ಯಾದಗಿರಿ: ಜವರಾಯನ ಅಟ್ಟಹಾಸಕ್ಕೆ ರಾಜ್ಯಮಟ್ಟದ ಇಬ್ಬರು ಖೋಖೋ ಕ್ರೀಡಾಪಟುಗಳು ಸಾವು

By Girish Goudar  |  First Published Dec 23, 2022, 7:19 PM IST

ಸುರಪುರ ನಗರದಿಂದ ದೇವರಗೋನಾಲಕ್ಕೆ ಆಟೋದಲ್ಲಿ ತೆರಳುತ್ತಿರುವಾಗ ಮಹಾರಾಷ್ಟ್ರ ಮೂಲದ ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲಿಯೇ ಪ್ರತಿಭಾವಂತ ಕ್ರೀಡಾಪಟುಗಳ ಸಾವು


ಯಾದಗಿರಿ(ಡಿ.23): ಆಟೋ ಮತ್ತು ಟ್ರ್ಯಾಕ್ಟರ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ ಪರಿಣಾಮ ರಾಜ್ಯಮಟ್ಟದ ಇಬ್ಬರು ಖೋಖೋ ಕ್ರೀಡಾಪಟುಗಳು ಸಾವನ್ನಪ್ಪಿರುವ ಘಟನೆ ನಿನ್ನೆ(ಗುರುವಾರ) ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಸಿದ್ದಾಪೂರ ಸಮೀಪ ನಡೆದಿದೆ. 

ನಿನ್ನೆ ರಾತ್ರಿ 10.30ರ ಸುಮಾರಿಗೆ ಸುರಪುರ ನಗರದಿಂದ ದೇವರಗೋನಾಲಕ್ಕೆ ಆಟೋದಲ್ಲಿ ತೆರಳುತ್ತಿರುವಾಗ ಮಹಾರಾಷ್ಟ್ರ ಮೂಲದ ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲಿಯೇ ಪ್ರತಿಭಾವಂತ ಕ್ರೀಡಾಪಟುಗಳು ಸಾವಿಗಿಡಾಗಿದ್ದಾರೆ.

Tap to resize

Latest Videos

undefined

ಮಣಿಪುರದಲ್ಲಿ ಶಾಲಾ ಬಸ್ ಪಲ್ಟಿ: 7 ವಿದ್ಯಾರ್ಥಿಗಳ ಸಾವು, ಹಲವರ ಸ್ಥಿತಿ ಗಂಭೀರ

ಮೃತ ದುರ್ದೈವಿಗಳನ್ನು ದೇವರಗೋನಾಲ ಮೂಲದ ವೆಂಕಟೇಶ್ ಬಂಟನೂರ ಮತ್ತು ಸಿರಸಿ ಮೂಲದ ನಾರಾಯಣ ಮರಾಠ ಎಂದು ತಿಳಿದು ಬಂದಿದೆ. ಅಪಘಾತದಲ್ಲಿ ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಸುರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 
 

click me!