ಮುಸ್ಲಿಮರಲ್ಲಿ ಭರವಸೆ ಮೂಡಿಸಿದ ಮೋದಿಯ ಆ ಮಾತು, ಪ್ರಧಾನಿಗೆ ಮೆಚ್ಚುಗೆ ಪತ್ರ

By Kannadaprabha News  |  First Published Apr 23, 2020, 8:24 AM IST

ಪ್ರಧಾನಿ ಮೋದಿ ಹೇಳಿಕೆಯು ಮುಸ್ಲಿಂ ಸಮುದಾಯದಲ್ಲಿ ಆತ್ಮವಿಶ್ವಾಸ ಮತ್ತು ಭರವಸೆ ಮೂಡಿಸಿದೆ ಎಂದು ದ.ಕ.ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್‌ ಕಮಿಟಿ ತಿಳಿಸಿದೆ. ಕೇಂದ್ರದ ನಡೆಯನ್ನು ಮೆಚ್ಚಿ ಪ್ರಧಾನಿಗೆ ಪತ್ರ ಬರೆದಿದೆ. ಹಾಗಾದ್ರೆ ಮೋದಿ ಹೇಳಿದ್ದೇನು..? ಇಲ್ಲಿ ಓದಿ.


ಮಂಗಳೂರು(ಏ.23): ಕೊರೋನಾ ವೈರಸ್‌ ತಡೆಗಟ್ಟುವ ಸಲುವಾಗಿ ಕೇಂದ್ರ ಸರ್ಕಾರ ತೆಗೆದುಕೊಂಡ ಕ್ರಮವನ್ನು ಶ್ಲಾಘಿಸಿರುವ ದ.ಕ.ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್‌ ಕಮಿಟಿ ಪ್ರಧಾನಿ ನರೇಂದ್ರ ಮೋದಿ, ಕೊರೋನಾ ರೋಗವು ಧರ್ಮ ಆಧಾರಿತವಲ್ಲ ಎಂದು ಹೇಳಿಕೆ ನೀಡಿರುವುದನ್ನು ಸ್ವಾಗತಿಸಿದೆ.

ಈ ಬಗ್ಗೆ ಸೆಂಟ್ರಲ್‌ ಕಮಿಟಿ ಅಧ್ಯಕ್ಷ ಹಾಜಿ ಮುಹಮ್ಮದ್‌ ಮಸೂದ್‌, ಪ್ರಧಾನಿಗೆ ಪತ್ರ ಬರೆದು, ನೀವು ತೆಗೆದುಕೊಂಡ ನಿರ್ಧಾರಗಳಿಂದಾಗಿ ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹಾಗೂ ಸಾವಿನ ಸಂಖ್ಯೆ ಕನಿಷ್ಠ ಮಟ್ಟದಲ್ಲಿದೆ.

Tap to resize

Latest Videos

ಗರ್ಭಿಣಿಯರಿಗೆ, 5 ವರ್ಷದೊಳಗಿನ ಮಕ್ಕಳಿಗೆ ಇಂದಿನಿಂದ ಚುಚ್ಚುಮದ್ದು

ಈ ನಡುವೆ, ಭಾರತದಲ್ಲಿ ವೈರಸ್‌ ಹರಡುವುದಕ್ಕೆ ಮುಸ್ಲಿಂ ಸಮುದಾಯವನ್ನು ದೂಷಿಸಲು ಪ್ರಯತ್ನಿಸುತ್ತಿರುವ ಕೆಲವು ದುರದೃಷ್ಟಕರ ಘಟನೆಗಳ ಬಗ್ಗೆ ತಾವು ಕೋವಿಡ್‌-19 ಮಹಾಮಾರಿ ಪ್ರತಿಯೊಬ್ಬರಿಗೂ ಸಮಾನವಾಗಿ ಬಾಧಿಸುತ್ತದೆ ಮತ್ತು ಈ ಸೋಂಕು ಹರಡುವಾಗ ಯಾವುದೇ ಜಾತಿ, ಮತ, ಧರ್ಮ, ಭಾಷೆ ಅಥವಾ ಗಡಿಯನ್ನು ನೋಡುವುದಿಲ್ಲ’ ಎಂಬ ಹೇಳಿಕೆಗೆ ನಾನು ಅಭಾರಿಯಾಗಿರುವೆ.

ವಿಶ್ವದ 108 ರಾಷ್ಟ್ರಗಳಿಗೆ ಪ್ರಧಾನಿ ನರೇಂದ್ರ ಮೋದಿ ನೆರವಿನ ಹಸ್ತ

ಈ ಹೇಳಿಕೆಯು ಮುಸ್ಲಿಂ ಸಮುದಾಯದಲ್ಲಿ ಆತ್ಮವಿಶ್ವಾಸ ಮತ್ತು ಭರವಸೆಯ ಭಾವವನ್ನು ಮೂಡಿಸಿದೆ. ನಿಮ್ಮ ನಾಯಕತ್ವದಲ್ಲಿ ನಾವು ಈ ಪರಿಸ್ಥಿತಿಯನ್ನು ಸಮರ್ಥವಾಗಿ ದಾಟಲಿದ್ದೇವೆ ಎಂಬ ಭರವಸೆಯನ್ನು ನಾನು ಹೊಂದಿದ್ದೇನೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

click me!