಂತ ಒಬ್ಬರ ಮೇಲೊಬ್ರು ಹಾರಿಕೆ ಉತ್ತರ ಕೊಡ್ತಾರೆ.
 


ವರದಿ: ಕಿರಣ್.ಎಲ್. ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ(ಡಿ.19):  ಅದೊಂದು ಐತಿಹಾಸಿಕ ನಗರಿಯ ಕನಸಿನ ಯೋಜನೆ. ಆ ಯೋಜನೆ ಪೂರ್ಣಗೊಂಡ್ರೆ, ನಮ್ಮ‌ ನಗರ ಸುಂದರ ಸ್ಮಾರ್ಟ್ ಸಿಟಿಯಾಗಲಿದೆ ಎಂಬ ಕನಸು ಜನರಲ್ಲಿತ್ತು. ಆದ್ರೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಮಾಡಿರುವ ಕಳಪೆ ಕಾಮಗಾರಿಯಿಂದಾಗಿ ಜನರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ಈ ಕುರಿತು ಒಂದು ವರದಿ ಇಲ್ಲಿದೆ. ಹೀಗೆ ಉದ್ಘಾಟನೆಗೂ ಮುನ್ನವೇ ಶಿಥಿಲಗೊಂಡ ಮ್ಯಾನ್ ಹೋಲ್ ಗಳು. ನಾಗರೀಕರು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ. ಮನೆಯಿಂದ  ಹೊರಬರಲು ಕಾಡುತ್ತಿರುವ ಪ್ರಾಣಭಯ‌.ಈ ದೃಶ್ಯಗಳು ಕಂಡು ಬಂದಿದ್ದು, ಚಿತ್ರದುರ್ಗದ ಐಯುಡಿಪಿ‌,‌ಸರಸ್ವತಿ ಪುರಂ ಬಡಾವಣೆಯಲ್ಲಿ. 

Latest Videos

undefined

ಹೌದು, ಇದು ಕೇವಲ ಇವೆರಡು ಬಡಾವಣೆಯ ಕಥೆಯಲ್ಲ. ಇಡೀ ಚಿತ್ರದುರ್ಗ ನಗರಕ್ಕೆ ಯೂಜಿಡಿ  ವ್ಯವಸ್ಥೆ ಕಲ್ಪಿಸಲು‌  ಸರ್ಕಾರ 78.47 ಕೋಟಿ ರೂಪಾಯಿ‌  ಅನುಧಾನವನ್ನು ಮಂಜೂರು ಮಾಡಿದೆ.‌ 2013 ರಲ್ಲಿ‌ ಈ ಯೋಜನೆ ಆರಂಭವಾಗಿದ್ದು, ಈವರೆಗೆ ಸಂಪೂರ್ಣವಾಗಿಲ್ಲ. ಆದ್ರೆ ಉದ್ಘಾಟನೆಗೂ ಮುನ್ನವೇ ರಸ್ತೆ ಮಧ್ಯೆ  ನಿರ್ಮಾಣವಾದ ಮ್ಯಾನ್ ಹೋಲ್ ಗಳು ಶಿಥಿಲಾವಸ್ಥೆಯಲ್ಲಿವೆ. ನಾಗರೀಕರ ಪಾಲಿಗೆ ಮೃತ್ಯ ಕೂಪಗಳಾಗಿ ಮಾರ್ಪಟ್ಟಿವೆ. ಅಪಾಯ ತಂದೊಡ್ಡಲು ಬಾಯ್ತೆರೆದು ಕುಳಿತಿವೆ. ಹೀಗಾಗಿ ಆ ಮ್ಯಾನ್ ಹೋಲ್ ಗಳ ಬಳಿ‌ಓಡಾಡುವ ಜನರು, ಬ್ಯಾರಿಕೇಡ್ ಹಾಗು ಕಲ್ಲುಗಳನ್ನಿಟ್ಟು ತಾತ್ಕಾಲಿಕ ರಿಲೀಫ್ ಪಡೆದಿದ್ದಾರೆ. ಆದರೆ ಈ ರಸ್ತೆಗಳಲ್ಲಿ ಸಂಚರಿಸುವ ವಾಹನ ಸವಾರರು ಹಾಗು ಶಾಲಾ ವಿದ್ಯಾರ್ಥಿಗಳು ನಿತ್ಯ ಆತಂಕದಿಂದ ಓಡಾಡುವಂತಾಗಿದೆ‌. ಆಯತಪ್ಪಿ‌ ಬಿದ್ರೆ ಗತಿಯೇನೆಂಬ ಆತಂಕ ಅವರಲ್ಲಿ ಮನೆ ಮಾಡಿದೆ. ಇನ್ನು ಕೆಲವೆಡೆ ಮ್ಯಾನ್ ಹೋಲ್ ಗಳಿಂದ ಹೊರಬರುವ ದುರ್ನಾಥದಿಂದಾಗಿ,ಜನರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ಅಲ್ಲದೇ ರಾತ್ರಿ ವೇಳೆ ತುರ್ತು ಸಮಯದಲ್ಲಿ ಓಡಾಡುವಾಗ ಅಪಘಾತಗಳು ಸಂಭವಿಸಿ ಕೈಕಾಲು ಮುರಿದುಕೊಳ್ಳುವ ಭೀತಿಯಿದೆ.ಆದ್ರೆ ಈ ಮ್ಯಾನ್ ಹೋಲ್ ಗಳು ಹಾಗು ಯೂಜಿಡಿ ಸಮಸ್ಯೆ‌ಬಾರದಂತೆ  ನಿರ್ವಹಣೆ ಮಾಡಬೇಕಾದ ನಗರಸಭೆಹಾಗು ಕಿರು ನೀರು‌ ಸರಬರಾಜು ಇಲಾಖೆ ಮಾತ್ರ ಕಣ್ಮುಚ್ಚಿ ಕುಳಿತಿದೆ ಅಂತ ನಾಗರೀಕರು‌ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.

