ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ ಮಾನಸಿಕ ಅಸ್ವಸ್ಥನ ಜೀವ ಉಳಿಸಿದ ವಿಶು ಶೆಟ್ಟಿ

By Sathish Kumar KH  |  First Published Jun 23, 2023, 8:27 PM IST

ಸ್ನೇಹಿತ ತನಗೆ ಮೋಸ ಮಾಡಿದನೆಂದು ಮಾನಸಿಕವಾಗಿ ಅಸ್ವಸ್ಥಗೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಯುವಕನ್ನು, ಉಡುಪಿಯ ಸಮಾಜ ಸೇವಕ ವಿಶು ಶೆಟ್ಟಿ ಅವರು ರಕ್ಷಿಸಿ ಚಿಕಿತ್ಸೆ ಕೊಡಿಸಿ ತಾಯಿಯೊಂದಿಗೆ ಸೇರಿಸಿದ್ದಾರೆ.


ಉಡುಪಿ (ಜೂ.23):  ಕಾಪು ಪರಿಸರದ ರಾಷ್ಟ್ರೀಯ  ಹೆದ್ದಾರಿಯಲ್ಲಿ ಚಲಿಸುತ್ತಿದ್ದ ವಾಹನಗಳ ಅಡಿಗೆ ಬಿದ್ದು, ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದ ದಾಂಂ‌‌ಡೇಲಿಯ ಮಾನಸಿಕ ಅಸ್ವಸ್ಥ ಯುವಕನಿಗೆ ಚಿಕಿತ್ಸೆ ಕೊಡಿಸಿ ಗುಣಮುಖನನ್ನಾಗಿಸಿ ತಾಯಿಗೆ ಹಸ್ತಾಂತರಿಸಿದ ಸಮಾಜ ಸೇವಕ ವಿಶು ಶೆಟ್ಟಿ ಅವರ ಸಾಮಾಜಿಕ ಕಳಕಳಿ ಮತ್ತೊಮ್ಮೆ ಪ್ರಶಂಸೆಗೆ ಪಾತ್ರವಾಗಿದೆ. 

ದಾಂಡೇಲಿಯ ನಿವಾಸಿ ಗುರುಪ್ರಸಾದ್ (35) ಎಂಬಾತನೇ ಈ ಅದೃಷ್ಟಶಾಲಿ ಯುವಕನಾಗಿದ್ದಾನೆ. ವಿಶು ಶೆಟ್ಟಿಯವರು ಯುವಕನನ್ನು ದೊಡ್ಡಣಗುಢ್ಡೆ ಡಾ.ಎ.ವಿ.ಬಾಳಿಗ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಚೇತರಿಸಿಕೊಂಡ ಯುವಕ ಮನೆ ವಿಳಾಸ ನೀಡಿದಾಗ, ಉಡುಪಿಗೆ ತಾಯಿ ಹಾಗೂ ಸಂಬಂಧಿ ಆಗಮಿಸಿ ಗುರುಪ್ರಸಾದ್ ನನ್ನು ಕರೆದೊಯ್ದಿದ್ದಾರೆ. ಯುವಕನಿಗೆ ಆಸ್ಪತ್ರೆ ಚಿಕಿತ್ಸೆಗೆ ಹಾಗೂ ಇನ್ನಿತರ ವೆಚ್ಚ ಸೇರಿ ಸುಮಾರು 15,000 ರೂ.ಆಗಿದ್ದು, ದಿ.ಉಷಾ ಚಂದ್ರಶೇಖರ ಶೆಟ್ಟಿ ಅವರ ಮಕ್ಕಳು 7,000 ರೂ. ಹಾಗೂ ಕೇಂದ್ರ ಸರಕಾರದ ನಿವೃತ್ತ ಸರಕಾರಿ ಅಧಿಕಾರಿ 5,000 ರೂ.ನೀಡಿದರೆ, ಉಳಿದ ಮೊತ್ತವನ್ನು ವಿಶು ಶೆಟ್ಟಿ ಅವರು ಭರಿಸಿ ಮಾನವೀಯತೆ ಮೆರೆದಿದ್ದಾರೆ. 

Latest Videos

undefined

ಹೊಟ್ಟೆ ನೋವೆಂದು ಆಸ್ಪತ್ರೆಗೆ ದಾಖಲಾದ ಕಾಲೇಜು ವಿದ್ಯಾರ್ಥಿನಿ, ಶವವಾಗಿ ಮನೆಗೆ ಹೋದಳು

ಸ್ವಲ್ಪ ಪ್ರೀತಿ ಸಿಕ್ಕರೆ ಮಾನಸಿಕ ಅಸ್ವಸ್ಥರು ಗುಣಮುಖ:  ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಅವರು ಈ ರೀತಿ ಅನೇಕ ಮಂದಿ ಅಸಹಾಯಕರಿಗೆ ನೆರವು ನೀಡಿದ್ದಾರೆ. ಅಸಹಾಯಕರನ್ನು ರಕ್ಷಿಸುವುದರ ಜೊತೆಗೆ ತನ್ನ ದುಡಿಮೆಯ ಒಂದು ಭಾಗವನ್ನು ಇವರಿಗೆಂದೇ ವ್ಯಯಿಸಿ, ಮರಳಿ ಮನೆಗೆ ಕಳುಹಿಸುತ್ತಿದ್ದಾರೆ. ಸ್ವಲ್ಪ ಪ್ರೀತಿ ಸಿಕ್ಕರೆ ಸಾಕು ಮಾನಸಿಕ ಅಸ್ವಸ್ಥ ಜನರು ಗುಣಮುಖರಾಗಿ ಮನೆ ಸೇರುವ ಈ ಪುಣ್ಯ ಕಾರ್ಯದಲ್ಲಿ ಅನೇಕ ಮಂದಿ ವಿಶು ಶೆಟ್ಟರ ಜೊತೆ ಕೈಜೋಡಿಸಿದ್ದಾರೆ.

