ಕೊಪ್ಪಳ: ಗವಿಸಿದ್ದೇಶ್ವರ ಜಾತ್ರೆಗೆ ತೆರಳಿದ್ದ ಬೈಕ್‌ ಅಪಘಾತ, ಇಬ್ಬರು ಯುವಕರ ಸಾವು

Kannadaprabha News   | Asianet News
Published : Feb 01, 2021, 10:50 AM IST
ಕೊಪ್ಪಳ: ಗವಿಸಿದ್ದೇಶ್ವರ ಜಾತ್ರೆಗೆ ತೆರಳಿದ್ದ ಬೈಕ್‌ ಅಪಘಾತ, ಇಬ್ಬರು ಯುವಕರ ಸಾವು

ಸಾರಾಂಶ

ಬೈಕ್‌-ಲಾರಿ ನಡುವೆ ಅಪಘಾತ: ಇಬ್ಬರ ಸಾವು| ಕೊಪ್ಪಳ ತಾಲೂಕಿನ ಕೋಳೂರು ಕ್ರಾಸ್‌ ಬಳಿ ನಡೆದ ಘಟನೆ| ಜಾತ್ರೆಗೆಂದು ಕುಕನೂರಿನಿಂದ ಕೊಪ್ಪಳಕ್ಕೆ ಆಗಮಿಸಿದ್ದ ಯುವಕರು| ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಕೊಪ್ಪಳ ಗ್ರಾಮೀಣ ಪೊಲೀಸ್‌ ಠಾಣೆಯ ಪೊಲೀಸರು| 

ಕೊಪ್ಪಳ(ಫೆ.01): ತಾಲೂಕಿನ ಕೋಳೂರು ಕ್ರಾಸ್‌ ಬಳಿ ಲಾರಿ-ಬೈಕ್‌ ನಡುವೆ ನಡೆದ ಅಪಘಾತದಲ್ಲಿ ಇಬ್ಬರು ಮೃತಪಟ್ಟ ಘಟನೆ ಭಾನುವಾರ ಸಂಭ​ವಿ​ಸಿದೆ. ಮೃತರನ್ನು ಕುಕನೂರು ಪಟ್ಟಣದ ಗಣೇಶ (21) ಹಾಗೂ ರಾಧಿಕಾ (19) ಎಂದು ಗುರುತಿಸಲಾಗಿದೆ. 

ಇವರು ಜಾತ್ರೆಗೆಂದು ಕೊಪ್ಪಳಕ್ಕೆ ಆಗಮಿಸಿದ್ದರು. ಆದರೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಲಾರಿಗೆ ಡಿಕ್ಕಿ ಹೊಡೆ​ದು ಇಬ್ಬರು ಸ್ಥಳದಲ್ಲಿಯೇ ಮೃತ​ಪ​ಟ್ಟಿ​ದ್ದಾರೆ.

ಹೊಸಪೇಟೆ: ಬೈಕ್‌ನಿಂದ ಬಿದ್ದು ಕೊಪ್ಪಳದ ಯುವಕರಿಬ್ಬರ ದುರ್ಮರಣ

ದುರ್ಘಟನೆ ನಡೆದ ಸ್ಥಳಕ್ಕೆ ಕೊಪ್ಪಳ ಗ್ರಾಮೀಣ ಪೊಲೀಸ್‌ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.


 

PREV
click me!

Recommended Stories

ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್