ಮೊಬೈಲ್‌ ನೋಡಿಕೊಂಡೇ ಬಸ್‌ ಚಲಾಯಿಸಿದ ಚಾಲಕ: ವೀಡಿಯೋ ವೈರಲ್‌

By Kannadaprabha News  |  First Published Jul 25, 2023, 12:30 AM IST

ಸ್ಟೇಟ್‌ ಬ್ಯಾಂಕ್‌ ತಲಪಾಡಿ ನಡುವೆ ಚಲಿಸುವ ಸಿಟಿ ಬಸ್‌ ಚಾಲಕ ಚಾಲನೆ ವೇಳೆ ಮೊಬೈಲ್‌ ಉಪಯೋಗಿಸುತ್ತಿರುವುದನ್ನು ಪ್ರಯಾಣಿಕರೊಬ್ಬರು ಸೆರೆಹಿಡಿದಿರುವುದು, ಇದೀಗ ವೈರಲ್‌ ಆಗಿದೆ. 


ಉಳ್ಳಾಲ (ಜು.25): ಸ್ಟೇಟ್‌ ಬ್ಯಾಂಕ್‌ ತಲಪಾಡಿ ನಡುವೆ ಚಲಿಸುವ ಸಿಟಿ ಬಸ್‌ ಚಾಲಕ ಚಾಲನೆ ವೇಳೆ ಮೊಬೈಲ್‌ ಉಪಯೋಗಿಸುತ್ತಿರುವುದನ್ನು ಪ್ರಯಾಣಿಕರೊಬ್ಬರು ಸೆರೆಹಿಡಿದಿರುವುದು, ಇದೀಗ ವೈರಲ್‌ ಆಗಿದೆ. ಸಾರ್ವಜನಿಕ ವಲಯದಿಂದ ಚಾಲಕನ ವಿರುದ್ಧ ಕ್ರಮಕ್ಕಾಗಿ ಆಗ್ರಹ ವ್ಯಕ್ತವಾಗಿದೆ. 42 ನಂಬರಿನ ಸೈಂಟ್‌ ಆಂಟನಿ ಬಸ್‌ ಚಾಲಕ ನಿರ್ಲಕ್ಷ್ಯ ರೀತಿಯಲ್ಲಿ ಬಸ್‌ ಚಲಾಯಿಸಿದ್ದಾನೆ. 

ನೇತ್ರಾವತಿ ಸೇತುವೆಯಿಂದ ಮೊಬೈಲ್‌ ನೋಡಲು ಆರಂಭಿಸಿದ ಚಾಲಕ ತೊಕ್ಕೊಟ್ಟು ವರೆಗೂ , ಒಂದು ಕೈಯಲ್ಲಿ ಸ್ಟೇರಿಂಗ್‌, ಇನ್ನೊಂದು ಕೈಯಲ್ಲಿ ಮೊಬೈಲ್‌ ಹಿಡಿದುಕೊಂಡು ಬೇಜವಾಬ್ದಾರಿಯುತವಾಗಿ ಬಸ್ಸನ್ನು ಚಲಾಯಿಸಿರುವುದು ವೀಡಿಯೋದಲ್ಲಿ ಸೆರೆಯಾಗಿದೆ. ಬಸ್ಸಲ್ಲಿ ಅಧಿಕ ಪ್ರಯಾಣಿಕರೂ ಇದ್ದರು ಎಂಬುದನ್ನು ಪ್ರಯಾಣಿಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 

Tap to resize

Latest Videos

undefined

ರಸ್ತೆಗಿಂತ ಹೆಚ್ಚಾಗಿ ಮೊಬೈಲನ್ನೇ ಚಾಲಕ ವೀಕ್ಷಿಸುತ್ತಿರುವುದು ಅನಾಹುತ ಆಹ್ವಾನಿಸುತ್ತಿದೆ. ಸಾರಿಗೆ ಅಧಿಕಾರಿಗಳು ಬಸ್‌ ಪರ್ಮಿಟ್‌ ರದ್ದುಗೊಳಿಸಬೇಕು ಹಾಗೂ ಸಂಚಾರಿ ಪೊಲೀಸರು ಚಾಲಕನ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಚಿಕ್ಕಬಳ್ಳಾಪುರ ವೈದ್ಯಕೀಯ ಕಾಲೇಜಿಗೆ ‘ರಾಜಕೀಯ ಗ್ರಹಣ’: ಕಾಮಗಾರಿ ಇನ್ನೂ ಅಪೂರ್ಣ

117 (ಐಎಂವಿ) ಮೋಟಾರ್‌ ಆಕ್ಟ್ ನಡಿ ಸಿಟಿ ಬಸ್‌ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಪ್ರಸ್ತುತ ಕಾಯಿದೆಯಡಿ ಲೈಸನ್ಸ್‌ ರದ್ದುಗೊಳಿಸುವುದು ಹಾಗೂ ದಂಡ ವಿಧಿಸಲಾಗುವುದು. ಸಾರ್ವಜನಿಕವಾಗಿ ವೀಡಿಯೋ ವೈರಲ್‌ ಆದ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತವಾಗಿ ಇಲಾಖೆ ಪ್ರಕರಣ ದಾಖಲಿಸಲಾಗುವುದು ಎಂದು ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್‌ ಠಾಣಾ ಇನ್ಸ್‌ಪೆಕ್ಟರ್‌ ರಮೇಶ್‌ ಹಾನಾಪುರ ತಿಳಿಸಿದ್ದಾರೆ.

click me!