ಮಟ್ಟುಗುಳ್ಳ ತರಕಾರಿ ಬೆಳೆಯುವಲ್ಲಿ ಕಲ್ಲಂಗಡಿ ಬೆಳೆದು ಸೈ ಎನಿಸಿಕೊಂಡ ಉಡುಪಿ ರೈತ

Published : Mar 24, 2022, 06:12 PM IST
 ಮಟ್ಟುಗುಳ್ಳ ತರಕಾರಿ ಬೆಳೆಯುವಲ್ಲಿ ಕಲ್ಲಂಗಡಿ ಬೆಳೆದು ಸೈ ಎನಿಸಿಕೊಂಡ ಉಡುಪಿ ರೈತ

ಸಾರಾಂಶ

ಮಟ್ಟುಗುಳ್ಳ ಪೇಟೆಂಟ್ ಪಡೆದ ಕರಾವಳಿ ಏಕಮಾತ್ರ ತರಕಾರಿ ಕೂಡ ಆಗಿದೆ. ಆದ್ರೆ ಪ್ರಯೋಗ ಶೀಲ ಪ್ರಗತಿಪರ ಕೃಷಿ ಯಶೋಧರ ಅವರು, ಕಲ್ಲಂಗಡಿ ಕೃಷಿ ಮಾಡಿ ಸೈ ಎನಿಸಿಕೊಂಡಿದ್ದಾರೆ.

ವರದಿ: ಶಶಿಧರ ಮಾಸ್ತಿಬೈಲು,  ಏಷಿಯಾನೆಟ್ ಸುವರ್ಣ ನ್ಯೂಸ್

ಉಡುಪಿ(ಮಾ.24): ಅದು ಪೇಟೆಂಟ್ ಪಡೆದ ಮಟ್ಟುಗುಳ್ಳ ತರಕಾರಿ ಬೆಳೆಯುವ ಭೂಮಿ. ಮಟ್ಟುಗುಳ್ಳ ಬಿಟ್ರೆ ಆ ಭೂಮಿಯಲ್ಲಿ ಬೇರೆ ತರಕಾರಿ ಕೃಷಿ ಮಾಡುತ್ತಿರಲಿಲ್ಲ. ಆದ್ರೆ ಇತ್ತೀಚಿನ ವರ್ಷಗಳಲ್ಲಿ, ಪ್ರಯೋಗಶೀಲ ರೈತರೊಬ್ಬರು ಕಲ್ಲಂಗಡಿ (Watermelon) ಕೃಷಿ ಮಾಡಿ ಖುಷಿ ಕಂಡಿದ್ದಾರೆ. ಕರಾವಳಿಯ ಮಣ್ಣಲ್ಲೂ ಕಲ್ಲಂಗಡಿ ಬೆಳೆಯಬಹುದು ಅಂತ ತೋರಿಸಿಕೊಟ್ಟಿದ್ದಾರೆ..

ಕರಾವಳಿ (Costal) ಮಣ್ಣಲ್ಲಿ ಕೆಲವೇ ಬಗೆಯ ತರಕಾರಿ (Vegitables), ಹಣ್ಣುಗಳನ್ನು (Fruits) ಮಾತ್ರ ಬೆಳೆಯುತ್ತಾರೆ. ಈ ಮಣ್ಣಿಗೆ ಇದೇ ಬೆಳೆ ಅಂತ ಕೆಲ ರೈತರು ಸೀಮಿತ ಮಾಡಿಕೊಳ್ಳುದಿದೆ.  ಆದ್ರೆ ಇತ್ತೀಚಿನ ವರ್ಷಗಳಲ್ಲಿ ಪ್ರಯೋಗಶೀಲ ರೈತರು ಹೊಸ ಹೊಸ ಬೆಳೆಯನ್ನು ಬೆಳೆದು ಸೈ ಅನ್ನಿಸಿಕೊಂಡ ಉದಾಹರಣೆ ಕಾಣಿಸಿಗುತ್ತಿದೆ..

