ಕರ್ನಾಟಕದಲ್ಲೇ ಬೆಳಗಾವಿ ಉಳಿಸಲು ಹೋರಾಡಿದ್ದ ನಾಗನೂರು ಶ್ರೀ

By Kannadaprabha News  |  First Published Nov 1, 2022, 11:18 AM IST

ಫಜಲ್‌ ಅಲಿ, ಮಹಾಜನ್‌ ಸಮಿತಿ ಮುಂದೆ ಸಮರ್ಥ ವಾದ, ಮರಾಠಿ ಪುಂಡರ ಹತ್ತಿಕ್ಕಲು ವಿದ್ಯಾರ್ಥಿಗಳಿಗೆ ಲಾಠಿ ಕೊಟ್ಟಿದ್ದರು


ಸಿ.ಎ.ಇಟ್ನಾಳಮಠ

ಅಥಣಿ(ನ.01):  ದೇಶದ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ಅಗ್ರಗಣ್ಯರಲ್ಲಿ ಬೆಳಗಾವಿ ರುದ್ರಾಕ್ಷಿ ಮಠದ ನಾಗನೂರಿನ ಡಾ. ಶಿವಬಸವ ಸ್ವಾಮೀಜಿಯೂ ಒಬ್ಬರು. ಅವರು ಸ್ವಾತಂತ್ರ್ಯಕ್ಕೆ ಎಷ್ಟು ಶ್ರಮಿಸಿದ್ದರೋ ಅಷ್ಟೇ ಶ್ರಮವಹಿಸಿ ಗಡಿ ನಾಡುವ ಬೆಳಗಾವಿಯಲ್ಲಿ ಕನ್ನಡ ಕಟ್ಟುವ ಕೆಲಸ ಮಾಡಿದ್ದಾರೆ.

Tap to resize

Latest Videos

ಆಗ ಕನ್ನಡ-ಮರಾಠಿಗರ ಭಾಷಾ ಏಕೀಕರಣ ದನಿ ಮುಗಿಲೆತ್ತರಕ್ಕೆ ಏರಿತ್ತು. ಕೇಂದ್ರ ಸರ್ಕಾರ ಫಜಲ್‌ ಅಲಿ ಅವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ನೇಮಿಸಿತ್ತು. ಈ ಸಮಿತಿ ಬೆಳಗಾವಿಗೆ ಭೇಟಿ ನೀಡಿದ್ದಾಗ ಸಮಿತಿಯ ಮುಂದೆ ಶಿವಬಸವ ಸ್ವಾಮೀಜಿಯವರು ತಮ್ಮ ಹೇಳಿಕೆಯನ್ನು ಕನ್ನಡಿಗರ ಪರವಾಗಿ ಸಮಿತಿಗೆ ಅರ್ಥವಾಗುವಂತೆ ಮಂಡಿಸಿದರು. ಸ್ವಾಮೀಜಿ ಅವರ ಹೇಳಿಕೆಯಲ್ಲಿನ ಭೌಗೋಳಿಕ, ಐತಿಹಾಸಿಕ, ಸಾಮಾಜಿಕ ಕನ್ನಡ ಭಾಷೆಯ ಅಂಶಗಳು ಸಮಿತಿ ಮೇಲೆ ಪ್ರಭಾವ ಬೀರಿದವು. ಸ್ವಾಮೀಜಿ ಅವರ ಹೇಳಿಕೆಗೆ ಸಮನಾಂತರವಾಗಿ ಮರಾಠ ಭಾಷಿಕರ ಹೇಳಿಕೆಗಳು ಬರಲೇ ಇಲ್ಲ. ಈ ವಿಷಯವನ್ನು ಸಮಿತಿಯವರು ಪರೋಕ್ಷವಾಗಿ ಪ್ರಸ್ತಾಪಿಸಿದರು. ಆಗಲೇ ಬೆಳಗಾವಿ ಮರಾಠಿಗರಿಗೆ ಧಕ್ಕುವುದಿಲ್ಲ ಎಂಬ ಭೀತಿ ಆರಂಭವಾಯಿತು.

ಚಿಕ್ಕೋಡಿ: ಕರ್ನಾಟಕ ರಾಜ್ಯೋತ್ಸವದಂದು ಡಾ. ರಾಜ್‌ ವೇಷ ಧರಿಸುವ ಬಸ್‌ ಕಂಡಕ್ಟರ್‌..!

1956 ನವೆಂಬರ್‌ 1ರಂದು ಭಾಷಾವಾರು ಪ್ರಾಂತ್ಯಗಳು ಉದಯವಾದವು. ಮೈಸೂರು ರಾಜ್ಯ ಎಂಬ ಹೆಸರಿನಲ್ಲಿ ಕರ್ನಾಟಕವೂ ಉದಯಿಸಿತು. ಅದೇ ದಿನ ಬೆಳಗಾವಿಯಲ್ಲಿ ಮರಾಠಿಗರು ಕರಾಳದಿನವನ್ನು ಆಚರಿಸಿ, ಅನೇಕ ವಿಧ್ವಂಸಕ ಕಾರ್ಯಗಳನ್ನು ಮಾಡಿದ್ದರು. ದುಷ್ಕೃತ್ಯದ ಭಾಗವಾಗಿ ಬೆಳಗಾವಿಯ ರಾಮದೇವ ಗಲ್ಲಿ, ಮಾರುತಿ ಗಲ್ಲಿಗಳಲ್ಲಿ ಕೆಲ ಅಂಗಡಿಗಳಿಗೆ ದುಷ್ಕರ್ಮಿಗಳು ಬೆಂಕಿ ಇಟ್ಟರು. ಮರಾಠಿಗರು ಗಲಾಟೆ ಮಾಡಲು ಬಂದರೆ ಅದಕ್ಕೆ ಪ್ರತಿಯಾಗಿ ಉತ್ತರ ನೀಡಲು ಪ್ರತಿ ವಿದ್ಯಾರ್ಥಿ ಕೈಯಲ್ಲಿ ಒಂದೊಂದು ಲಾಠಿ ಕೊಟ್ಟು ಸ್ವಾಮೀಜಿ ಸಜ್ಜಾಗಿಸಿದ್ದರು. ಇದಾದ ಮೇಲೆ ಗಡಿ ಸಮಸ್ಯೆ ಉದ್ಭವವಾಯಿತು. ಆಗ ಮಹಾಜನ ಆಯೋಗ ರಚನೆ ಮಾಡಲಾಯಿತು. ಈ ಸಮಿತಿಯೂ ಬೆಳಗಾವಿಗೆ ಭೇಟಿ ನೀಡಿ, ಡಾ.ಶಿವಬಸವ ಸ್ವಾಮೀಜಿಯವರ ಹೇಳಿಕೆ ಪಡೆಯಿತು. ಈ ಆಯೋಗದ ವರದಿ ಸಹ ಕರ್ನಾಟಕದ ಪರವಾಗಿಯೇ ಬಂದಿತು.
 

click me!