150ರ ಬದಲು 550 ಕೊಟ್ಟು ಚಿತ್ರದುರ್ಗದ ಮಹಿಳೆಯಿಂದ ಈರುಳ್ಳಿ ಖರೀದಿಸಿದ ಉಡುಪಿಯ ರೈತ

By Kannadaprabha News  |  First Published May 1, 2020, 9:44 AM IST

ಚಿತ್ರದುರ್ಗದಲ್ಲಿ ಮಹಿಳೆಯೊಬ್ಬರು ಬೆಳೆದ ಈರುಳ್ಳಿ ಮೂಟೆಗೆ 150 ರು.ಗೂ ಕೊಳ್ಳುವವರಿಲ್ಲದೆ ಕೊಳೆತು ಹೋಗುತಿದ್ದಾಗ ಉಡುಪಿಯ ರೈತರೊಬ್ಬರು ಮೂಟೆಗೆ 550 ಕೊಟ್ಟು ಖರೀದಿಸಿ ಮಾನವೀಯತೆ ಮೆರೆದಿದ್ದಾರೆ.


ಉಡುಪಿ(ಮೇ.01): ಚಿತ್ರದುರ್ಗದಲ್ಲಿ ಮಹಿಳೆಯೊಬ್ಬರು ಬೆಳೆದ ಈರುಳ್ಳಿ ಮೂಟೆಗೆ 150 ರು.ಗೂ ಕೊಳ್ಳುವವರಿಲ್ಲದೆ ಕೊಳೆತು ಹೋಗುತಿದ್ದಾಗ ಉಡುಪಿಯ ರೈತರೊಬ್ಬರು ಮೂಟೆಗೆ 550 ಕೊಟ್ಟು ಖರೀದಿಸಿ ಮಾನವೀಯತೆ ಮೆರೆದಿದ್ದಾರೆ.

ಚಿತ್ರದುರ್ಗದ ರೈತ ಮಹಿಳೆ ವಸಂತ ಕುಮಾರಿ ಅವರು ಈರುಳ್ಳಿ ಬೆಳೆದಿದ್ದು, ಲಾಕ್‌ಡೌನ್‌ ಮಧ್ಯೆ ಮಾರುಕಟ್ಟೆಯಲ್ಲಿ ಸರಿಯಾದ ದರ ಸಿಗದೆ ಕಂಗಾಲಾಗಿ ನೆರವು ನೀಡುವಂತೆ ಮಾಡಿದ್ದ ಮನವಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಇದಕ್ಕೆ ಸ್ವತಃ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೇ ವಸಂತ ಕುಮಾರಿಗೆ ಕರೆ ಮಾಡಿ ಸಾಂತ್ವನ ಹೇಳಿ, ನೆರವಿನ ಭರವಸೆ ನೀಡಿದ್ದರು.

Latest Videos

undefined

ಜಪ್ತಿಯಾದ ವಾಹನಗಳು ಇಂದಿನಿಂದ ವಾಪಸ್‌! ಯಾವ ವಾಹನಕ್ಕೆಷ್ಟು ದಂಡ..?

ಈ ವಿಡಿಯೋವನ್ನು ನೋಡಿದ ಉಡುಪಿಯ ಬೊಮ್ಮರಬೆಟ್ಟು ಗ್ರಾಮದ ರೈತ ಸುರೇಶ್‌ ನಾಯಕ್‌ ಈ ಮಹಿಳೆಯನ್ನು ದೂರವಾಣಿಯ ಮೂಲಕ ಸಂಪರ್ಕಿಸಿ, ಈರುಳ್ಳಿ ಖರೀದಿಸುವುದಾಗಿ ಹೇಳಿದರು. ಅದರಂತೆ ಚಿತ್ರದುರ್ಗದಲ್ಲಿ ಒಂದು ಚೀಲ ಈರುಳ್ಳಿಗೆ 150 ರಿಂದ 250 ಬೆಲೆ ಇದೆ. ಆದರೆ ನಾಯಕ್‌ ಅವರು ಉಡುಪಿಯ ಮಾರುಕಟ್ಟೆಗನುಗುಣವಾಗಿ ಚೀಲಕ್ಕೆ 550 ನೀಡಿ ಈರುಳ್ಳಿ ಖರೀದಿಸಿದ್ದಾರೆ.

ಈರುಳ್ಳಿ ಮಾರಾಟವಾಗದೇ ಸಂಕಷ್ಟಕ್ಕೆ ಸಿಲುಕಿದ ರೈತ ಮಹಿಳೆ; ಸಮಸ್ಯೆ ಬಗೆಹರಿಸುವುದಾಗಿ ಸಿಎಂ ಭರವಸೆ

ವಸಂತಿ ಕುಮಾರಿ ಅವರು ತಾವು ನಿರೀಕ್ಷಿಸಿದ್ದಕ್ಕಿಂತಲೂ ಹೆಚ್ಚು ಬೆಲೆ ಪಡೆದು ಸಂತಸಗೊಂಡಿದ್ದಾರೆ. ಇದೀಗ ಚಿತ್ರದುರ್ಗದಿಂದ 60 ಕೆಜಿಯ 172 ಚೀಲ ಈರುಳ್ಳಿ ಉಡುಪಿಗೆ ಬಂದಿದೆ. ಅದನ್ನೀಗ ಸುರೇಶ್‌ ನಾಯಕ್‌ ಅವರು ತಮ್ಮ ಸಂಪರ್ಕಗಳ ಮೂಲಕ ಉಡುಪಿ ಜಿಲ್ಲೆಯಲ್ಲಿ ಮಾರಾಟಕ್ಕೆ ವ್ಯವಸ್ಥೆ ಮಾಡುತಿದ್ದಾರೆ.

ಈರುಳ್ಳಿ ನೀವೇ ಕೊಂಡುಕೊಳ್ಳಿ ಎಂದ ಮಹಿಳೆ: ತಕ್ಷಣ ಸ್ಪಂದಿಸಿದ ಸಿಎಂ

click me!