ಅತ್ಯಾಚಾರ ಅಂದರೆನೇ ಅಮಾನವೀಯ. ಅದರಲ್ಲೂ ಇಲ್ಲೊಬ್ಬ ಆಸಾಮಿ 80ರ ವೃದ್ದೆಗೆ ಅತ್ಯಾಚಾರ ಮಾಡಿದ್ದ. ಕೆಲ ಸಮಯದ ನಂತರ ಪೊಲೀಸರ ಬಂಧನಕ್ಕೂ ಒಳಗಾಗಿದ್ದ. ಇದೀಗ ಉಡುಪಿ ನ್ಯಾಯಾಲಯ ಆತನಿಗೆ ಕಠಿಣ ಶಿಕ್ಷೆ ವಿಧಿಸಿದೆ.
ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್, ಉಡುಪಿ
ಉಡುಪಿ (ಡಿ.01): ಅತ್ಯಾಚಾರ ಅಂದರೆನೇ ಅಮಾನವೀಯ. ಅದರಲ್ಲೂ ಇಲ್ಲೊಬ್ಬ ಆಸಾಮಿ 80ರ ವೃದ್ದೆಗೆ ಅತ್ಯಾಚಾರ ಮಾಡಿದ್ದ. ಕೆಲ ಸಮಯದ ನಂತರ ಪೊಲೀಸರ ಬಂಧನಕ್ಕೂ ಒಳಗಾಗಿದ್ದ. ಇದೀಗ ಉಡುಪಿ ನ್ಯಾಯಾಲಯ ಆತನಿಗೆ ಕಠಿಣ ಶಿಕ್ಷೆ ವಿಧಿಸಿದೆ.
undefined
ಐದು ವರ್ಷಗಳ ಹಿಂದೆ ಉಡುಪಿ ನಗರದಲ್ಲಿ 80 ವರ್ಷದ ವಯೋವೃದ್ದೆಯನ್ನು ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಭಂದಿಸಿ ಆರೋಪಿಗೆ 10 ವರ್ಷ ಕಠಿಣ ಕಾರಗೃಹ ಶಿಕ್ಷೆ ಮತ್ತು 50 ದಂಡ (ತಪ್ಪಿದಲ್ಲಿ 1 ವರ್ಷ ಕಠಿಣ ಕಾರಗೃಹ ಶಿಕ್ಷೆ) ಹಾಗು ಕೊಲೆ ಬೆದರಿಕೆ ಪ್ರಕರಣದಲ್ಲಿ 6 ತಿಂಗಳ ಸಾದಾ ಜೈಲು ಶಿಕ್ಷೆ ಮತ್ತು 5 ಸಾವಿರ ದಂಡ (ತಪ್ಪಿದ್ದಲ್ಲಿ ಹೆಚ್ಚವರಿ 1 ತಿಂಗಳ ಜೈಲು ಶಿಕ್ಷೆ) ಸಂತ್ರಸ್ತೆ 55 ಸಾವಿರ ರೂ. ದಂಡದ ವಿಧಿಸಿ ಆದೇಶ ಮಾಡಿದೆ.
ಕಾನೂನು ಸೇವಾ ಪ್ರಾಧಿಕಾರವು ಹೆಚ್ಚಿನ ಸಹಾಯವನ್ನು ಮಾಡಬೇಕೆಂದು ಉಡುಪಿಯ 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಾದ ನ್ಯಾಯಧೀಶ ದಿನೇಶ್ ಹೆಗ್ಡೆ ಆದೇಶಿಸಿದ್ದಾರೆ. ಮೂಲತಃ ಶಿವಮೊಗ್ಗ ಜೆ.ಪಿ ನಗರದ ನಿವಾಸಿ ಇರ್ಫಾನ್ ಶಿಕ್ಷೆಗೆ ಗುರಿಯಾದ ಆರೋಪಿಯಾಗಿದ್ದು, ಉಡುಪಿಯಲ್ಲಿ ಕೋಳಿ ಅಂಗಡಿಯಲ್ಲಿ ಕೆಲಸಕ್ಕಿದ್ದನು.
ಸುರತ್ಕಲ್ ಟೋಲ್ ಸಮಸ್ಯೆ ಪರಿಹಾರಕ್ಕೆ ಗಡ್ಕರಿ ಭೇಟಿಯಾದ ಶಾಸಕ ರಘುಪತಿ ಭಟ್
ಘಟನೆಯ ವಿವರ: ಉಡುಪಿಯ ಪಿಪಿಸಿ ಕಾಲೇಜಿನ ಬಳಿಯಿರುವ ಮೀನು ಮಾರುಕಟ್ಟೆ ಮುಂಭಾಗದ ಇಸ್ಮಾಯಿಲ್ ಎಂಬವರ ಕೋಳಿ ಅಂಗಡಿಯಲ್ಲಿ ಇರ್ಫಾನ್ ಕೆಲಸಕ್ಕಿದ್ದನು. ಕೋಳಿ ಅಂಗಡಿಯ ಬದಿಯಲ್ಲಿದ್ದ ಇಸ್ಮಾಯಿಲ್ ಅವರ ತಾಯಿ ಜೆರೀನಾ ಎಂಬವರ ಗುಜರಿ ಅಂಗಡಿಗೆ ಗುಜರಿಯನ್ನು ಮಾರಾಟ ಮಾಡಲು ತಮಿಳುನಾಡು ಮೂಲದ ವಯೋವೃದ್ದೆ ಆಗಾಗ ತೆರಳುತ್ತಿದ್ದಳು. 5/6/2017 ರಂದು ಎಂದಿನಂತೆ ಜೆರೀನಾ ಅವರ ಗುಜರಿ ಅಂಗಡಿಯಲ್ಲಿ ತಾನು ಹೆಕ್ಕಿ ಸಂಗ್ರಹಿಸಿದ ಗುಜರಿಯನ್ನು ಮಾರಾಟ ಮಾಡಿ ವಾಪಾಸಾಗುತ್ತಿದ್ದ ವಯೋವೃದ್ದೆಯನ್ನು ನಗರದ ತೆಂಕುಪೇಟೆ ಲಕ್ಷ್ಮೀ ವೆಂಕಟೇಶ್ವರ ದೇವಾಲಯದ ಬಳಿ ಇರುವ ಓಣಿಯಲ್ಲಿ ಸಂಜೆ 4 ಗಂಟೆಗೆ ಅತ್ಯಾಚಾರ ನಡೆಸಿ, ಗುಜರಿ ಮಾರಿದ್ದ 30,000 ನಗದು, ಒಂದು ಜೊತೆ ಬಂಗಾರದ ಬೆಂಡೋಲೆ ಮತ್ತು ತಾಳಿಯನ್ನು ದರೋಡೆ ಮಾಡಿ ಪರಾರಿಯಾಗಿದ್ದನು.
