ಮೃತ ಕಾನ್‌ಸ್ಟೇಬಲ್ ಅರ್ಜುನ್ ಶಂಕರ್ ಕುಟುಂಬಕ್ಕೆ 1.45 ಕೋಟಿ ರೂಪಾಯಿ ವಿಮೆ ಹಸ್ತಾಂತರ

Published : Aug 06, 2026, 05:47 AM IST
Udupi Constable

ಸಾರಾಂಶ

ಕರ್ತವ್ಯದಲ್ಲಿದ್ದಾಗ ರಸ್ತೆ ಅಪಘಾತದಲ್ಲಿ ಮೃತಪಟ್ಟ ಉಡುಪಿ ಜಿಲ್ಲಾ ಪೊಲೀಸ್ ಸಿಬ್ಬಂದಿ ಅರ್ಜುನ ಶಂಕರ ನೆಲ್ಲೂರ ಅವರ ಕುಟುಂಬಕ್ಕೆ ಎಸ್.ಬಿ.ಐ. ಪೊಲೀಸ್ ಸ್ಯಾಲರಿ ಪ್ಯಾಕೇಜ್ ಯೋಜನೆಯಡಿ 1.45 ಕೋಟಿ ರೂಪಾಯಿ ವಿಮಾ ಚೆಕ್ ಹಸ್ತಾಂತರಿಸಲಾಯಿತು. ಪೊಲೀಸ್ ಇಲಾಖೆ ಮತ್ತು ಎಸ್.ಬಿ.ಐ. ನಡುವಿನ ಒಪ್ಪಂದದಂತೆ ಈ ಸೌಲಭ್ಯವನ್ನು ಒದಗಿಸಲಾಗಿದ್ದು, ಇದರ ಸದುಪಯೋಗ ಪಡೆಯಲು ಇತರೆ ಸಿಬ್ಬಂದಿಗೆ ಕರೆ ನೀಡಲಾಗಿದೆ.

ಉಡುಪಿ: ಕರ್ತವ್ಯದಲ್ಲಿದ್ದಾಗ ರಸ್ತೆ ಅಪಘಾತದಲ್ಲಿ ಮೃತಪಟ್ಟ ಪೊಲೀಸ್ ಸಿಬ್ಬಂದಿ ಅರ್ಜುನ ಶಂಕರ ನೆಲ್ಲೂರ ಕುಟುಂಬಕ್ಕೆ ಎಸ್.ಬಿ.ಐ. ಪೊಲೀಸ್ ಸ್ಯಾಲರಿ ಪ್ಯಾಕೇಜ್ ಯೋಜನೆಯಡಿ 1,45,00,000 ರು. ಮೊತ್ತದ ವಿಮಾ ಚೆಕ್ ಹಸ್ತಾಂತರಿಸಲಾಯಿತು.

2023-24ನೇ ಸಾಲಿನಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಸಿ.ಎಸ್.ಪಿ. ಜಿಲ್ಲಾ ನಿಯಂತ್ರಣ ಕೊಠಡಿಯಲ್ಲಿ ಕಾರ್ಯನಿರ್ವಹಿಸುತ್ತಿದ ಅರ್ಜುನ ನೆಲ್ಲೂರ ಹಾವೇರಿಯಲ್ಲಿ ಕರ್ತವ್ಯದಲ್ಲಿದ್ದಾಗ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದರು.

ವೈಯಕ್ತಿಕ ಅಪಘಾತ ವಿಮೆಯ ಚೆಕ್‌ ಹಸ್ತಾಂತರ

ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸ್ಟೇಟ್‌ ಬ್ಯಾಂಕ್ ಆಫ್‌ ಇಂಡಿಯಾದ ಪ್ರಾದೇಶಿಕ ಪ್ರಬಂಧಕರಾದ ಬಿ. ಪ್ರಕಾಶ್ ಅಡಿಗ ಅವರು ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಉಪಸ್ಥಿತಿಯಲ್ಲಿ ಈ ವೈಯಕ್ತಿಕ ಅಪಘಾತ ವಿಮೆಯ ಚೆಕ್‌ ಹಸ್ತಾಂತರಿಸಿದರು.

