ಬೆಂಗಳೂರಿನ ಪಾದರಾಯನಪುರ ಗಲಾಟೆ ಪ್ರಕರಣಕ್ಕೆ ಶಾಸಕ ಜಮೀರ್ ಅಹಮದ್ ನೇರ ಹೊಣೆಯಾಗಿದ್ದು, ಅವರನ್ನು ಕೂಡಲೇ ಬಂಧಿಸಿ ಜೈಲಿಗೆ ಕಳುಹಿಸಬೇಕು ಎಂದು ಕೆ.ಜಿ.ಬೋಪಯ್ಯ ಆಗ್ರಹಿಸಿದ್ದಾರೆ.
ಮಡಿಕೇರಿ(ಏ.21): ಬೆಂಗಳೂರಿನ ಪಾದರಾಯನಪುರ ಗಲಾಟೆ ಪ್ರಕರಣಕ್ಕೆ ಶಾಸಕ ಜಮೀರ್ ಅಹಮದ್ ನೇರ ಹೊಣೆಯಾಗಿದ್ದು, ಅವರನ್ನು ಕೂಡಲೇ ಬಂಧಿಸಿ ಜೈಲಿಗೆ ಕಳುಹಿಸಬೇಕು ಎಂದು ಕೆ.ಜಿ.ಬೋಪಯ್ಯ ಆಗ್ರಹಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಪಾದರಾಯನಪುರ ಗಲಾಟೆ ಪ್ರಕರಣಕ್ಕೆ ಶಾಸಕ ಜಮೀರ್ ಅಹಮದ್ ನೇರ ಹೊಣೆ. ಇದೊಂದು ಪೂರ್ವ ನಿಯೋಜಿತ ಪ್ರಕರಣ. ಅವರನ್ನು ಗೂಂಡಾ ಕಾಯ್ದೆ ಅಡಿಯಲ್ಲಿ ಬಂಧಿಸಿ ಜೈಲಿಗೆ ಕಳುಹಿಸಬೇಕು ಎಂದರು.
‘ಮದ್ಯದ ದೊರೆ’ ಹಿನ್ನಡೆ: ಮಲ್ಯ ಗಡೀಪಾರಿಗೆ ಇನ್ನೊಂದೇ ಮೆಟ್ಟಿಲು!
ಈ ಹಿಂದೆ ಆದ ಗಲಾಟೆ ಸಿಎಎ ಸರ್ವೆ ಎಂಬ ಅನುಮಾನದಿಂದ ಆಗಿತ್ತು. ಆದರೆ ನಿನ್ನೆ 500ಕ್ಕೂ ಹೆಚ್ಚು ಜನರು ಒಮ್ಮೆಲೇ ಹಲ್ಲೆಗೆ ಮುಂದಾಗಿದ್ದಾರೆ. ಆದ್ದರಿಂದ ಇದು ಪೂರ್ವ ನಿಯೋಜಿತ ಕೃತ್ಯ. ಕೋಮು ದ್ವೇಷದ ರೀತಿ ಆಗುತ್ತದೆ ಎಂದು ಸರ್ಕಾರ ಮೃದುಧೋರಣೆ ತಾಳಿದೆ. ಸರ್ಕಾರ ಯಾವುದೇ ಕಾರಣಕ್ಕೂ ಸುಮ್ಮನೆ ಬಿಡಬಾರದು. ಹೀಗೆ ಮುಂದುವರಿದರೆ ಯಾವ ಅಧಿಕಾರಿಯೂ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.