ಸಂತ್ರಸ್ತೆ ನೀಡಿದ ದೂರಿನಂತೆ ಮಹಿಳಾ ಠಾಣೆಯಲ್ಲಿ 7/6/2017 ಅತ್ಯಾಚಾರ, ದರೋಡೆ ಮತ್ತು ಕೊಲೆ ಬೆದರಿಕೆ ಪ್ರಕರಣ ದಾಖಲಾಗಿತ್ತು. ಅಜ್ಜರಕಾಡು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ವೃದ್ದೆಯೂ, ಗುಜುರಿ ಅಂಗಡಿಗೆ ಹೋಗಿರುವುದಾಗಿ ಪೋಲಿಸರಿಗೆ ಮಾಹಿತಿ ನೀಡಿದ್ದರು. ನಂತರ ಜೇರಿನಾ ಅವರ ಮಗ ಇಸ್ಮಾಯಿಲ್ ನವರ ಕೋಳಿ ಅಂಗಡಿಯಲ್ಲಿ ಕೆಲಸಕ್ಕಿದ್ದ ಇರ್ಫಾನ್ ಆರೋಪಿ ಎಂಬುದನ್ನು ಸಂತ್ರಸ್ತೆಯೂ ಜೆರೀನಾ ಅವರ ಮೊಬೈಲ್‌ನಲ್ಲಿದ್ದ ಇರ್ಫಾನ್‌ನ ಪೋಟೊವನ್ನು ಗುರುತಿಸುವುದರ ಮೂಲಕ ಪೋಲಿಸರಿಗೆ ಸಹರಿಸಿದ್ದರು. ಅಂದಿನ ಉಡುಪಿ ವೃತ್ತನಿರೀಕ್ಷಕ ಮಂಜುನಾಥ್ ತನಿಖೆ ನಡೆಸಿ ಮೊದಲ ದೋಷಾರೋಪಣಾ ಪಟ್ಟಿಯನ್ನು 19/10/18 ರಂದು ಸಲ್ಲಿಸಿ ಆರೋಪಿ ಪರಾರಿಯಾಗಿದ್ದಾನೆ ಎಂದು ತಿಳಿಸಿದ್ದರು.
ಮೊಗೇರಿಯಲ್ಲಿ ಅಡಿಗರ ಪುರಭವನ ನಿರ್ಮಾಣಕ್ಕೆ ಗ್ರಾಮಸ್ಥರ ವಿರೋಧ
ನಂತರ 5/5/2020 ರಂದು ಹೆಚ್ಚುವರಿ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದು, 16/5/2019 ರಂದು ಬಾಡಿ ವಾರೆಂಟ್ ಮೂಲಕ ಆರೋಪಿಯನ್ನು ವಶಕ್ಕೆ ವಿಚಾರಣೆ ನಡೆಸಿದ್ದೇವೆ ಎಂದು ತಿಳಿಸಿದ್ದರು. ( ಬೆಂಗಳೂರಿನಲ್ಲಿ ನಡೆದ ಕೊಲೆ ಪ್ರಕರಣವೊಂದರಲ್ಲಿ ಇರ್ಫಾನ್ ಆರೋಪಿಯಾಗಿದ್ದು, ನ್ಯಾಯಾಂಗ ಬಂಧನದಲ್ಲಿದ್ದನು). ಪ್ರಕರಣದಲ್ಲಿ 18 ಸಾಕ್ಷಿಗಳ ಪೈಕಿ 15 ಸಾಕ್ಷಿಗಳ ವಿಚಾರಣೆ ನಡೆದಿತ್ತು. ನೊಂದ ವೃದ್ದೆಯ ವೈದ್ಯಕೀಯ ಪರೀಕ್ಷೆಯಲ್ಲಿ ಲಭಿಸಿದ ಸಾಕ್ಷಿಗಳು ಹಾಗು ಆಕೆ ನ್ಯಾಯಾಲಯಕ್ಕೆ ಹಾಜರಾಗಿ ನೀಡಿದ ಸಾಕ್ಷಿಯೂ ಆರೋಪಿ ಇರ್ಫಾನ್ ನನ್ನು ದೋಷಿ ಎಂದು ಸಾಭೀತು ಪಡಿಸುವಲ್ಲಿ ಸಹಕಾರಿಯಾಗಿತ್ತು. ಪ್ರಾಸಿಕ್ಯೂಷನ್ ಪರವಾಗಿ ನ್ಯಾಯಾಲಯದ ಸರಕಾರಿ ಅಭಿಯೋಜಕ ಜಯರಾಂ ಶೆಟ್ಟಿ ವಾದಿಸಿದ್ದರು.