ಉಡುಪಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಡಾ. ಎನ್‌. ಟಿ. ಭಟ್ ಅಧ್ಯಕ್ಷತೆ

Published : Nov 10, 2022, 04:35 PM ISTUpdated : Nov 10, 2022, 04:50 PM IST
 ಉಡುಪಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಡಾ. ಎನ್‌. ಟಿ. ಭಟ್ ಅಧ್ಯಕ್ಷತೆ

ಸಾರಾಂಶ

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು,  ಉಡುಪಿ ತಾಲೂಕು ಘಟಕದ ಸಾಹಿತ್ಯ ಸಮ್ಮೇಳನವು ನವಂಬರ್ 25 ಹಾಗೂ 26ರಂದು ಶ್ರೀ ಕ್ಷೇತ್ರ ಅಂಬಲಪಾಡಿ ಜನಾರ್ದನ ಮಹಾಕಾಳಿ ದೇವಸ್ಥಾನದ ಭವಾನಿ ಮಂಟಪದಲ್ಲಿ ನಡೆಯಲಿದೆ.

ವರದಿ: ಶಶಿಧರ್ ಮಾಸ್ತಿಬೈಲು.

ಉಡುಪಿ (ನ.10): ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು,  ಉಡುಪಿ ತಾಲೂಕು ಘಟಕದ ಸಾಹಿತ್ಯ ಸಮ್ಮೇಳನವು ನವಂಬರ್ 25 ಹಾಗೂ 26ರಂದು ಶ್ರೀ ಕ್ಷೇತ್ರ ಅಂಬಲಪಾಡಿ ಜನಾರ್ದನ ಮಹಾಕಾಳಿ ದೇವಸ್ಥಾನದ ಭವಾನಿ ಮಂಟಪದಲ್ಲಿ ನಡೆಯಲಿದೆ.  ನವೆಂಬರ್ , 25 ಶುಕ್ರವಾರ ಮಧ್ಯಾಹ್ನ ಗಂಟೆ 2:30 ಕ್ಕೆ ಕನ್ನಡ ಮತ್ತು ಸಂಸ್ಕೃತಿ  ಇಲಾಖೆಯ ಆಶಯದಲ್ಲಿ ಚಿಗುರು ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ಉದ್ಘಾಟನೆ.  ಗಂಟೆ 2.45ಕ್ಕೆ. ಮಕ್ಕಳ ಕವಿ ಗೋಷ್ಠಿ, ನೃತ್ಯ ಜನಪದ ಹಾಗೂ ಶಾಸ್ತ್ರೀಯ ಸಂಗೀತ, ಏಕಪಾತ್ರ ಅಭಿನಯ, ನಾಟಕ  ನಡೆಯಲಿದೆ. ನವಂಬರ್ 26 ಶನಿವಾರ ದಂದು ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗರ ನೇತೃತ್ವದಲ್ಲಿ ಬೆಳಗ್ಗೆ 8:30 ರಿಂದ ಧ್ವಜಾರೋಹಣ,  ಸಮ್ಮೇಳನ ಅಧ್ಯಕ್ಷರಾದ ಪ್ರೊಫೆಸರ್ ಎನ್ .ಟಿ ಭಟ್ ಅವರನ್ನು ಮೆರವಣಿಗೆ ಮೂಲಕ ಸ್ವಾಗತ,  ವಸ್ತು ಪ್ರದರ್ಶನ, ಛಾಯಾಚಿತ್ರ ಪ್ರದರ್ಶನ, ಪುಸ್ತಕ ಮಳಿಗೆಗಳ ಉದ್ಘಾಟನೆ ನಂತರ ಸಭಾ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನಡೆಯಲಿದೆ. ಬಳಿಕ ವಿಚಾರ ಗೋಷ್ಠಿಗಳು,  ಸಾಂಸ್ಕೃತಿಕ ವೈವಿಧ್ಯ,  ಸಮ್ಮೇಳನ ಅಧ್ಯಕ್ಷರೊಂದಿಗೆ ಸಂವಾದ, ಸಾಧಕರಿಗೆ ಮತ್ತು ಸಂಘ ಸಂಸ್ಥೆಗಳಿಗೆ ಗೌರವ ಅಭಿನಂದನೆ ನಡೆಯಲಿದ್ದು ಸಂಜೆ 4:30 ರಿಂದ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಉಡುಪಿ ತಾಲೂಕು ಘಟಕದ ಅಧ್ಯಕ್ಷ  ರವಿರಾಜ ಹೆಚ್. ಪಿ ಅವರು ತಿಳಿಸಿದ್ದಾರೆ.

