ಲಿಂಗಾಯತರು ಹಿಂದೂಗಳಲ್ಲ ಎಂಬ ನಿರ್ಣಯ ಸ್ವಾಗತಾರ್ಹ: ಜಾಮದಾರ

By Kannadaprabha News  |  First Published Dec 27, 2023, 8:36 AM IST

ದಾವಣಗೆರೆಯಲ್ಲಿ ನಡೆದ ಅಖಿಲ ಭಾರತ ವೀರಶೈವ ಮಹಸಭಾದ 24 ನೇ ಅಧಿವೇಶನದಲ್ಲಿ ವೀರಶೈವ ಮಹಾಸಭಾ ಎಂಟು ನಿರ್ಣಯಗಳನ್ನು ಕೈಗೊಂಡಿದೆ. 5ನೇ ನಿರ್ಣಯದಲ್ಲಿ ಲಿಂಗಾಯತರು ಹಿಂದೂಗಳಲ್ಲ ಎಂಬ ನಿರ್ಣಯಕ್ಕೆ ನಮ್ಮ ಬೆಂಬಲವಿದೆ. ಜನಗಣತಿಯಲ್ಲಿ ಲಿಂಗಾಯತ ಎಂದು ಬರೆಸಿಕೊಳ್ಳಬಹುದು ಎಂದೂ ನಿರ್ಣಯಿಸಲಾಗಿದೆ. ಈ ಮೂಲಕ ಅಖಿಲ ಭಾರತ ವೀರಶೈವ ಮಹಾಸಭೆಗೆ ಕೊನೆಗೂ ಜ್ಞಾನೋದಯ ಆಗಿದೆ: ಜಾಗತಿಕ ಲಿಂಗಾಯತ ಮಹಾಸಭಾ ಪ್ರಧಾನ ಕಾರ್ಯದರ್ಶಿ ಡಾ.ಎಸ್‌.ಎಂ.ಜಾಮದಾರ 


ಬೆಳಗಾವಿ(ಡಿ.27):  ಅಖಿಲ ಭಾರತ ವೀರಶೈವ ಮಹಾಸಭೆಯ 24ನೇ ಅಧಿವೇಶನದಲ್ಲಿ ಲಿಂಗಾಯತರು ಹಿಂದೂಗಳಲ್ಲ ಎಂಬ ನಿರ್ಣಯ ಕೈಗೊಂಡಿರುವುದು ಸ್ವಾಗತಾರ್ಹ ಎಂದು ಜಾಗತಿಕ ಲಿಂಗಾಯತ ಮಹಾಸಭಾ ಪ್ರಧಾನ ಕಾರ್ಯದರ್ಶಿ ಡಾ.ಎಸ್‌.ಎಂ.ಜಾಮದಾರ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆಯಲ್ಲಿ ನಡೆದ ಅಖಿಲ ಭಾರತ ವೀರಶೈವ ಮಹಸಭಾದ 24 ನೇ ಅಧಿವೇಶನದಲ್ಲಿ ವೀರಶೈವ ಮಹಾಸಭಾ ಎಂಟು ನಿರ್ಣಯಗಳನ್ನು ಕೈಗೊಂಡಿದೆ. 5ನೇ ನಿರ್ಣಯದಲ್ಲಿ ಲಿಂಗಾಯತರು ಹಿಂದೂಗಳಲ್ಲ ಎಂಬ ನಿರ್ಣಯಕ್ಕೆ ನಮ್ಮ ಬೆಂಬಲವಿದೆ. ಜನಗಣತಿಯಲ್ಲಿ ಲಿಂಗಾಯತ ಎಂದು ಬರೆಸಿಕೊಳ್ಳಬಹುದು ಎಂದೂ ನಿರ್ಣಯಿಸಲಾಗಿದೆ. ಈ ಮೂಲಕ ಅಖಿಲ ಭಾರತ ವೀರಶೈವ ಮಹಾಸಭೆಗೆ ಕೊನೆಗೂ ಜ್ಞಾನೋದಯ ಆಗಿದೆ ಎಂದು ಹೇಳಿದರು.

