ರಾಜ್ಯದಲ್ಲಿ 5ನೇ ಕೊರೋನಾ ಪ್ರಕಣ ದೃಢಪಟ್ಟ ಬೆನ್ನಲ್ಲೇ ಇದೀಗ ಉಡುಪಿಯಲ್ಲಿ ಇಬ್ಬರು ವಿದ್ಯಾರ್ಥಿಗಳು ಕೊರೋನಾ ಬಾಧಿತರಾಗಿರುವ ಸಂಶಯ ವ್ಯಕ್ತವಾಗಿದೆ. ಇಬ್ಬರೂ ವಿದ್ಯಾರ್ಥಿಗಳೂ ವಿದೇಶದಿಂದ ಬಂದವರಾಗಿದ್ದು, ಪ್ರದೇಶದಲ್ಲಿ ಆತಂಕ ಸೃಷ್ಟಿಯಾಗಿದೆ.
ಉಡುಪಿ(ಮಾ.13): ರಾಜ್ಯದಲ್ಲಿ 5ನೇ ಕೊರೋನಾ ಪ್ರಕಣ ದೃಢಪಟ್ಟ ಬೆನ್ನಲ್ಲೇ ಇದೀಗ ಉಡುಪಿಯಲ್ಲಿ ಇಬ್ಬರು ವಿದ್ಯಾರ್ಥಿಗಳು ಕೊರೋನಾ ಬಾಧಿತರಾಗಿರುವ ಸಂಶಯ ವ್ಯಕ್ತವಾಗಿದೆ. ಇಬ್ಬರೂ ವಿದ್ಯಾರ್ಥಿಗಳೂ ವಿದೇಶದಿಂದ ಬಂದವರಾಗಿದ್ದು, ಪ್ರದೇಶದಲ್ಲಿ ಆತಂಕ ಸೃಷ್ಟಿಯಾಗಿದೆ.
ಉಡುಪಿಯಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಕೊರೋನಾ ವೖರಸ್ ಬಾಧಿಸಿರುವ ಶಂಕೆ ಉಂಟಾಗಿದ್ದು, ಮಣಿಪಾಲ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಲ್ಲಿ ಕೊರೋನಾ ಲಕ್ಷಣಗಳು ಕಂಡು ಬಂದಿದೆ.
undefined
ಬೆಂಗಳೂರಲ್ಲಿ ಕೊರೋನಾ ಚಿಕಿತ್ಸೆಗೆ ಪ್ರತ್ಯೇಕ ಆಸ್ಪತ್ರೆ
ವಿದ್ಯಾರ್ಥಿಗಳು ಅಮೇರಿಕಾ ಮತ್ತು ಕುವೈಟ್‌ನಿಂದ ಬಂದಿದ್ದು, ಕೊರೋನಾದ ಲಕ್ಷಣ ಕಂಡು ಬಂದ ಹಿನ್ನೆಲೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಐಸೋಲೇಟೆಡ್ ವಾರ್ಡ್ನಲ್ಲಿ ಚಿಕಿತ್ಸೆಗೂ ವ್ಯವಸ್ಥೆ ಮಾಡಲಾಗಿದೆ.
ಉಡುಪಿ ಡಿಎಚ್ ಒ ಡಾ. ಸುಧೀರ್ ಚಂದ್ರ ಸೂಡಾ ಈ ಬಗ್ಗೆ ಮಾಹಿತಿ ನೀಡಿದ್ದು, ಇಬ್ಬರು ವಿದ್ಯಾರ್ಥಿಗಳ ರಕ್ತದ ಮಾದರಿಯನ್ನು ಬೆಂಗಳೂರಿಗೆ ರವಾನೆ ಮಾಡಲಾಗಿದೆ. ಎರಡು ದಿನದಲ್ಲಿ ವೈದ್ಯಕೀಯ ವರದಿ ಬರಲಿದ್ದು, ವಿದ್ಯಾರ್ಥಿಗಳ ಮೂಲದ ಬಗ್ಗೆ ವೈದ್ಯರು ಗೌಪ್ಯತೆ ಕಾಪಾಡಿದ್ದಾರೆ.