ಉಡುಪಿಯಲ್ಲಿ ನಿಂತಲ್ಲೇ ಅಲ್ಲಾಡುತ್ತಿದ್ದ ಕಾರು; ಜನರಿಗೆ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ರತಿಕ್ರೀಡಾ ಜೋಡಿ!

By Sathish Kumar KH  |  First Published Aug 7, 2024, 2:13 PM IST

ಉಡುಪಿಯಲ್ಲಿ ನಿಂತಲ್ಲೇ ಅಲುಗಾಡುತ್ತಿದ್ದ ಕಾರಿನ ಬಾಗಿಲು ತೆರೆದು ನೋಡಿದ ಜನರಿಗೆ ಶಾಕ್. ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕಾಮದಾಟದ ಜೋಡಿ..


ಉಡುಪಿ (ಆ.07): ರಾಜ್ಯದ ಕರಾವಳಿ ಜಿಲ್ಲೆ ಶ್ರೀಕೃಷ್ಣ ನಗರಿ ಉಡುಪಿಯ ನಗರಸಭೆ ಸಮೀಪದ ರಸ್ತೆಯಲ್ಲಿ ಹಾಡಹಗಲೇ ನಿಂತುಕೊಂಡಿದ್ದ ಕಾರು ಅಲ್ಲಾಡಲು ಆರಂಭವಾಗಿದೆ. ಆದರೆ, ನಿಂತುಕೊಂಡಿರುವ ಕಾರು ಅಲ್ಲಾಡುತ್ತಿದ್ದುದನ್ನು ನೋಡಿ ಜನರು ದಿಢೀರನೇ ಬಾಗಿಲು ತೆರೆದಿದ್ದಾರೆ. ಅಯ್ಯೋ ಕಾರಿನೊಳಗೆ ಲಜ್ಜೆಗೆಟ್ಟ ಜೋಡಿ ರತಿಕ್ರೀಡೆಯಲ್ಲಿ ತೊಡಗಿದ್ದನ್ನು ನೋಡಿ ಛೀಮಾರಿ ಹಾಕಿದ್ದಾರೆ.

ಹೌದು, ಬಾಲಿವುಡ್‌ನ ಹಾಸ್ಯ ಪ್ರಧಾನ ಚಲನಚಿತ್ರ 'ಪಿಕೆ' ಸಿನಿಮಾದಲ್ಲಿ ರಸ್ತೆಯ ಬದಿ ನಿಲ್ಲಿಸಿದ್ದ ಕಾರು ಅಲ್ಲಾಡುವುದನ್ನು ನೋಡಿದ ಅಮೀರ್ ಖಾನ್ ಶಾಕ್ ಆಗಿದ್ದನು. ಆದೇ ರೀತಿ ಕರಾವಳಿ ನಗರಿ ಉಡುಪಿಯಲ್ಲಿಯೂ ಕೂಡ ಅದೇ ರೀತಿ ಕಾರೊಂದು ಹಾಡಹಗಲೇ ನಿಂತಲ್ಲಿಯೇ ಅಲ್ಲಾಡುತ್ತಿದೆ. ಇದನ್ನು ನೋಡಿದ ಉಡುಪಿ ಜನರೂ ಕೂಡ ಶಾಕ್ ಆಗಿದ್ದಾರೆ. ಅದು ಕೂಡ ಅತಿ ಹೆಚ್ಚು ಜನರು ಸಂಚಾರ ಮಾಡುವ ನಗರಸಭೆಯ ಸಮೀಪದಲ್ಲಿಯೇ ಇರುವ ರಸ್ತೆಯಲ್ಲಿ ಕಾರು ಅಲ್ಲಾಡುವುದನ್ನು ನೋಡಿ ಕಿಟಕಿಯಿಂದ ಇಣುಕಿ ಹಾಕಿದ್ದಾರೆ. ಆದರೆ, ಕಾರಿಗೆ ಕಿಟಕಿಗಳಿಗೆ ಪರದೆಯ ರೀತಿಯಲ್ಲಿ ಬಟ್ಟೆಯನ್ನು ಹೊದಿಸಲಾಗಿತ್ತು. ಹಾಗಾಗಿ, ಕಾರಿನೊಳಗೆ ಏನು ನಡೆಯುತ್ತಿದೆ ಎಂಬ ಮಾಹಿತಿ ಸಿಕ್ಕಿಲ್ಲ.

Tap to resize

Latest Videos

Bengaluru: ತುಂತುರು ಮಳೆಯಲ್ಲಿ ರಸ್ತೆ ಮದ್ಯದಲ್ಲಿಯೇ ಕಿಸ್ಸಿಂಗ್, ಹಗ್ಗಿಂಗ್ ಮಾಡಿದ ಬೆಂಗಳೂರಿನ ಲಜ್ಜೆಗೆಟ್ಟ ಜೋಡಿ!

ಕಾರು ಅಲ್ಲಾಡುತ್ತಿರುವುದರಿಂದ ಸಂಶಯಗೊಂಡ ಜನರು ಗುಂಪು ಸೇರಿಕೊಂಡು ಕಾರಿನೊಳಗೆ ಏನು ನಡೆಯುತ್ತಿದೆ ಎಂಬುದನ್ನು ಪರಿಶೀಲನೆ ಮಾಡಲು ಮುಂದಾಗಿದ್ದಾರೆ. ಆಗ ಬಾಗಿಲು ಬಡಿದರೂ ಕಾರು ಅಲ್ಲಾಡುವುದು ಮಾತ್ರ ನಿಂತಿಲ್ಲ. ಇದರಿಂದ ಜನರು ಕಾರಿನ ಬಾಗಿಲನ್ನು ಜೋರಾಗಿ ಎಳೆದಿದ್ದಾರೆ. ಆಗ ಕಾರು ಬಾಗಿಲು ತೆಗೆದುಕೊಂಡಿದ್ದ ರತಿಕ್ರೀಡೆಯಲ್ಲಿ ತೊಡಗಿದ್ದ ಜೋಡಿಗಳು ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದಾರೆ. ಕಾಮದಾಟದ ಜೋಡಿ ರೆಡ್ ಹ್ಯಾಂಡಾಗಿ ಜನರ ಕೈಗೆ ಸಿಕ್ಕಿ ಬಿದ್ದ ತಕ್ಷಣವೇ ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದವರಿಗೆ ತರಾಟೆ ತೆಗೆದುಕೊಂಡಿದ್ದಾರೆ.

ನಮ್ಮ ಮೆಟ್ರೋ 12 ವರ್ಷದ ಬಳಿಕ ದಾಖಲೆಯ ರೈಡರ್‌ಶಿಪ್; ಒಂದೇ ದಿನ 8.26 ಲಕ್ಷ ಪ್ರಯಾಣಿಕರ ಸಂಚಾರ

ಇನ್ನು ಸಾರ್ವಜನಿಕರ ಸ್ಥಳದಲ್ಲಿ ಅನೈತಿಕ ಚಟುವಟಿಕೆ ನಡೆಸಿ, ಮುಜುಗರ ಉಂಟು ಮಾಡಿದ್ದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ ಪೊಲೀಸರು ಅವರನ್ನು ಠಾಣೆಗೆ ಕರೆದೊಯ್ದಿದ್ಆರೆ. ಉಡುಪಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

click me!