ವಿಕಿಪೀಡಿಯಾಕ್ಕೆ ಉಡುಪಿ ಕಾಲೇಜು ವಿದ್ಯಾರ್ಥಿನಿಯರ ಕನ್ನಡ ಡಿಂಡಿಮ..!

By Kannadaprabha News  |  First Published Nov 1, 2022, 11:36 AM IST

ಕನ್ನಡ ವಿಕಿಪೀಡಿಯಾಕ್ಕೆ 500ಕ್ಕೂ ಹೆಚ್ಚು ಹೊಸ ಲೇಖನಗಳನ್ನು ಸೇರಿಸಿದ ಜಿ. ಶಂಕರ್‌ ಸರ್ಕಾರಿ ಮಹಿಳಾ ಕಾಲೇಜಿನ 27 ವಿದ್ಯಾರ್ಥಿನಿಯರು 


ಸುಭಾಶ್ಚಂದ್ರ ಎಸ್‌.ವಾಗ್ಳೆ

ಉಡುಪಿ(ನ.01):  ಕಳೆದ 6 ತಿಂಗಳಿಂದ ಉಡುಪಿಯ ಜಿ. ಶಂಕರ್‌ ಸರ್ಕಾರಿ ಮಹಿಳಾ ಕಾಲೇಜಿನ 27 ವಿದ್ಯಾರ್ಥಿನಿಯರು ಕನ್ನಡ ವಿಕಿಪೀಡಿಯಾಕ್ಕೆ 500ಕ್ಕೂ ಹೆಚ್ಚು ಹೊಸ ಲೇಖನಗಳನ್ನು ಸೇರಿಸಿದ್ದಾರೆ. ಜಗತ್ತಿನಾದ್ಯಂತ ಅವುಗಳನ್ನು 6 ಲಕ್ಷಕ್ಕೂ ಹೆಚ್ಚು ಮಂದಿ ಓದಿದ್ದಾರೆ.

Tap to resize

Latest Videos

undefined

ಇದುವರೆಗೆ ಒಂದೂ ಲೇಖನವನ್ನು ಬರೆಯದ, ಮನೆಯಲ್ಲಿ ಇಂಟರ್‌ನೆಟ್‌, ಕಂಪ್ಯೂಟರ್‌ ಇತ್ಯಾದಿ ಯಾವುದೇ ಸೌಲಭ್ಯಗಳಿಲ್ಲದ ಗ್ರಾಮೀಣ ಪ್ರದೇಶಗಳಿಂದ ಮೂಲಗಳನ್ನು ಹುಡುಕಿ, ಅಧ್ಯಯನ- ಅನುವಾದ ಮಾಡಿ, ನಿಖರ ಮಾಹಿತಿ ಸಂಗ್ರಹಿಸಿ ಈ ವಿದ್ಯಾರ್ಥಿನಿಯರು ಬರೆದ ಲೇಖನಗಳಿವು. ಗಣಕಯಂತ್ರದಲ್ಲಿ ಕನ್ನಡ ಎಂದಾಕ್ಷಣ ನೆನಪಾಗುವ ಪವನಜ ಯು.ಬಿ. ಅವರು ಈ ವಿದ್ಯಾರ್ಥಿನಿಯರ ಹಿಂದಿರುವ ಪ್ರೇರಕಶಕ್ತಿ.

ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷರ ಮನೆಯಲ್ಲಿ ಕನ್ನಡ ನಿತ್ಯೋತ್ಸವ..!

ಇದರಿಂದ ಏನು ಲಾಭ?:

ವಿಕಿಪೀಡಿಯಾ ಒಂದು ಸ್ವತಂತ್ರ, ಮುಕ್ತ ವಿಶ್ವಕೋಶ. ಇದಕ್ಕೆ ಯಾರು ಬೇಕಾದರೂ ಮಾಹಿತಿ ಸೇರಿಸಬಹುದು, ಇದೇ ವಿಕಿಪೀಡಿಯಾದಿಂದ ಕನ್ನಡ ಭಾಷೆ ಉಳಿಸಿ ಬೆಳೆಸುವುದಕ್ಕೆ, ಪ್ರಪಂಚ ಜ್ಞಾನವನ್ನು ಕನ್ನಡ ಭಾಷೆಯಲ್ಲಿ ತರುವುದಕ್ಕೆ ಸಾಧ್ಯವಿದೆ ಎನ್ನುವ ಪವನಜ ಅದನ್ನು ಈ ವಿದ್ಯಾರ್ಥಿಗಳ ಮೂಲಕ ಸಾಧಿಸಿ ತೋರಿಸಿದ್ದಾರೆ. ಇದರಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರು, ಮಹಿಳಾ ಸಾಧಕಿಯರು, ದೇಶ-ವಿದೇಶಗಳ ಧ್ವಜಗಳು, ಭಾರತೀಯ ಅಡುಗೆ... ಹೀಗೆ ವಿಷಯ ವಿಫುಲ ವೈವಿಧ್ಯಮಯ ಈ ಲೇಖನಗಳನ್ನು ಆರೇ ತಿಂಗಳಲ್ಲಿ 6.73 ಲಕ್ಷ ಮಂದಿ ಓದಿದ್ದಾರೆ.
 

click me!