ಬೆಂಗಳೂರಿನ ನಮ್ಮ ಮೆಟ್ರೋ ರೈಲು ಪ್ರಯಾಣಿಕರ ಸಂಚಾರದಲ್ಲಿ ಕಳೆದ 12 ವರ್ಷದಲ್ಲಿಯೇ ಹೊಸ ದಾಖಲೆ ಬರೆಯಲಾಗಿದೆ.
ಬೆಂಗಳೂರು (ಆ.07): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಟ್ರಾಫಿಕ್ ಮುಕ್ತ ಹಾಗೂ ಕ್ಷಿಪ್ರಗತಿ ಸಂಚಾರಕ್ಕೆ ಅನುಕೂಲ ಆಗಿರುವ ನಮ್ಮ ಮೆಟ್ರೋ ರೈಲಿನಲ್ಲಿ ಪ್ರಯಾಣಿಕರ ಸಂಚಾರದಲ್ಲಿ 12 ವರ್ಷದಲ್ಲಿಯೇ ಹೊಸ ದಾಖಲೆ ಬರೆಯಲಾಗಿದೆ.
ಕಳೆದ 2011ರಿಂದ ನಮ್ಮ ಮೆಟ್ರೋ ಸಂಚಾರ ಆರಂಭವಾದಾಗಿನಿಂದ ಈವರೆಗೆ ಪ್ರತಿನಿತ್ಯ ಸರಾಸರಿ 6.36 ಲಕ್ಷ ಜನರು ಸಂಚಾರ ಮಾಡುತ್ತಾರೆ. ಆದರೆ, 2024ರ ಆ.06ರ ಮಂಗಳವಾರದಂದು ಬರೋಬ್ಬರಿ 8.26 ಲಕ್ಷ ಪ್ರಯಾಣಿಕರು ಒಂದೇ ದಿನದಲ್ಲಿ ಸಂಚಾರ ಮಾಡಿದ್ದಾರೆ. ಕಳೆದ 12 ವರ್ಷಗಳ ನಂತರ ದಾಖಲೆ ಪ್ರಮಾಣದಲ್ಲಿ ಅತ್ಯಧಿಕ ಪ್ರಯಾಣಿಕರು ಸಂಚಾರ ಮಾಡಿದ್ದಾರೆ. ಈ ಮೂಲಕ ನಮ್ಮ ಮೆಟ್ರೋದಲ್ಲಿ ಅತ್ಯಧಿಕ ಪ್ರಯಾಣಿಕರು ಸಂಚಾರ ಮಾಡಿದ ದಾಖಲೆ ಆ.6ರಂದು ದಾಖಲಾಗಿದೆ.
ಹಿಂದಿನ ರೈಡರ್‌ಶಿಪ್ ದಾಖಲೆಗಳನ್ನು ಮೀರಿಸಿ, ಮಂಗಳವಾರ ಆಗಸ್ಟ್, 6, 2024 ರಂದು ನಮ್ಮ ಮೆಟ್ರೋ 8.26 ಲಕ್ಷಗಳ ಅತಿ ಹೆಚ್ಚು ಜನರು ಪ್ರಯಾಣಿಸಿದ ಹೊಸ ದಾಖಲೆಯಾಗಿದೆ. ಒಟ್ಟಾರೆ ಮೆಟ್ರೋದಲ್ಲಿ 8,26,883 ಜನರು ಪ್ರಯಾಣಿಸಿದ್ದಾರೆ.
ವರ್ಷಾಂತ್ಯಕ್ಕೆ ಹಳದಿ ಮೆಟ್ರೋ ಓಪನ್, ಇನ್ಫೋಸಿಸ್ ಅನುದಾನಿತ ಕೋನಪ್ಪನ ಅಗ್ರಹಾರ ನಿಲ್ದಾಣದಲ್ಲಿ ಹೈಟೆಕ್ ಸೌಲಭ್ಯ!
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಬೆಂಗಳೂರು ಮೆಟ್ರೋ ಕಾರ್ಪೋರೇಷನ್ ಪ್ರೈವೇಟ್ ಲಿ (ಬಿಎಂಆರ್‌ಸಿಎಲ್) ನಮ್ಮ ಮೆಟ್ರೋವನ್ನು ತಮ್ಮ ಪ್ರಯಾಣದ ಪಾಲುದಾರರನ್ನಾಗಿ ಮಾಡಿಕೊಂಡಿದ್ದಕ್ಕಾಗಿ ಧನ್ಯವಾದಗಳು. ವಾತಾವರ್ಣದ ಇಂಗಾಲವನ್ನು ತಗ್ಗಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನವನ್ನು ಬೆಂಬಲಿಸುತ್ತಿರುವುದಕ್ಕಾಗಿ ಪ್ರಯಾಣಿಕರಿಗೆ ನಿಗಮದ ವತಿಯಿಂದ ಧನ್ಯವಾದ ತಿಳಿಸುತ್ತೇವೆ. ಬೆಂಗಳೂರು ಮೆಟ್ರೋ ಎಂದೂ ಕರೆಯಲ್ಪಡುವ ನಮ್ಮ ಮೆಟ್ರೋ, ದೆಹಲಿ ಮೆಟ್ರೋ ಬಿಟ್ಟರೆ ದೇಶದಲ್ಲಿಯೇ ಅತ್ಯಧಿಕ ಉದ್ದನೆಯ ಮಾರ್ಗವನ್ನು ಹೊಂದಲಾಗಿದೆ. ಭಾರತದಲ್ಲಿ ಎರಡನೇ ಅತಿ ಉದ್ದದ ಕಾರ್ಯಾಚರಣೆಯ ಮೆಟ್ರೋ ಜಾಲದಲ್ಲಿ ಅತ್ಯಧಿಕ ಪ್ರಯಾಣಿಕರು ಸಂಚಾರ ಮಾಡುವ ಮೂಲಕ ಹೊದ ದಾಖಲೆ ಬರೆಯಲಾಗಿದೆ ಎಂದು ತಿಳಿಸಿದೆ.
ಬೆಂಗಳೂರು ಮೆಟ್ರೋ ನಿಲ್ದಾಣಗಳು ಮಕ್ಕಳಿಗೆ ಮಾರಕ; ಆಟವಾಡುತ್ತಲೇ ಟ್ರ್ಯಾಕ್‌ಗೆ ಬಿದ್ದ 4 ವರ್ಷದ ಮಗು
ಬೆಂಗಳೂರು ಮೆಟ್ರೋ ಬಗ್ಗೆ ಸಂಕ್ಷಿಪ್ತ ಮಾಹಿತಿ
ನಮ್ಮ ಮೆಟ್ರೋ ಸೇವೆ ಆರಂಭ: 2011ರ ಅಕ್ಟೋಬರ್ 20 (12 ವರ್ಷಗಳ ಹಿಂದೆ)
ನಿಲ್ದಾಣಗಳ ಸಂಖ್ಯೆ: 66
ಸಂಸ್ಥೆ: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL)
ದೈನಂದಿನ ಸರಾಸರಿ ಪ್ರಯಾಣಿಕರು: 6,36,000 (ಏಪ್ರಿಲ್ 2023-ಮಾರ್ಚ್ 2024)
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ: ಮಹೇಶ್ವರ ರಾವ್ (MD)
ಗ್ರಾಹಕ ಸೇವೆ: 1800 4251 2345
ಗರಿಷ್ಠ ವೇಗ: 80 km/h (50 mph)
ಅತ್ಯಧಿಕ ಪ್ರಯಾಣಿಕರ ಸಂಚಾರ : 8.26 ಲಕ್ಷ (2024ರ ಆ.6)