Latest Videos

undefined

ಜಾತಿ ಗಣತಿ ವಿಚಾರದಲ್ಲಿ ಸಿದ್ದರಾಮಯ್ಯ ಯಾರ ಮುಲಾಜಿಗೂ ಒಳಗಾಗಬಾರದು: ಎಚ್. ವಿಶ್ವನಾಥ್

ಈ ಹಿಂದೆ ಲಿಂಗಾಯತ ಸ್ವತಂತ್ರ ಧರ್ಮಕ್ಕೆ ವೀರಶೈವ ಮಹಾಸಭಾ ವಿರೋಧಿಸಿತ್ತು. ವೀರಶೈವ ಲಿಂಗಾಯತ ಎಂದು ಕೇಂದ್ರಕ್ಕೆ ಪ್ರಸ್ತಾವನೆ ಕೊಟ್ಟರೆ ಸ್ವತಂತ್ರ ಧರ್ಮ ನಮಗೆ ಸಿಗಲ್ಲ. ಮೊದಲಿನಿಂದಲೂ ನಮ್ಮ ವಾದವೂ ಇದೇ ಆಗಿತ್ತು. 2015-16ರಲ್ಲಿ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣದಲ್ಲಿ ಬೃಹತ್ ಸಮಾವೇಶ ಆದವು. ಲಿಂಗಾಯತ ‌ಧರ್ಮಕ್ಕೆ ಸ್ವತಂತ್ರ ಧರ್ಮಕ್ಕಾಗಿ ದೇಶದ ಹಲವೆಡೆ ಸಮಾವೇಶಗಳಾದವು. ನಮ್ಮ ಹೋರಾಟಕ್ಕೆ ಅಂದು ವಿರೋಧ ವ್ಯಕ್ತಪಡಿಸಿದ್ದವು ಎಂದರು.

ಮೂವರು ಮಾತ್ರ ಪಂಚಾಚಾರ್ಯರು, ಬಿಜೆಪಿ ನಾಯಕ ಬಿ.ಎಸ್‌.ಯಡಿಯೂರಪ್ಪ, ಅಮಿತ್ ಶಾ, ಆರ್‌ಎಸ್‌ಎಸ್ ನಾಯಕರು ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮ ಕೊಡಿಸಲು ಬಿಡಲ್ಲ ಎಂದು ಹೇಳಿದ್ದರು. ದಾವಣಗೆರೆಯಲ್ಲಿ ನಡೆದ ಸಮಾವೇಶದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ಭಾಗಿಯಾಗಿದ್ದರು. ಪಂಚಾಚಾರ್ಯರ ಪೈಕಿ ಮೂವರು ಸ್ವಾಮೀಜಿಗಳು ಸಮಾವೇಶದಲ್ಲಿದ್ದರು. ಸಮಾವೇಶದುದ್ದಕ್ಕೂ ಬಸವಣ್ಣನ ಬಗ್ಗೆಯೇ ಎಲ್ಲ ನಾಯಕರು ಭಾಷಣ ಮಾಡಿದರು. ಈಗ ಬಿಜೆಪಿ ನಾಯಕರು, ಪಂಚಾಚಾರ್ಯರು ಹಾಗೂ ಆರ್‌ಎಸ್‌ಎಸ್ ನಾಯಕರು ತಮ್ಮ ನಿಲುವು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ವಚನ ಸಾಹಿತ್ಯದ ಪರಿಣಾಮ ಲಿಂಗಾಯತ ‌ಸಮಾಜ ಇಂದು ಜಾಗೃತಗೊಂಡಿದೆ. ಗುಪ್ತಚರ ಇಲಾಖೆ ಮಾಹಿತಿ ಪ್ರಕಾರ ಈ ಅಧಿವೇಶನದಲ್ಲಿ ಕೇವಲ 10 ಸಾವಿರ ಜನರಿದ್ದರು. ಆದರೆ, ವೀರಶೈವ ಮಹಾಸಭಾದವರು ನಾಲ್ಕು ಲಕ್ಷ ಜನರು ಸೇರುತ್ತಾರೆ ಎಂದಿದ್ದರು. ವಾಹನ ಸೌಕರ್ಯ, ಊಟದ ವ್ಯವಸ್ಥೆ ಇದ್ದರೂ ಜನ ವೀರಶೈವ ಮಹಾಸಭಾ ಅಧಿವೇಶನಕ್ಕೆ ಹೋಗಿಲ್ಲ. ಇದು ಲಿಂಗಾಯತ ಸಮಾಜ ಜಾಗೃತಿಗೊಂಡಿರುವ ಪರಿಣಾಮ ಆಗಿದೆ. ವೀರಶೈವ ಮಹಾಸಭಾಕ್ಕೆ 109 ವರ್ಷಗಳ ಇತಿಹಾಸ ಇದೆ. ಆದರೆ ಕಾಲ‌ಕಾಲಕ್ಕೆ ವೀರಶೈವ ಮಹಾಸಭಾದ ನಿಲುವು ಬದಲಾಗುತ್ತ ಬಂದಿದೆ. ವೀರಶೈವ ಮಹಾಸಭೆ ರಾಜಕೀಯ ಪುಡಾರಿಗಳಿರುವ ಸಂಘಟನೆ ಎಂದು ಆರೋಪಿಸಿದರು.