ಪೊಲೀಸ್ ಇಲಾಖೆ ಮತ್ತು ಎಸ್.ಬಿ.ಐ. ನಡುವಿನ ಒಪ್ಪಂದದಂತೆ ಕರ್ತವ್ಯದ ವೇಳೆ ಮೃತಪಟ್ಟ ಸಿಬ್ಬಂದಿಯವರ ಕುಟುಂಬಕ್ಕೆ ಈ ವಿಮಾ ಸೌಲಭ್ಯ ನೀಡಲಾಗುತ್ತದೆ. ಇಂಥ ವಿಮಾ ಯೋಜನೆಗಳು ಎಲ್ಲ ಎಸ್‌.ಬಿ.ಐ. ಶಾಖೆಗಳಲ್ಲಿ ಲಭ್ಯವಿದ್ದು ಇದರ ಸದುಪಯೋಗವನ್ನು ಪೊಲೀಸ್ ಇಲಾಖೆಯ ಸಿಬ್ಬಂದಿ ಪಡೆದುಕೊಳ್ಳಬೇಕು ಎಂದು ಪ್ರಕಾಶ ಅಡಿಗ ವಿನಂತಿಸಿದರು.

ಇದನ್ನೂ ಓದಿ: ಸಚಿವನಾಗಿ ಮೊದಲ ಭೇಟಿಯಲ್ಲೇ 'ಕೊಡಗಿನ ಮೂಲ ಸಮಸ್ಯೆ' ಪರಿಹಾರಕ್ಕೆ ಕೈಹಾಕಿದ ಪಿ.ಎಂ. ನರೇಂದ್ರಸ್ವಾಮಿ!

ಬ್ಯಾಂಕಿನ ಮುಖ್ಯ ವ್ಯವಸ್ಥಾಪಕ ಕೀಳಂಜೆ ಶ್ರೀಕೃಷ್ಣರಾಜ ಭಟ್, ಮಲ್ಪೆ ಶಾಖೆ ವ್ಯವಸ್ಥಾಪಕ ರಾಜೇಶ್ ಗಂಗೊಳ್ಳಿ ಮತ್ತು ಇತರ ಅಧಿಕಾರಿಗಳಾದ ಶ್ರೀನಿವಾಸ್, ಪ್ರಣವ್ ಪೈ, ತನ್ಮಯ್, ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಮೃತ ಪೇದೆ ಕುಟುಂಬಸ್ಥರು ಇದ್ದರು.

ಇದನ್ನೂ ಓದಿ: Viral: ಒಂದೇ ಒಂದು ವಿಡಿಯೋ, ಬಿಎಂಟಿಸಿ ಚಾಲಕ ಸಸ್ಪೆಂಡ್! ವಿಡಿಯೋ ನೋಡಿ ಶಾಕ್‌ ಆದ ಬೆಂಗಳೂರಿನ ಜನ!

PREV
Read more Articles on
click me!

Recommended Stories

ಮಂತ್ರಿಗಿರಿ ಸಿಗದ್ದಕ್ಕೆ ನೋವಿಲ್ಲ, ಹೀಗ್ಯಾಕೆ ಮಾಡಿದರೆಂಬ ಬೇಸರ: ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ
ಸಚಿವನಾಗಿ ಮೊದಲ ಭೇಟಿಯಲ್ಲೇ 'ಕೊಡಗಿನ ಮೂಲ ಸಮಸ್ಯೆ' ಪರಿಹಾರಕ್ಕೆ ಕೈಹಾಕಿದ ಪಿ.ಎಂ. ನರೇಂದ್ರಸ್ವಾಮಿ!