ಕೊಲ್ಲುವರು ಒಂದು ಕಡೆ ಇದ್ದರೆ ಕಾಯುವರು ಮತ್ತೊಂದು ಕಡೆ ಇರತಾರೆ: ನಿಡುಮಾಮಿಡಿ ಮಠದ ಶ್ರೀ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ
ಚಿಕ್ಕಬಳ್ಳಾಪುರ(ಸೆ.25): ನನ್ನ ಮುಗಿಸಲಿಕ್ಕೆ ಪುಣ್ಯಾತ್ಮರು 2 ತಂಡ ರಚಿಸಿದ್ದರು. ಹಿಟ್ ಲಿಸ್ಟ್‌ನಲ್ಲಿ ಸಿದ್ದರಾಮಯ್ಯ, ಚಂಪಾ, ಲಲಿತಾ ನಾಯಕ್, ಕೆ.ಎಸ್.ಭಗವನ್ ಕೂಡ ಕೂಡ ಇದ್ದರು. ಆದರೆ ಕೊಲ್ಲುವರು ಒಂದು ಕಡೆ ಇದ್ದರೆ ಕಾಯುವರು ಮತ್ತೊಂದು ಕಡೆ ಇರತಾರೆಂದು ನಿಡುಮಾಮಿಡಿ ಮಠದ ಶ್ರೀ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ ಹೇಳಿದರು.
ಜಿಲ್ಲೆಯ ಗೌರಿಬಿದನೂರಲ್ಲಿ ಶನಿವಾರ ಚಿಂತಕ ಪ್ರೊ.ಬಿ.ಗಂಗಾಧರಮೂರ್ತಿ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶ್ರೀಗಳು, ಸಿದ್ದರಾಮಯ್ಯ ಇದ್ದಾಗ ಮೋದಿ ಶೇ.10 ಅಂತ ಕರೆಯುತ್ತಿದ್ದರಂತೆ. ಆದರೂ ಪರವಾಗಿಲ್ಲ. ನಮಗೆ ಶೇ.10 ಇರಲಿ. ಆದರೆ ಬಿಜೆಪಿ ಸರ್ಕಾರದ ರೀತಿ ಶೇ.40 ಆಗುವುದು ಬೇಡ ಎಂದು ಬಿಜೆಪಿ ಸರ್ಕಾರ ಭ್ರಷ್ಟಾಚಾರದ ವಿರುದ್ದ ನಿಡುಮಾಮಿಡಿ ಶ್ರೀ ವಾಗ್ದಾಳಿ ನಡೆಸಿದರು.
'ಬಿಎಸ್‌ವೈ ಸರಿಸಾಟಿಯಾಗಬಲ್ಲ ನಾಯಕ ಸದ್ಯಕ್ಕೆ ಯಾರೂ ಇಲ್ಲ'
ಕರ್ನಾಟಕದ ಜನ ಖಂಡಿತ ಬದಲಾವಣೆ ಬಯಸುತ್ತಿದ್ದಾರೆ. ಬೆಳವಣಿಗೆಯನ್ನು ಮತಗಳಾಗಿ ಪರಿವರ್ತಿಸಬೇಕು. ಆ ಸಾಲಿನಲ್ಲಿ ನಾಡಿನ ಸಮಾಜ ಬದಲಾವಣೆ ಬಯಸುವರು ನಿಲ್ಲಬೇಕಿದೆ. ಆ ಕಾರಣಕ್ಕಾಗಿಯೆ ಸಿದ್ದರಾಮಯ್ಯ ಕರ್ನಾಟಕದ ಭವಿಷ್ಯ ಆಶಾಕಿರಣ ಎಂದು ನಿಡುಮಾಮಿಡಿ ಮಠದ ಶ್ರೀ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ ಹೇಳಿದರು.