ಬೀದರ್: 2 ವರ್ಷದ ಮಗುವಿನ ಮೇಲೆ ಹರಿದ ಇನ್ನೋವಾ ಕಾರು, ಸ್ಥಳದಲ್ಲೇ ಕಂದಮ್ಮ ಸಾವು

Published : Dec 27, 2023, 08:50 AM ISTUpdated : Dec 27, 2023, 12:16 PM IST
ಬೀದರ್: 2 ವರ್ಷದ ಮಗುವಿನ ಮೇಲೆ ಹರಿದ ಇನ್ನೋವಾ ಕಾರು, ಸ್ಥಳದಲ್ಲೇ ಕಂದಮ್ಮ ಸಾವು

ಸಾರಾಂಶ

ಆಟವಾಡುತ್ತ ರಸ್ತೆ ಬದಿಯಲ್ಲಿ‌ ಮಗು ಬಂದಿದ್ದ ವೇಳೆ ಇನ್ನೋವಾ ಕಾರು ಹರಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಮಗುವಿನ ಮೇಲೆ ಕಾರು ಹರಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. 

ಬೀದರ್(ಡಿ.27):  ಇನ್ನೋವಾ ಕಾರು ಹರಿದ ಪರಿಣಾಮ 2 ವರ್ಷದ ಮಗು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ  ‌ನಗರದ ಹಾರೋಗೆರಿ ಬಳಿ ನಡೆದಿದೆ. ಗುರುಪಾದಪ್ಪಾ ನಾಗಮಾರಪಳ್ಳಿ ಆಸ್ಪತ್ರೆ ಎದುರು ಘಟನೆ ನಡೆದಿದೆ. 

2 ವರ್ಷದ ಬಸವಚೇತನ ಮೃತಪಟ್ಟ ದುರ್ದೈವಿ ಮಗು. ಹಾರೊಗೇರಿ‌ ನಿವಾಸಿ ಸತೀಶ ಪಾಟೀಲ ಹಾಗೂ ಸಂಗೀತಾ ದಂಪತಿ ಪುತ್ರ ಬಸವಚೇತನ.

ಬೈಕ್ ಡಿಕ್ಕಿಯಾಗಿ ಪಾದಾಚಾರಿ ಸಾವು, ಸ್ಥಳಕ್ಕೆ ಧಾವಿಸಿದ ಕುಟುಂಬಸ್ಥರು ಕಾರು ಅಪಘಾತದಲ್ಲಿ ನಿಧನ!

ಆಟವಾಡುತ್ತ ರಸ್ತೆ ಬದಿಯಲ್ಲಿ‌ ಮಗು ಬಂದಿದ್ದ ವೇಳೆ ಇನ್ನೋವಾ ಕಾರು ಹರಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಮಗುವಿನ ಮೇಲೆ ಕಾರು ಹರಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಗಾಂಧಿಗಂಜ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ.

PREV
Read more Articles on
click me!

Recommended Stories

ಸಿದ್ಧರಾಮಯ್ಯ ಮಾತು ಎತ್ತಿದ್ರೆ ಸಾಬ್ರು ಸಾಬ್ರು ಅಂತ ಜಪ ಮಾಡ್ತಾರೆ: ಶಾಸಕ ಯತ್ನಾಳ್ ವ್ಯಂಗ್ಯ!
ಎಚ್‌ಡಿ ಕುಮಾರಸ್ವಾಮಿ, ನಿರ್ಮಲಾ ಸೀತಾರಾಮನ್‌ ವಿರುದ್ಧ ಗುಡುಗಿದ ಸಿಎಂ ಸಿದ್ದರಾಮಯ್ಯ