ನಾವು 17 ಕ್ಷೇತ್ರಗಳ ಉಪ ಚುನಾವಣೆಯಲ್ಲಿಯೂ ಕೂಡ ಗೆಲುವು ಸಾಧಿಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಬಾಗಲಕೋಟೆ [ಸೆ.08] : ಸಂಸದ ಶ್ರೀನಿವಾಸ್ ಪ್ರಸಾದ್ ಅಸಮಾಧಾನ ವಿಚಾರದ ಬಗ್ಗೆ ನನ್ನ ಬಳಿ ಏನು ಕೇಳಬೇಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಬಿಜೆಪಿ ಕೋರ್ ಕಮಿಟಿ ಸಭೆ ಬಳಿಕ ಕೈ ಮುಗಿದು ತೆರಳಿದ ಅವರು ಮಾಧ್ಯಮಗಳಿಗೆ ಅಸಮಾಧಾನದ ಬಗ್ಗೆಯೂ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಉಪಚುನಾವಣೆ ವಿಚಾರ ಪ್ರಸ್ತಾಪ : ಇನ್ನು ಅನಹ೯ ಶಾಸಕರ ಕ್ಷೇತ್ರಗಳಲ್ಲಿ ಮರು ಚುನಾವಣೆ ಎದುರಿಸುವ ವಿಚಾರದ ಬಗ್ಗೆ ಮಾತನಾಡಿದ ಕಟೀಲ್ 17 ಕ್ಕೆ 17 ಕ್ಷೇತ್ರಗಳಲ್ಲಿಯೂ ನಾವು ಗೆಲ್ಲುತ್ತೇವೆ ಎಂದರು.
ಡಿಕೆಶಿ ಪ್ರಕರಣದ ಬಗ್ಗೆಯೂ ಪ್ರತಿಕ್ರಿಯೆ : ಡಿಕೆಶಿ ಅವರ ಮೇಲೆ 2017 ರಲ್ಲಿಯೇ ಐಟಿ ದಾಳಿ ನಡೆದಿತ್ತು. ಈ ಬಗ್ಗೆ 2019ರವರೆಗೂ ಕೂಡ ಐಟಿ ತನಿಖೆಗಳಾಗಿದೆ. ಅದೊಂದು ಸ್ವತಂತ್ರ ಸಂಸ್ಥೆಯಾಗಿದ್ದು, ಈ ಬಗ್ಗೆ ಇಡಿ ಕ್ರಮ ಕೈಗೊಳ್ಳುತ್ತದೆ ಎಂದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈ ದೇಶದ ಹತ್ತಾರು ಜನ ಮತ್ತು ಮುಖ್ಯಮಂತ್ರಿಗಳ ಮೇಲೆ ಐಟಿ ರೇಡ್ ಆಗಿದೆ. ಅದು ಸ್ವತಂತ್ರ, ಇಡಿಯಾಗಲಿ, ಸಿಬಿಐ ಆಗಲಿ ಬಿಜೆಪಿ ನಿಮಿ೯ತ ಸಂಸ್ಥೆಗಳು ಅಲ್ಲ. ಕೇಂದ್ರ ಸಕಾ೯ರದಿಂದ ರಚಿತವಾದ ಸಂಸ್ಥೆಗಳು. ಅವುಗಳಿಗೆ ಸಂಪೂರ್ಣ ಸ್ವತಂತ್ರ್ಯ ಇದ್ದು, ಅದರದೇ ದಾರಿಯಲ್ಲಿ ನಡೆಯುತ್ತದೆ ಎಂದರು.