ಉಡುಪಿ: ನೆರವಿನ ನಿರೀಕ್ಷೆಯಲ್ಲಿ ಕ್ರೀಡಾಪಟು, ಗ್ರಾಮೀಣ ಪ್ರತಿಭೆಯ ಕನಸು ನನಸಾಗುತ್ತಾ?

Published : Oct 28, 2022, 03:46 PM IST
ಉಡುಪಿ: ನೆರವಿನ ನಿರೀಕ್ಷೆಯಲ್ಲಿ ಕ್ರೀಡಾಪಟು, ಗ್ರಾಮೀಣ ಪ್ರತಿಭೆಯ ಕನಸು ನನಸಾಗುತ್ತಾ?

ಸಾರಾಂಶ

Udupi News: ಭವ್ಯ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಬೇಕೆಂದು ಕನಸು ಹೊತ್ತಿರುವ ಯುವ ಪ್ರತಿಭೆಗೆ ಆರ್ಥಿಕ ಸಂಕಷ್ಟ ಎದುರಾಗಿದ್ದು, ಕ್ರೀಡಾಭಿಮಾನಿಗಳು ಮತ್ತು ದಾನಿಗಳಿಂದ ಸಹಾಯದ ನಿರೀಕ್ಷೆಯಲ್ಲಿದ್ದಾರೆ. 

ಉಡುಪಿ (ಅ. 28): ಈಕೆಗೆ ಮೀರಾಭಾಯಿ ಚಾನು ರೋಲ್ ಮಾಡೆಲ್. ಅವರಂತೆ ಭವ್ಯ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಬೇಕೆಂದು ಕನಸು ಹೊತ್ತಿರುವ ಯುವ ಪ್ರತಿಭೆಗೆ ಆರ್ಥಿಕ ಸಂಕಷ್ಟ ಎದುರಾಗಿದ್ದು, ಕ್ರೀಡಾಭಿಮಾನಿಗಳು ಮತ್ತು ದಾನಿಗಳಿಂದ ಸಹಾಯದ ನಿರೀಕ್ಷೆಯಲ್ಲಿದ್ದಾರೆ. ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪಡುಬಿದ್ರೆ ನಡ್ಸಾಲು ಗ್ರಾಮದ ನಿವಾಸಿಯಾಗಿರುವ ಯಶಸ್ವಿನಿ. ವಿ. ಭಂಡಾರಿ, (Yashaswini V Bhandary) ಪ್ರಸ್ತುತ ಮೂಡಬಿದ್ರೆ ಆಳ್ವಾಸ್ ಕಾಲೇಜಿನಲ್ಲಿ (Alvaʼs College) ಅಂತಿಮ ವರ್ಷದ ಬಿಬಿಎ (BBA) ವ್ಯಾಸಂಗ ಮಾಡುತ್ತಿದ್ದಾರೆ.  ವೈಟ್ ಲಿಫ್ಟಿಂಗ್ (Weight Lifting) ವಿಭಾಗದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಹಂಬಲ ಹೊಂದಿದ್ದಾರೆ. ಈವರೆಗೆ ವಿದ್ಯಾಭ್ಯಾಸ ನಡೆಸುತ್ತಿರುವಾಗ ಆಳ್ವಾಸ್ ಕಾಲೇಜು ಇವರನ್ನು ಬೆಂಬಲಿಸುತ್ತಾ ಬಂದಿತ್ತು. ಆದರೆ ಇದೀಗ ಸ್ವತಂತ್ರವಾಗಿ ಅವರು ಸ್ಪರ್ಧಾಕೂಟಗಳಲ್ಲಿ ಭಾಗವಹಿಸ ಬೇಕಾಗಿದೆ. ಹೆಚ್ಚು ಆರ್ಥಿಕ ವ್ಯವಸ್ಥೆಯನ್ನು ಬಯಸುವ, ಇವರ ಕ್ರೀಡಾ ಕ್ಷೇತ್ರಕ್ಕೆ ಸದ್ಯದಾನಿಗಳ ನೆರವಿನ ಅಗತ್ಯವಿದೆ.