900 ವರ್ಷಗಳ ಕಾಲ ಬಸವಣ್ಣ ಬರೆದ ವಚನಗಳನ್ನು ಬಚ್ಚಿಡಲಾಗಿತ್ತು. ಶ್ರೀಮಂತರ ಮನೆ, ಮಠಗಳಲ್ಲಿ ಈ ವಚನ ಬಚ್ಚಿಟ್ಟವರು ಯಾರು ಎಂದು ಪ್ರಶ್ನಿಸಿದ ಜಾಮದಾರ, 1923 ರಲ್ಲಿ ಫ.ಗು ಹಳಕಟ್ಟಿ ಅವರ ಸಂಶೋಧನೆ ಪರಿಣಾಮ ವಚನ ಸಾಹಿತ್ಯ ಪ್ರಕಟವಾದವು. ಫ.ಗು.ಹಳಕಟ್ಟಿ ಅವರು 23 ಸಾವಿರ ವಚನಗಳನ್ನು ಸಂಗ್ರಹಿಸಿ ಪ್ರಕಟಿಸಿದರು. ವಚನಗಳ ಮೂಲಕ ಲಿಂಗಾಯತರ ನಂಬಿಕೆ, ಆಚರಣೆ, ಸಂಸ್ಕಾರ ತಿಳಿಯಲು ಸಾಧ್ಯವಾಯಿತು. ಲಿಂಗಾಯತರಿಗೆ ಅರಿವಾದಂತೆ ಈಗ ವೀರಶೈವರಿಗೂ ಅರಿವಾಗಿದ್ದು, ಸ್ವಾಗತಾರ್ಹ ಎಂದು ಹೇಳಿದರು.

ರಾಜ್ಯದಲ್ಲಿ ವೈಜ್ಞಾನಿಕವಾಗಿ ಜಾತಿ ಸಮೀಕ್ಷೆ ಮಾಡಿ: ಶಾಸಕ ಶಾಮನೂರು ಶಿವಶಂಕರಪ್ಪ

ಜಾಗತಿಕ ಲಿಂಗಾಯತಮಹಾಸಭಾ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ, ಎಸ್‌.ಜಿ.ಸಿದ್ನಾಳ ಮೊದಲಾದವರು ಇದ್ದರು.

ಈ ಹಿಂದೆ ಲಿಂಗಾಯತ ಸ್ವತಂತ್ರ ಧರ್ಮಕ್ಕೆ ವೀರಶೈವ ಮಹಾಸಭಾ ವಿರೋಧಿಸಿತ್ತು. ವೀರಶೈವ ಲಿಂಗಾಯತ ಎಂದು ಕೇಂದ್ರಕ್ಕೆ ಪ್ರಸ್ತಾವನೆ ಕೊಟ್ಟರೆ ಸ್ವತಂತ್ರ ಧರ್ಮ ನಮಗೆ ಸಿಗಲ್ಲ. ಮೊದಲಿನಿಂದಲೂ ನಮ್ಮ ವಾದವೂ ಇದೇ ಆಗಿತ್ತು. 2015-16 ರಲ್ಲಿ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣದಲ್ಲಿ ಬೃಹತ್ ಸಮಾವೇಶ ಆದವು. ಲಿಂಗಾಯತ ‌ಧರ್ಮಕ್ಕೆ ಸ್ವತಂತ್ರ ಧರ್ಮಕ್ಕಾಗಿ ದೇಶದ ಹಲವೆಡೆ ಸಮಾವೇಶಗಳಾದವು. ನಮ್ಮ ಹೋರಾಟಕ್ಕೆ ಅಂದು ವಿರೋಧ ವ್ಯಕ್ತಪಡಿಸಿದ್ದವು ಎಂದು ಜಾಗತಿಕ ಲಿಂಗಾಯತ ಮಹಾಸಭಾ ಪ್ರಧಾನ ಕಾರ್ಯದರ್ಶಿ ಡಾ.ಎಸ್‌.ಎಂ.ಜಾಮದಾರ ತಿಳಿಸಿದ್ದಾರೆ. 

click me!