'ವಾಮಮಾರ್ಗದಿಂದ ಅಧಿಕಾರ ಹಿಡಿಯಲು ಬಿಜೆಪಿ ಹುನ್ನಾರ'

By Kannadaprabha News  |  First Published Oct 30, 2020, 3:24 PM IST

ಸಂಘದ ಸದಸ್ಯರನ್ನು ಯಾವುದೇ ಕಾರಣವಿಲ್ಲದೆ ತೆಗೆದುಹಾಕಲಾಗಿದೆ| ಸಂಘಕ್ಕೆ 1466 ಸದಸ್ಯರಿದ್ದಾರೆ. ಆದರೆ ಚುನಾವಣೆಯಲ್ಲಿ ವಾಮಮಾರ್ಗವಾಗಿ ಗೆಲ್ಲಲು ಬಿಜೆಪಿ ಪಕ್ಷವು 1195 ಸದಸ್ಯರ ಹೆಸರನ್ನು ತೆಗೆದು, ಕೇವಲ 271 ಸದಸ್ಯರನ್ನಷ್ಟೇ ಉಳಿಸಿಕೊಂಡಿದೆ| ಅಫಜಲ್ಪುರ ಶಾಸಕ ಪಾಟೀಲ್‌ ಆರೋಪ| 


ಕಲಬುರಗಿ(ಅ.30):ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ (ಟಿಎಪಿಸಿಎಂ)ದ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ನಿರ್ದೇಶಕರ ಚುನಾವಣೆಯಲ್ಲಿ ಬಿಜೆಪಿ ವಾಮ ಮಾರ್ಗದಿಂದ ಅಧಿಕಾರ ಹಿಡಿಯಲು ಹುನ್ನಾರ ನಡೆಸಿದೆ ಎಂದು ಅಫಜಲಪುರ ಶಾಸಕ ಎಂ.ವೈ.ಪಾಟೀಲ ಆರೋಪಿಸಿದ್ದಾರೆ. 

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದ ಸದಸ್ಯರನ್ನು ಯಾವುದೇ ಕಾರಣವಿಲ್ಲದೆ ತೆಗೆದುಹಾಕಲಾಗಿದೆ. ಸಂಘಕ್ಕೆ 1466 ಸದಸ್ಯರಿದ್ದಾರೆ. ಆದರೆ ಚುನಾವಣೆಯಲ್ಲಿ ವಾಮಮಾರ್ಗವಾಗಿ ಗೆಲ್ಲಲು ಬಿಜೆಪಿ ಪಕ್ಷವು 1195 ಸದಸ್ಯರ ಹೆಸರನ್ನು ತೆಗೆದು, ಕೇವಲ 271 ಸದಸ್ಯರನ್ನಷ್ಟೇ ಉಳಿಸಿಕೊಂಡಿದ್ದಾರೆ.ನಾಮಪತ್ರ ಸಲ್ಲಿಕೆಗೆ ಅ.29 ಕೊನೆಯದಿನವಾಗಿದೆ. ನ.5ರಂದು ಈ ಸಂಘಕ್ಕೆ ಚುನಾವಣೆ ನಡೆಯಲಿದೆ ಎಂದರು.

Tap to resize

Latest Videos

ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ ಅವರ ಕುಟುಂಬದ ಸದಸ್ಯರು, ಅವರ ನೌಕರ ವರ್ಗದವರು ಮತ್ತು ಬಿಜೆಪಿಯ ಕೆಲ ಕಾರ್ಯಕರ್ತರನ್ನು ಸದಸ್ಯರನ್ನಾಗಿ ಮುಂದುವರಿಸಿದ್ದಾರೆ. ತಾವು ಸಂಘದ ಸಂಸ್ಥಾಪಕ ಅಧ್ಯಕ್ಷನಾಗಿದ್ದರೂ ನನ್ನ ಹೆಸರನ್ನು ಸಹ ತೆಗೆದು ಹಾಕಲಾಗಿದೆ. ಹಳೆ ಸದಸ್ಯರನ್ನು ಮತ್ತೆ ಸಂಘದಲ್ಲಿ ಸೇರಿಸಿಕೊಳ್ಳದಿದ್ದರೆ ತಾಲೂಕಿನಲ್ಲಿ ದೊಡ್ಡಮಟ್ಟದ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