ಅಕ್ಟೋಬರ್‌ 27 ರಿಂದ ನವೆಂಬರ್‌ 2 ರವರೆಗೆ ದೆಹಲಿಯ ಫರಿದಾಬಾದ್‌ನ ಮೋದಿ ನಗರದಲ್ಲಿ ಇಂಡಿಯನ್ ವೆಯ್ಟ್ ಲಿಫ್ಟಿಂಗ್ ಫೆಡರೇಶನ್ ಅವರು ಆಯೋಜಿಸಿರುವ ಖೆಲೋ ಯೂತ್ ಇಂಡಿಯಾ ವೆಯ್ಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಲು ತಾನು ಆಯ್ಕೆಯಾಗಿದ್ದು 70,000 ರೂ ಹಣದ ಅವಶ್ಯಕತೆ ಇದೆ. ಸ್ಪರ್ಧೆಗಾಗಿ ತಯಾರಿ ನಡೆಸಲು ಪ್ರತಿ ತಿಂಗಳು 20,000 ರೂ ಖರ್ಚಿದೆ ಎಂದು, ಯಶಸ್ವಿನಿ ಹೇಳುತ್ತಾರೆ.

ಅ.31 ರಂದು ಸ್ಪರ್ಧಾಕೂಟದಲ್ಲಿ‌ಭಾಗಿಯಾಗಲು ಸಾದ್ಯಾನಾ?:  ಅಕ್ಟೋಬರ್‌ 27 ರಿಂದ ನವೆಂಬರ್‌ 2 ರವರೆಗೆ ನಡೆಯುವ ಸ್ಪರ್ಧೆಯಲ್ಲಿ ಯಶಸ್ವಿನಿಯವರ ವಿಭಾಗದ ಸ್ಪರ್ಧೆಯು ಅಕ್ಟೋಬರ್‌ 31 ರಂದು ನಡೆಯಲಿದೆ. ಹೀಗಾಗಿ ಶನಿವಾರವೇ ಯಶಸ್ವಿನಿ ತಂದೆ ವಿನಯ್ ರವರೊಂದಿಗೆ ದೆಹಲಿಗೆ ತೆರಳಲಿದ್ದಾರೆ. ಯಶಸ್ವಿನಿ ಅವರ ತಂದೆ ವಿನಯ್ ಭಂಡಾರಿ, ಪಡುಬಿದ್ರೆಯಲ್ಲಿ ಕಟ್ಟಿಂಗ್ ಶಾಪ್ ನಡೆಸುತ್ತಾರೆ . ಆರ್ಥಿಕ ಸಂಕಷ್ಟದಲ್ಲಿರುವ ಈ ಕುಟುಂಬಕ್ಕೆ ಸದ್ಯ ನೆರವಿನ ಅವಶ್ಯಕತೆ ಇದೆ. 

ಈವರೆಗೆ ಆಳ್ವಾಸ್ ಕಾಲೇಜಿನಿಂದ ಅತ್ಯುತ್ತಮ ಬೆಂಬಲ ನೀಡಿದ್ದಾರೆ. ಅವರ ಬೆಂಬಲದೊಂದಿಗೆ ಮೈಸೂರಿನಲ್ಲಿ ನಡೆದ ದಸಾರ ಕ್ರೀಡಾಕೂಟದಲ್ಲಿ ಚಿನ್ನದ ಪದಕಗಳಿಸಿದ್ದೇನೆ. ಜೊತೆಗೆ ಮಂಗಳೂರು ವಿಶ್ವವಿದ್ಯಾನಿಲಯದ ಆಲ್ ಇಂಡಿಯಾ ಟೂರ್ನಮೆಂಟ್ ನಲ್ಲಿ ಭಾಗವಹಿಸಿದ್ದೇನೆ, ಕ್ರೀಡಾ ಕ್ಷೇತ್ರದಲ್ಲಿ ಮುಂದುವರಿಯಬೇಕಾದರೆ ದಾನಿಗಳ ನೆರವಿನ ಅವಶ್ಯಕತೆ ಇದೆ ಎಂದು ಯಶಸ್ವಿನಿ ನಿರೀಕ್ಷೆಯಲ್ಲಿದ್ದಾರೆ. ಸಹಾಯ ಮಾಡಲು ಇಚ್ಚಿಸುವವರು ಖಾತೆಗೆ ಹಣ ವರ್ಗಾಯಿಸಬಹುದು.

BANK: CANARA BANK
BRANCH: MOODABIDRI VIDYAGIRI
NAME: YASHASWINI V. BHANDARY
A/c No: 5268101010305
IFSC CODE: CNRB0005268
PHONE PAY: 8105463928, 9964142066

PREV
Read more Articles on
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!