ಮಿತ್ರನ ದ್ರೋಹದಿಂದ ಮಾನಸಿಕ ಅಸ್ವಸ್ಥತೆಗೆ ಜಾರಿದೆ: ತನ್ನ ಸ್ನೇಹಿತ ಕೊಟ್ಟ ನೋವು ನನ್ನನ್ನು  ಈ ಸ್ಥಿತಿಗೆ ತಂದಿತು ಎಂದು ಗುರುಪ್ರಸಾದ್ ತಿಳಿಸಿದ್ದಾನೆ. ಸ್ನೇಹಿತನಿಂದ ಮೋಸ ಹೋದ ಗುರುಪ್ರಸಾದ್ ಈಗ ಗುಣಮುಖನಾಗಿ ಮನೆಯವರ ಪ್ರೀತಿ ಹಂಬಲಿಸಿ ಹೋಗಿದ್ದಾನೆ. ಯುವಕನನ್ನು ಸಾರ್ವಜನಿಕರ ಸಹಾಯದಿಂದ ರಕ್ಷಿಸಿ,ದಲ್ಲದೆ ಮಾನಸಿಕ ಅಸ್ವಸ್ಥತೆಗೆ ಚಿಕಿತ್ಸೆ ಕೊಡಿಸಿ ಮತ್ತೆ ಸಮಾಜದ ಮುಖ್ಯವಾಹಿನಿಗೆ ಸೇರಿಸಿದ ಸಮಾಜ ಸೇವಕ ವಿಶು  ಶೆಟ್ಟಿ ಅವರ ಸೇವೆಗೆ ಯುವಕನ ಕುಟುಂಬ ತುಂಬು ಹೃದಯದ ಕೃತಜ್ಣತೆ ಸಲ್ಲಿಸಿದೆ. ಸಾರ್ವಜನಿಕ ವಲಯದಲ್ಲೂ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.

2 ತಿಂಗಳ ಬಳಿಕ ಕುಟುಂಬ ಸೇರಿದ ಮಾನಸಿಕ ಅಸ್ವಸ್ಥ ಯುವಕ: ವಿಶು ಶೆಟ್ಟಿ ಮಾನವೀಯ ಸ್ಪಂದನೆಗೆ ಪ್ರಶಂಸೆ

2 ತಿಂಗಳ ಬಳಿಕ ಕುಟುಂಬ ಸೇರಿದ ಮಾನಸಿಕ ಅಸ್ವಸ್ಥ ಯುವಕ : ಉಡುಪಿ (ಜೂ.15) : ಮಾನಸಿಕ ಅಸ್ವಸ್ಥತೆಗೆ ಗುರಿಯಾಗಿ ತನ್ನೂರನ್ನು ಮರೆತು ವಾರದ ಹಿಂದೆ ಉಡುಪಿಯ ಕಾಪುವಿಗೆ ಬಂದು ಅಸಹಾಯಕ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಛತ್ತೀಸ್‌ಗಢದ ನಿವಾಸಿ ಸಂಜಯ್ (40) ಉಡುಪಿಯ ಸಮಾಜ ಸೇವಕ ವಿಶು ಶೆಟ್ಟಿ(Vishu shetty social worker) ಅವರ ಮಾನವೀಯ ಸ್ಪಂದನೆಗೆ ಸ್ಪಂದಿಸಿ, 2ತಿಂಗಳ ಬಳಿಕ ತನ್ನ ಕುಟುಂಬವನ್ನು ಸೇರುವಲ್ಲಿ ಯಶಸ್ವಿಯಾಗಿದ್ದಾರೆ. ಸಂಜಯ್ ಅವರನ್ನು ಕಾಪು ಪೊಲೀಸರು ಹಾಗೂ ಸಾರ್ವಜನಿಕರ ನೆರವಿನಿಂದ ರಕ್ಷಿಸಿ, ದೊಡ್ಡಣಗುಡ್ಡೆಯ ಬಾಳಿಗಾ ಆಸ್ಪತ್ರೆ(Baliga hospital)ಯಲ್ಲಿ ಚಿಕಿತ್ಸೆ ಕೊಡಿಸಿ ಚಿಕಿತ್ಸೆಗೆ ಸ್ಪಂಧಿಸಿದ ಆತನನ್ನು ಕುಟುಂಬಕ್ಕೆ ಹಸ್ತಾಂತರ ಮಾಡಿದ ಸಮಾಜ ಸೇವಕ ವಿಶು ಶೆಟ್ಟಿ ಅವರ ಸಾಮಾಜಿಕ ಕಳಕಳಿ ಮತ್ತೊಮ್ಮೆ ಪ್ರಶಂಸೆಗೆ ಪಾತ್ರವಾಗಿದೆ.

click me!