ಖೈದಿಗೆ ಜೈಲರ್ ಕಿರುಕುಳ ಆರೋಪ: ನೋಟಿಸ್ ಜಾರಿ ಮಾಡಿದ ದಾವಣಗೆರೆ ಕೋರ್ಟ್!

ಇನ್ನು ಚಿತ್ರದುರ್ಗ ನಗರದಲ್ಲಿ  ಈವರೆಗೆ 8000 ಮನೆಗಳಿಗೆ ಯುಜಿಡಿ ಕನೆಕ್ಷನ್ ಮಾಡಿದ್ದು, ಉಳಿದ 23000 ಮನೆಗಳಿಗೆ ಕನೆಕ್ಷನ್ ಆಗುವ ಮುನ್ನವೇ ದೊಡ್ಡ ತಲೆನೋವೆನಿಸಿದೆ. ಈ ಸಮಸ್ಯೆ ಬಗ್ಗೆ  ನಗರಸಭೆ ಪೌರಾಯುಕ್ತರು ಹಾಗು ಕಿರು ನೀರು ಸರಬರಾಜು ಇಲಾಖೆ ಅಧಿಕಾರಿಗಳನ್ನು ಕೇಳಿದ್ರೆ, ಪೈಪ್ ಲೈನ್ ಮತ್ತು ರಸ್ತೆ ಅಗಲಿಕರಣ ಕಾಮಗಾರಿಗಳಿಂದ ಈ ದುಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಮ್ಯಾನ್ ಹೋಲ್ ರಿಪೇರಿ ಮಾಡುವಂತೆ ಸಂಬಂಧಪಟ್ಟವರಿಗೆ ಸೂಚಿಸಿದ್ದೇವೆ ಅಂತ ಒಬ್ಬರ ಮೇಲೊಬ್ರು ಹಾರಿಕೆ ಉತ್ತರ ಕೊಡ್ತಾರೆ.

ಒಟ್ಟಾರೆ ಒಳ ಚರಂಡಿ ಯೋಜನೆಯಿಂದಾಗಿ‌ಸ್ಮಾರ್ಟ್ ಸಿಟಿಯಾಗಬೇಕಿದ್ದ ಚಿತ್ರದುರ್ಗಕಳಪೆ ಕಾಮಗಾರಿಯಿಂದಾಗಿ ದುರ್ನಾಥದ ನಗರ ಎನಿಸಿದೆ.ಇನ್ನಾದ್ರು ಸಂಬಂಧಪಟ್ಟವರು ಎಚ್ಚೆತ್ತು ಮ್ಯಾನ್ ಹೋಲ್ ಗಳ ನಿರ್ವಹಣೆ ಮಾಡಬೇಕು. ಉಳಿದ ಕಾಮಗಾರಿಯನ್ನು ಆದಷ್ಟು ಬೇಗ‌ ಯೋಜನಾಬದ್ದವಾಗಿ ಮುಗಿಸಿ, ಜನರ ಯಾತನೆಗೆ ಬ್ರೇಕ್ ಹಾಕಬೇಕೆಂದು ಜನರ ಆಗ್ರಹ.

click me!