ಕೊರೋನಾ ಅಟ್ಟಹಾಸ: ಚಿಕಿತ್ಸೆ ಸಿಗದೇ ಇಬ್ಬರು ಮಹಿಳೆಯರ ಸಾವು

By Kannadaprabha News  |  First Published Jul 30, 2020, 1:34 PM IST

ಜಿಮ್ಸ್‌ ಆಸ್ಪತ್ರೆ, ಇಎಸ್‌ಐಸಿ ಆಸ್ಪತ್ರೆ, ನಾಲ್ಕೈದು ಖಾಸಗಿ ಆಸ್ಪತ್ರೆಗೆ ತೆಗೆದುಕೊಂಡು ಸುತ್ತಾಡಿದರೂ ವೆಂಟಿಲೇಟರ್‌ ಸಿಗದೇ ಮೃತರಾದ ಮಹಿಳೆ| ಸಕಾಲಕ್ಕೆ ಚಿಕಿತ್ಸೆ ಸಿಗದೆ ಆ್ಯಂಬುಲೆನ್ಸ್‌ನಲ್ಲೇ ಮೃತಪಟ್ಟ ಮಹಿಳೆ|


ಕಲಬುರಗಿ/ಯಾದಗಿರಿ(ಜು.30): ಒಬ್ಬ ಮಹಿಳೆಗೆ ವೆಂಟಿಲೇಟರ್‌ ಸಿಗದೇ ಸಾವನ್ನಪ್ಪಿದರೆ, ಮತ್ತೊಬ್ಬ ಮಹಿಳೆ ಸೂಕ್ತ ಚಿಕಿತ್ಸೆ ಸಿಗದೇ ಸಾವನ್ನಪ್ಪಿರುವ ಅಮಾನವೀಯ ಘಟನೆ ರಾಜ್ಯದಲ್ಲಿ ಬುಧವಾರ ನಡೆದಿದೆ.

ಕಲಬುರಗಿ ಜಿಲ್ಲೆಯ ವಾಡಿ ಪಟ್ಟಣ ಮರಾಠಿ ಬಡಾವಣೆಯ ನಿವಾಸಿ ಮಹಿಳೆಗೆ ಉಸಿರಾಟದ ಸಮಸ್ಯೆ ಇತ್ತು. ಜಿಮ್ಸ್‌ ಆಸ್ಪತ್ರೆ, ಇಎಸ್‌ಐಸಿ ಆಸ್ಪತ್ರೆ, ನಾಲ್ಕೈದು ಖಾಸಗಿ ಆಸ್ಪತ್ರೆಗೆ ತೆಗೆದುಕೊಂಡು ಸುತ್ತಾಡಿದರೂ ವೆಂಟಿಲೇಟರ್‌ ಸಿಗದೇ ಮೃತರಾಗಿದ್ದಾರೆ. 

Tap to resize

Latest Videos

'ಸರ್ಕಾರದ ವೈಫಲ್ಯದಿಂದ ಕರ್ನಾಟಕ ಕೊರೋನಾ ಹಾಟ್‌ಸ್ಪಾಟ್‌ ಆಗುತ್ತಿದೆ'

ಅದೇ ರೀತಿ ವೈದ್ಯರು ಇಲ್ಲವೆಂಬ ಕಾರಣಕ್ಕೆ ಸಕಾಲಕ್ಕೆ ಚಿಕಿತ್ಸೆ ಸಿಗದೆ ಆ್ಯಂಬುಲೆನ್ಸ್‌ನಲ್ಲೇ ಮಹಿಳೆಯೊಬ್ಬಳು ಮೃತಪಟ್ಟಿರುವ ಘಟನೆ ಯಾದಗಿರಿಯ ಕೋವಿಡ್‌ ಆಸ್ಪತ್ರೆಯ ಆವರಣದಲ್ಲಿ ನಡೆದಿದೆ. ಆದರೆ, ಅಧಿಕ ರಕ್ತದೊತ್ತಡ ಹಾಗೂ ತೀವ್ರ ಹೃದಯಾಘಾತದಿಂದ ಮಹಿಳೆ ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯ ಆಗಿಲ್ಲ ಎಂದು ಅರೋಗ್ಯಧಿಕಾರಿಗಳು ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
 

click me!