'ರಾಜ್ಯೋತ್ಸವ ಪುರಸ್ಕಾರ ಆಯ್ಕೆಯಲ್ಲೂ ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯ'

ಕಲಬುರಗಿ ರಾಷ್ಟ್ರೀಯ ವಿಪತ್ತು ಜಿಲ್ಲೆ ಘೋಷಣೆಗೆ ಆಗ್ರಹ:

ಇತ್ತೀಚೆಗೆ ಸುರಿದ ಮಳೆ ಹಾಗೂ ಪ್ರವಾಹದಿಂದಾಗಿ ಅಫಜಲ್ಪುರ ತಾಲೂಕಿಗೆ ಅತೀ ಹೆಚ್ಚು ಹಾನಿಯಾಗಿದೆ. ಲಕ್ಷಾಂತರ ಬೆಳೆ ಹಾಳು, ಸಾವಿರಾರು ಕುಟುಂಬಸ್ಥರು ಸಂಕಷ್ಟದಲ್ಲಿದ್ದಾರೆ. ಸಂತ್ರಸ್ತರಿಗೆ ತಕ್ಷಣ ಪರಿಹಾರ ನೀಡದೆ ಕಂದಾಯ ಸಚಿವರು ಕಾಟಾಚಾರಕ್ಕೆ ಭೇಟಿ ನೀಡಿ ಹೋದರು. ಜಿಲ್ಲಾ ಉಸ್ತುವಾರಿ ಸಚಿವರು ಇಲ್ಲಿಯವರೆಗೆ ಭೇಟಿ ನೀಡಿಲ್ಲ. ಇವರಿಗೆ ಚುನಾವಣೆ ಗೆಲ್ಲುವುದು ಮುಖ್ಯವಾಗಿದೆ ಹೊರತು ಜನರ ಸಂಕಷ್ಟದೂರ ಮಾಡಲಿಕ್ಕೆ ಮನಸ್ಸಿಲ್ಲ. ಅತಿವೃಷ್ಟಿಹಾಗೂ ನೆರೆ ಸಮಸ್ಯೆಯನ್ನು ನಿಭಾಯಿಸುವಲ್ಲಿ ಈ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಅಪಾದಿಸಿದ ಅವರು ಕೇಂದ್ರ ಸರ್ಕಾರದಿಂದ ಆದಷ್ಟುಬೇಗ ಪರಿಹಾರ ಕೊಡಿÜಸಲು ಕ್ರಮಕೈಗೊಳ್ಳಬೇಕು. ಕಲಬುರಗಿ ಜಿಲ್ಲೆಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಸಿಸಬೇಕೆಂದು ಆಗ್ರಹಿಸಿದರು.

ನೆರೆ ಸಂತ್ರಸ್ತರಿಗೆ ಸೂರು ಕಲ್ಪಿಸುವ ಕೆಲಸ ತುರ್ತಾಗಿ ಮಾಡಬೇಕು, ತಾತ್ಕಾಲಿಕವಾಗಿ ಅವರಿಗೆ ವಾಸಿಸಲು ಶೆಡ್‌ ಹಾಕಿ ಕೊಡಬೇಕು, ಸಂತ್ರಸ್ತರಿಗೆ ಕೆಲಸ ದೊರೆಯುವವರಿಗೆ ಆಹಾರಧಾನ್ಯ ಒದಗಿಸಬೇಕು, ಪ್ರವಾಹದ ನೀರು ನುಗ್ಗಿದ ಗ್ರಾಮಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಳಿರುವುದರಿಂದ ಅಲ್ಲಿನ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿ.ಪಂ. ಮಾಜಿ ಸದಸ್ಯ ತುಕಾರಾಮ ಪಾಟೀಲ, ಮತೀನ್‌ ಪಟೇಲ್‌, ಪ್ರಶಾಶ ಜಮಾದಾರ, ಮಹಾಂತೇಶ ಪಾಟೀಲ, ಸಿದ್ದು ಸಿರಸಗಿ ಇದ್ದರು.
 

click me!