 

ಕೊಪ್ಪಳ: ನುಡಿಜಾತ್ರೆಗೂ ‘ಗ್ರಹಣ’; ಜಿಲ್ಲಾ ಸಾಹಿತ್ಯ ಸಮ್ಮೇಳನ ಯಾವಾಗ?

13 ನೇ ಉಡುಪಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಧ್ಯಕ್ಷರಾಗಿ ಪ್ರೊ. ಎನ್ . ತಿರುಮಲೇಶ್ವರ ಭಟ್ ಅವರನ್ನು ಅವರ ಸ್ವಗೃಹದಲ್ಲಿ ನವೆಂಬರ್ 7ರಂದು ವೀಳ್ಯ ಕೊಡುವ ಮೂಲಕ ಸಮ್ಮೇಳನಕ್ಕೆ ಆಹ್ವಾನಿಸಲಾಯಿತು.

ಹಾವೇರಿ: 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ

ನವೆಂಬರ್ 25 ಮತ್ತು 26ರಂದು ಉಡುಪಿ ಅಂಬಲಪಾಡಿ ದೇವಸ್ಥಾನದ ಭವಾನಿ ಮಂಟಪದಲ್ಲಿ ನಡೆಯುವ 13ನೇ ಉಡುಪಿ ತಾಲೂಕು ಸಾಹಿತ್ಯ ಸಮ್ಮೇಳನವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಎರಡು ದಿನ ಬಹಳ ಅದ್ದೂರಿಯಾಗಿ  ನಡೆಸಲಾಗುವುದು.ಈ ಸಂದಭ೯ದಲ್ಲಿ ಜಿಲ್ಲಾಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ  , ನಿಕಟಪೂರ್ವ ಸಮ್ಮೇಳನ ಅಧ್ಯಕ್ಷರಾಗಿದ್ದ ಡಾ. ಗಣನಾಥ್ ಎಕ್ಕಾರು, ತಾಲೂಕು ಗೌರವ ಕಾರ್ಯದರ್ಶಿ ಜನಾರ್ದನ ಕೊಡವೂರು, ಹೆಬ್ರಿ ತಾಲೂಕು ಅಧ್ಯಕ್ಷ ಶ್ರೀನಿವಾಸ್ ಭಂಡಾರಿ , ಜಿಲ್ಲಾ ಹಾಗೂ ತಾಲೂಕು ಘಟಕದ ಪದಾಧಿಕಾರಿಗಳಾದ ಭುವನ ಪ್ರಸಾದ್ ಹೆಗ್ಡೆ, ಡಾ. ನಿಕೇತನ, ಮೋಹನ್ ಉಡುಪ , ಪೂರ್ಣಿಮಾ ಜನಾದ೯ನ್ , ನರಸಿಂಹಮೂರ್ತಿ ,ರಾಜೇಶ್ ಭಟ್ ಪಣಿಯಾಡಿ ,ಡಾ. ಪ್ರವೀಣ್ ,  ಎನ್.ಟಿ ಭಟ್ ಅವರ ಕುಟುಂಬದ ಸದಸ್ಯರು  ಉಪಸ್ಥಿತರಿದ್ದರು.

PREV
Read more Articles on
click me!

Recommended Stories

ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್