ಮಟ್ಟುವಿನ ಈ ಗದ್ದೆಗಳಲ್ಲಿ ಹಿಂದೆ ಮಟ್ಟುಗುಳ್ಳವನ್ನು ಮಾತ್ರ ಬೆಳೆಯುತ್ತಿದ್ದರು. ಮಟ್ಟುಗುಳ್ಳ ಪೇಟೆಂಟ್ ಪಡೆದ ಕರಾವಳಿ ಏಕಮಾತ್ರ ತರಕಾರಿ ಕೂಡ ಆಗಿದೆ. ಆದ್ರೆ ಹೆಚ್ಚಿನ ಮಳೆ ಹಾಗೂ ಹವಾಮಾನ ವೈಪರೀತ್ಯದಿಂದ ಕೆಲವೊಮ್ಮೆ ಮಟ್ಟುಗುಳ್ಳ ಇಳುವರಿ ಸರಿಯಾಗಿ ಸಿಗ್ತಾ ಇರ್ಲಿಲ್ಲ. ಹೀಗಾಗಿ ಪ್ರಯೋಗ ಶೀಲ ಪ್ರಗತಿಪರ ಕೃಷಿ ಯಶೋಧರ ಅವರು, ಕಲ್ಲಂಗಡಿ ಕೃಷಿ ಕೈ ಹಾಕಿದ್ರು ಮೊದ ಮೊದಲು ಸಣ್ಣ ಪ್ರದೇಶದಲ್ಲಿ ಕಲ್ಲಂಗಡಿ ಕೃಷಿ ಮಾಡಿ, ಸದ್ಯ ಎಕರೆ ಗಟ್ಟಲೇ ಭೂಮಿಯಲ್ಲಿ ಕಲ್ಲಂಗಡಿ ಬೆಳೆಯುತ್ತಿದ್ದಾರೆ.  ಉಡುಪಿ ಮಂಗಳೂರು ಹಾಗೂ ಬೆಂಗಳೂರಗಳಲ್ಲಿ ಕರಾವಳಿ ಕಲ್ಲಂಗಡಿ ಅಂತ ಹೆಚ್ಚಿನ ಬೇಡಿಕೆಯಿದೆ.

KARNATAKA CET SCHEDULE 2022 ಮಾರ್ಚ್ 25 ರಂದು ವೇಳಾಪಟ್ಟಿ ಪ್ರಕಟ

ಯಶೋಧರ ಅವರ ಕಲ್ಲಂಗಡಿ ಪ್ರಯೋಗ ನೋಡಿದ, ಊರಿನ ಅಕ್ಕಪಕ್ಕದ ಕೃಷಿಕರು ತಾವು ಕೂಡ ಕಲ್ಲಂಗಡಿ ಬೆಳೆ ಮಾಡುತ್ತಿದ್ದಾರೆ. ಒಂದು ಕಡೆ ಸಮುದ್ರ ಮತ್ತೊಂದು ಕಡೆ ನದಿ ಇರುವ ಮಟ್ಟುವಿನ ಉಪ್ಪು ನೀರುಸಿಹಿ ನೀರು ಮಿಶ್ರಿತವಾದ ಭೂಮಿಯಲ್ಲಿ ಬೆಳೆದ ಕಲ್ಲಂಗಡಿ ಅತ್ಯಂತ ರುಚಿಕರವಾಗಿದೆ. ಸಾವಯವವಾಗಿ ಬೆಳೆಯುವ ಕಲ್ಲಂಗಡಿಯನ್ನು ವ್ಯಾಪಾರಿಗಳು ಮನೆಯಿಂದ ಖದೀರಿ ಮಾಡುತ್ತಿದ್ದಾರೆ..

ಒಟ್ನಲ್ಲಿ, ಕೇವಲ ಮಟ್ಟುಗುಳ್ಳ ತರಕಾರಿ ಬೆಳೆಗೆ ಮಾತ್ರ ಸೀಮಿತ ಆಗಿದ್ದ ಮಟ್ಟುವಿನ ಗದ್ದೆಗಳಲ್ಲಿ ಸದ್ಯ ಕಲ್ಲಂಗಡಿ ಹಣ್ಣು ಕಾಣಿಸಿಕೊಳ್ಳುತ್ತಿದೆ. ರೈತರು ಒಂದೇ ಬಗೆಯ ತರಕಾರಿ ಮಾಡುದಕ್ಕಿಂತ ಬೇರೆ ಬೇರೆ ಬೆಳೆಯ ಬಗ್ಗೆಯೂ ಯೋಚನೆ ಮಾಡಿದ್ರೆ ಉತ್ತಮ ಆದಾಯ ಗಳಿಸಬಹುದು.

ASIANET SUVARNA NEWS IMPACT ಮಂಗಳೂರು ಭೂ ಮಾಫಿಯಾದ ಬಿಲ್ಡರ್ ವಿರುದ್ದ FIR

PREV
Read more Articles on
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