ಮಸ್ಕಿ: ತುತ್ತಿನ ಚೀಲ ತುಂಬಿಸಿಕೊಳ್ಳಲು ಹೈದರಾಬಾದ್‌ನಿಂದ ಬಂದಿದ್ದ ಇಬ್ಬರು ಯುವಕರ ಸಾವು

By Kannadaprabha News  |  First Published Oct 30, 2020, 3:35 PM IST

ಮದುವೆ ಕಾರ್ಯಕ್ರಮಕ್ಕೆ ದೀಪಾಲಂಕಾರ ಕೆಲಸ ಮಾಡಲು ಹೈದ್ರಾಬಾದ್‌ನಿಂದ ಬಂದಿದ್ದ ಇಬ್ಬರು ಯುವಕರ ಸಾವು| ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಶಂಕರನಗರ ಕ್ಯಾಂಪ್‌ ಹತ್ತಿರ ನಡೆದ ಘಟನೆ| ಕವಿತಾಳ ಠಾಣೆ ಪೊಲೀಸರು ಹಾಗೂ ಅಗ್ನಿ ಶಾಮಕ ಇಲಾಖೆ ಸಿಬ್ಬಂದಿಯಿಂದ ಶೋಧ ಕಾರ್ಯ| 
 


ಮಸ್ಕಿ(ಅ.30): ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಶಂಕರನಗರ ಕ್ಯಾಂಪ್‌ ಹತ್ತಿರ 62ನೇ ತುಂಗಭದ್ರಾ ಉಪ ಕಾಲುವೆಯಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ನೀರು ಪಾಲಾಗಿರುವ ಘಟನೆ ಗುರುವಾರ ಜರುಗಿದೆ. 

ಸಮೀಪದ ಶಂಕರನಗರ ಕ್ಯಾಂಪ್‌ನಲ್ಲಿ ಮದುವೆ ಕಾರ್ಯಕ್ರಮಕ್ಕೆ ದೀಪಾಲಂಕಾರ (ಎಲೆಕ್ಟ್ರಿಕಲ್‌) ಕೆಲಸ ಮಾಡಲು ಹೈದ್ರಾಬಾದ್‌ನಿಂದ ಬಂದಿದ್ದ ದಯಾ (18) ಮತ್ತು ಶಿವ (19) ಇಬ್ಬರು ಯುವಕರು ಈಜಾಡಲು 62ನೇ ಉಪ ಕಾಲುವೆ ಹೋಗಿದ್ದರು. ಆದರೆ ಕಾಲುವೆಯಲ್ಲಿ ಮೊದಲು ಒಬ್ಬ ಯುವಕ ನೀರಿನ ಆಳ ಗೊತ್ತಾಗದೆ ಇಳಿದ ನಂತರ ಕಾಲುವೆಯಲ್ಲಿ ಮುಳುಗುತ್ತಿರುವುದನ್ನು ಕಂಡು ಇನ್ನೊಬ್ಬ ಯುವಕ ಆತನ ರಕ್ಷಣೆ ಮಾಡಲು ಕಾಲುವೆಗೆ ಇಳಿದಿದ್ದಾನೆ. 

Latest Videos

undefined

ಅಚಿವರ್ಸ್‌ ಬುಕ್‌ ಆಫ್‌ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದ ಸಿಂಧನೂರಿನ ಬಾಲೆ

ಆದರೆ ಇಬ್ಬರೂ ಕಾಲುವೆಯ ನೀರಿನಲ್ಲಿ ನಾಪತ್ತೆಯಾಗಿದ್ದು. ಸ್ಥಳಕ್ಕೆ ಕವಿತಾಳ ಠಾಣೆ ಪೊಲೀಸರು ಹಾಗೂ ಅಗ್ನಿ ಶಾಮಕ ಇಲಾಖೆ ಸಿಬ್ಬಂದಿಗಳು ಧಾವಿಸಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
 

click me!