'ಯಡಿಯೂರಪ್ಪ, ಶಾ ಸ್ವಾತಂತ್ರ್ಯ ಹೋರಾಟಗಾರರಾ'..?

Published : Sep 08, 2019, 01:06 PM ISTUpdated : Sep 08, 2019, 01:19 PM IST
'ಯಡಿಯೂರಪ್ಪ, ಶಾ ಸ್ವಾತಂತ್ರ್ಯ ಹೋರಾಟಗಾರರಾ'..?

ಸಾರಾಂಶ

ಮುಖ್ಯಮಂತ್ರಿ ಯಡಿಯೂರಪ್ಪ, ಅಮಿತ್ ಶಾ ಅವರು ಸ್ವಾತಂತ್ರ್ಯ ಹೋರಾಟಗಾರರಾ..? ಅವರೇನು ಸ್ವಾತಂತ್ರ್ಯ ಹೋರಾಟ ಮಾಡಿ ಜೈಲಿಗೆ ಹೋಗಿದ್ದಾರಾ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರಿಗೆ ಟಾಂಗ್ ನೀಡಿದ್ದಾರೆ. ಇತ್ತೀಚೆಗಷ್ಟೇ ಶ್ರೀನಿವಾಸ್ ಅವರು, ಡಿಕೆಶಿ ಸ್ವಾತಂತ್ರ್ಯ ಹೋರಾಟಗಾರರ ಎಂದು ಪ್ರಶ್ನಿಸಿದ್ದರು.

ಉಡುಪಿ(ಸೆ.08): ಕೋಟ ಶ್ರೀನಿವಾಸ್ ಪೂಜಾರಿ ಹೇಳಿಕೆಗೆ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿಶನ್ ಹೆಗ್ಡೆ ಕೊಳ್ಕಬೈಲು ತಿರುಗೇಟು ನೀಡಿದ್ದಾರೆ.

ರಾಜ್ಯದ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಕಾಂಗ್ರೆಸ್ ನಾಯಕ ಡಿ. ಕೆ. ಶಿವಕುಮಾರ್ ಅವರು ಸ್ವಾತಂತ್ರ್ಯ ಹೋರಾಟ ಮಾಡಿ ಜೈಲಿಗೆ ಹೋಗಿದ್ದಾರೆಯೇ ಎನ್ನುವ ಹೇಳಿಕೆ ನೀಡಿದ್ದರು. ಹಾಗಾದರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸ್ವಾತಂತ್ರ್ಯ ಹೋರಾಟ ಮಾಡಿ 25 ದಿನಗಳ ಜೈಲುವಾಸ ಅನುಭವಿಸಿದ್ದರೇ ಎಂದು ಪ್ರಶ್ನಿಸಿದ್ದಾರೆ.

ಡಿಕೆಶಿ ಸ್ವಾತಂತ್ರ್ಯ ಹೋರಾಟಗಾರರಾ..? ಪ್ರತಿಭಟನೆ ಹೆಸರಲ್ಲಿ ದಬ್ಬಾಳಿಕೆ ಸಹಿಸಲ್ಲ: ಸಚಿವ ಕೋಟ ಎಚ್ಚರಿಕೆ

ದೇಶದ ಗೃಹ ಸಚಿವ ಅಮಿತ್ ಶಾ ಅವರೂ ಬಂಧನಕ್ಕೊಳಗಾಗಿದ್ದು, ಸ್ವಾತಂತ್ರ್ಯಹೋರಾಟದ ಸಲುವಾಗಿಯಾ ಎಂಬ ಪ್ರಶ್ನೆಗಳಿಗೂ ಸಚಿವರು ಉತ್ತರಿಸಬೇಕು ಎಂದು ಕಿಶನ್ ಹೆಗ್ಡೆ ಕೊಳ್ಕಬೈಲು ಹೇಳಿದ್ದಾರೆ.

ಸೀಫುಡ್ ಪ್ರಿಯರಿಗೆ ಸಚಿವ ಕೋಟ ಶ್ರೀನಿವಾಸ್‌ ಸಿಹಿ ಸುದ್ದಿ..!

ಕೇವಲ ರಾಜಕೀಯ ದ್ವೇಷಕ್ಕೆ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಲಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ನ್ಯಾಯಾಲಯದ ಮೇಲೆ ಅದಮ್ಯ ವಿಶ್ವಾಸವಿದೆ. ನ್ಯಾಯ ಸಿಕ್ಕಿಯೇ ಸಿಗುತ್ತದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

PREV
click me!

Recommended Stories

ಕೊಪ್ಪಳದ ಜಮೀನಿನಲ್ಲಿ ಅಚ್ಚರಿ ಘಟನೆ: ಹುತ್ತದೊಳಗೆ ಅಲಾಯಿ ದೇವರು ಪತ್ತೆ!
ಐಷಾರಾಮಿ ಕಾರಿನ ಎರಡು ಡೋರ್ ಓಪನ್ ಮಾಡಿ ಸ್ಟಂಟ್; ಇನ್‌ಸ್ಟಾ ವಿಡಿಯೋ ನೋಡಿ ಕೇಸ್ ಜಡಿದ ಕಬ್ಬನ್ ಪಾರ್ಕ್ ಪೊಲೀಸರು!