ಅಡಕೆ ಕಳ್ಳಸಾಗಣೆ: ಪ್ರಧಾನಿ ಮೋದಿಗೆ ಪತ್ರ ಬರೆದು ವೀರೇಂದ್ರ ಹೆಗ್ಗಡೆ ಕಳವಳ

By Girish Goudar  |  First Published Jun 3, 2022, 12:04 PM IST

*  ಕ್ಯಾಂಪ್ಕೋದ ಅಡಕೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷರೂ ಆದ ಹೆಗ್ಗಡೆ
*  ಬೆಳೆಗಾರರ ಆದಾಯಕ್ಕೆ ಕುತ್ತು ತಂದ ಜಿಎಸ್ಟಿ ಹೇರಿಕೆ
*  ಅಕ್ರಮ ಸಾಗಾಟ ತಡೆಯಲು ಕಠಿಣ ಕ್ರಮ ಕೈಗೊಳ್ಳಬೇಕು
 


ಮಂಗಳೂರು(ಜೂ.03):  ಅಡಕೆ ಕಳ್ಳ ಸಾಗಾಣೆ ತಡೆಯುವಂತೆ ಪ್ರಧಾನಿ ನರೇಂದ್ರ ಮೋದಿಗೆ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಪತ್ರ ಬರೆದು ಕಳವಳ ವ್ಯಕ್ತಪಡಿಸಿದ್ದಾರೆ. 

ಕ್ಯಾಂಪ್ಕೋದ ಅಡಕೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷರೂ ಆಗಿರುವ ಹೆಗ್ಗಡೆ, ರಾಜ್ಯಕ್ಕೆ ವಿದೇಶದಿಂದ ಅಡಕೆ ಅಕ್ರಮವಾಗಿ ಪ್ರವೇಶವಾಗುತ್ತಿದೆ. ಭಾರತ ಪ್ರರಿ ವರ್ಷ 15.63 ಲಕ್ಷ ಟನ್ ಅಧಿಕ ಉತ್ಪಾದಿಸಿ ಸ್ವಾವಲಂಬಿಯಾಗಿದೆ.ಆದರೂ ಪ್ರತಿ ವರ್ಷ 24 ಸಾವಿರ ಟನ್ ಅಡಕೆ ಆಮದು ಮಾಡಿಕೊಳ್ಳಲಾಗ್ತಿದೆ. ಕಳ್ಳ ಸಾಗಾಣೆದಾರರ ಅಕ್ರಮಗಳಿಂದ ಸ್ಥಳೀಯವಾಗಿ ಬೆಳೆದ ಅಡಕೆ ಬೆಲೆ ಅಸ್ಥಿರವಾಗಿದೆ. ಇದು ಲಕ್ಷಾಂತರ ಅಡಕೆ ರೈತರ ಬದುಕು ಹಾಗೂ ಆರ್ಥಿಕ ಸ್ಥಿತಿ ಮೇಲೆ ಪರಿಣಾಮ ಬೀರಿದೆಎಂದು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಹೆಗ್ಗಡೆ ಕಳವಳ ವ್ಯಕ್ತಪಡಿಸಿದ್ದಾರೆ. 

Tap to resize

Latest Videos

Hijab Row: ಉಪ್ಪಿನಂಗಡಿ ಡಿಗ್ರಿ ಕಾಲೇಜಲ್ಲಿ ಹಿಜಾಬ್‌ಧಾರಿ 6 ವಿದ್ಯಾರ್ಥಿಗಳ ಅಮಾನತು

ಇದರ ಜೊತೆಗೆ ಜಿಎಸ್ಟಿ ಹೇರಿಕೆಯೂ ಬೆಳೆಗಾರರ ಆದಾಯಕ್ಕೆ ಕುತ್ತು ತಂದಿದೆ. ಹೀಗಾಗಿ ಸರ್ಕಾರ ತಕ್ಷಣ ತೆರಿಗೆ ಇಳಿಸಲು ಮನಸ್ಸು ಮಾಡಬೇಕು. ಅಲ್ಲದೆ ಅಕ್ರಮ ಸಾಗಾಟ ತಡೆಯಲು ಕಠಿಣ ಕ್ರಮ ಕೈಗೊಳ್ಳಬೇಕು. ಇತ್ತೀಚೆಗೆ ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ ಅಡಕೆ ಕಳ್ಳ ಸಾಗಾಣೆ ಇನ್ನೂ ಅಸ್ತಿತ್ವದಲ್ಲಿ ಇದೆ ಅಂದಿದ್ದಾರೆ. ತೆರಿಗೆ ಜಾಲದ ಹೊರಗೆ ವ್ಯಾಪಾರ ಮಾಡುವ ಅಡಿಕೆಯ ಪ್ರಮಾಣವೂ ಲಭ್ಯವಿಲ್ಲ ಎಂದಿದ್ದಾರೆ. ದೇಶದಲ್ಲಿ ಶೇ.15ರಷ್ಟು ಅಡಕೆ ಮಾತ್ರ ಕ್ಯಾಂಪ್ಕೋ ಮಂಗಳೂರು ಸೇರಿದಂತೆ ಸಹಕಾರಿ ಸಂಸ್ಥೆಗಳು ವ್ಯಾಪಾರ ಮಾಡಿತ್ತವೆ. ಆದರೆ ಉಳಿದ 85% ಖಾಸಗಿ ವ್ಯಾಪಾರಿಗಳು ಖರೀದಿಸ್ತಾರೆ. ಇದರಿಂದ ರೈತರ ಆದಾಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಹೆಗ್ಗಡೆ ಆತಂಕ ವ್ಯಕ್ತಪಡಿಸಿದ್ದಾರೆ. 

ಇದರ ಜೊತೆಗೆ ಅಡಕೆ ಸರಕು ಪಟ್ಟಿಯಲ್ಲಿ ಕಡಿಮೆ ದರ ನಮೂದಿಸಿ ಮಾರಾಟ ಮಾಡುವುದನ್ನು ತಡೆಯಲು ಕ್ರಮ ಕೈಗೊಳ್ಳಬೇಕು. ಇದಕ್ಕೆ ದೇಶದ ಬಿಳಿ ಮತ್ತು ಕೆಂಪು ಅಡಕೆಗಳೆರಡರಲ್ಲೂ ಪರಿಣತರಾಗಿರುವ ಸಹಕಾರಿ ವಲಯದ ಸಮರ್ಥ ನೋಡಲ್ ಏಜೆನ್ಸಿ ಕ್ಯಾಂಪ್ಕೋ ಅಥವಾ ಎಡಿಆರ್ಎಫ್ ಅನ್ನು ಸರಕು ಮೌಲ್ಯಮಾಪನ ಮತ್ತು ವರದಿಗಳನ್ನು ಗುರುತಿಸಬಹುದು ಎಂದು ಹೆಗ್ಗಡೆ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
 

click me!