ಬದಲಾದ ಕೆರೆ ನೀರಿನ ಬಣ್ಣ : ಉಸಿರು ಕಟ್ಟುತ್ತಿದೆ ವಿದ್ಯಾರ್ಥಿಗಳಿಗೆ

Kannadaprabha News   | Asianet News
Published : Dec 17, 2019, 09:48 AM IST
ಬದಲಾದ ಕೆರೆ ನೀರಿನ ಬಣ್ಣ : ಉಸಿರು ಕಟ್ಟುತ್ತಿದೆ ವಿದ್ಯಾರ್ಥಿಗಳಿಗೆ

ಸಾರಾಂಶ

ಹಾಸನದಲ್ಲಿ ಕೆರೆಯ ನೀರು ಸಂಪೂರ್ಣವಾಗಿ ಹಸಿರು ಬಣ್ಣಕ್ಕೆ ತಿರುಗಿದೆ. ಇಲ್ಲಿಂದ ಬರುತ್ತಿರುವ ವಾಸನೆಯಿಂದ ವಿದ್ಯಾರ್ಥಿಗಳು ಉಸಿರಾಡಲೂ ಕಷ್ಟಪಡುವಂತಾಗಿದೆ.

ಚಿಕ್ಕಮಗಳೂರು [ಡಿ.17]:  ಕೆರೆಗೆ ರಾಸಾಯನಿಕ ಸೇರ್ಪಡೆಯಾಗಿ ಇಲ್ಲಿರುವ ಶಾಲಾ ಮಕ್ಕಳು ಉಸಿರಾಡಲೂ ಕಷ್ಟಪಡುವಂತಹ ಸ್ಥಿತಿ ಚಿಕ್ಕಮಗಳೂರು ಜಿಲ್ಲೆಯಲ್ಲಾಗಿದೆ. 

ಚಿಕ್ಕಮಗಳೂರು ಜಿಲ್ಲೆಯ ಆರದವಳ್ಳಿಯ ಶಾಲೆಯ ಬಳಿಯಲ್ಲಿರುವ ಕೆರೆ ರಾಸಾಯನಿಕ ಸೇರ್ಪಡೆಯಾಗಿದ್ದು ಇದರಿಂದ ಕೆರೆಯಿಂದ ಸಹಿಸಲಸಾಧ್ಯವಾದ ರೀತಿಯಲ್ಲಿ ವಾಸನೆ ಬರುತ್ತಿದೆ. 

ಇದರಿಂದ ಮಕ್ಕಳಿಗೆ ಉಸಿರಾಟಕ್ಕೂ ಸಮಸ್ಯೆಯಾಗುತ್ತಿದ್ದು, ಸಾಂಕ್ರಾಮಿಕ ಹರಡುವ ಭೀತಿ ಎದುರಾಗಿದೆ. ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದು, ಕೆರೆ ಸಂಪೂರ್ಣವಾಗಿ ತುಂಬಿದ್ದು ಈ ನಿಟ್ಟಿನಲ್ಲಿ ಮೀನು ಬೆಳವಣಿಗೆಗಾಗಿ ರಾಸಾಯನಿಕ ಮಿಶ್ರಣ ಮಾಡಲಾಗಿದೆ. 

ಸೋಶಿಯಲ್ ಮೀಡಿಯಾ ಆಯ್ತು, ದತ್ತಪೀಠದಲ್ಲೂ ಹೌದು ಹುಲಿಯಾ ಹವಾ!...

ರಾಸಾಯನಿಕ ಮಿಶ್ರಣದಿಂದ ಕೆರೆ ನೀರು ಸಂಪೂರ್ಣವಾಗಿ ಮಲಿನವಾಗಿದ್ದು, ಹಸುಮ ಕರುಗಳಿಗೂ ಈ ನೀರನ್ನು ಕುಡಿಯಲು ಆಗುತ್ತಿಲ್ಲ. ಇದರಿಂದ ಇಲ್ಲಿರುವ ಸುತ್ತಮುತ್ತಲ ಮನೆಗಳ ನಿವಾಸಿಗಳು ಹಾಗೂ ಇಲ್ಲಿ ಸಂಚರಿಸುವವರಿಗೂ ಉಸಿರು ಕಟ್ಟುವ ವಾತಾವರಣ ನಿರ್ಮಾಣವಾಗುತ್ತಿದೆ. 

ರಾಸಾಯನಿಕದಿಂದಾಗಿ ಸಣ್ಣಪುಟ್ಟ ಮೀನುಗಳು ಹಾಗೂ ಹಲವು ರೀತಿಯ ಜಲಚರಗಳು ಸಾವಿಗೀಡಾಗಿದ್ದು, ರೋಗ ಹರಡುವ ಭೀತಿ ಎದುರಾಗಿದೆ. ಅಲ್ಲದೇ ಕೆರೆಯ ನೀರಿನ ಬಣ್ಣ ಸಂಪೂರ್ಣವಾಗಿ ಹಸಿರು ಬಣ್ಣಕ್ಕೆ ತಿರುಗಿದ್ದು, ಆತಂಕಕ್ಕೆ ಕಾರಣವಾಗಿದೆ.

PREV
click me!

Recommended Stories

ಗೃಹ ಲಕ್ಷ್ಮೀ ಅಡಿ 1.24 ಕೋಟಿ ಸ್ತ್ರೀಯರಿಗೆ ₹1.54 ಕೋಟಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು : ಹೊಸ ಮಾರ್ಗಗಳಿಗೆ ಬರಲಿವೆ ಚಾಲಕ ರಹಿತ ರೈಲು