ಎಮ್ಮೆ ಕಾಯಲು ಹೋಗಿದ್ದಾಗ ಘಟನೆ, ಮೃತದೇಹ ಪತ್ತೆ| ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಸಾಗರ ಗ್ರಾಮದಲ್ಲಿ ನಡೆದ ಘಟನೆ| ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು|
ಹಗರಿಬೊಮ್ಮನಹಳ್ಳಿ(ಆ.27): ತಾಲೂಕಿನ ಹಂಪಸಾಗರ ಎರಡನೇ ಕಾಲೋನಿಯ ವ್ಯಾಪ್ತಿಯಲ್ಲಿ ತುಂಗಭದ್ರಾ ಹಿನ್ನೀರಿನಲ್ಲಿ ಬಾಲಕ, ಬಾಲಕಿಯರೀರ್ವರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಜರುಗಿದೆ.
ಗ್ರಾಮದ ಟಿ. ಮಂಜುನಾಥನ ಪತ್ನಿ ರತ್ನಮ್ಮ ಹಾಗೂ ಟಿ. ಮಹೇಂದ್ರ ಪತ್ನಿ ನೀಲಮ್ಮ ಎನ್ನುವ ಸಹೋದರರ ಮಕ್ಕಳಾದ ಬಾಲಕ ಗೌತಮ್ (12), ಬಾಲಕಿ ಗಗನ (14) ಅವರು ಬುಧವಾರ ದನಗಳನ್ನು ಮೇಯಿಸಲು ಹೋಗಿದ್ದು, ಹಿನ್ನೀರಿನ ವ್ಯಾಪ್ತಿಯಲ್ಲಿ ಎಮ್ಮೆ ನೀರಿಗೆ ಇಳಿದಿದೆ. ಅದರ ಹಿಂದೆಯೇ ಹೋಗಿದ್ದ ಈ ಬಾಲಕ, ಬಾಲಕಿಯರು ಈಜು ಬಾರದೆ ನೀರಿನಲ್ಲಿ ಮುಳುಗಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಈ ಘಟನೆ ನಡೆದಿದ್ದು, ನಂತರ ವಿಷಯ ತಿಳಿದು ಸಾರ್ವಜನಿಕರು ನೀರಿಗಿಳಿದು ಮೃತದೇಹಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆಗಲೇ ಬಾಲಕ-ಬಾಲಕಿಯರಿಬ್ಬರು ಮೃತರಾಗಿದ್ದರು.
ಕೂಡ್ಲಿಗಿ ಬಳಿ ಲಾರಿಗೆ ಬಸ್ ಡಿಕ್ಕಿ: ಕಂಡಕ್ಟರ್ ದೇಹ ಹೊಕ್ಕ ಕಬ್ಬಿಣದ ರಾಡುಗಳು
ಹಗರಿಬೊಮ್ಮನಹಳ್ಳಿ ತಹಸೀಲ್ದಾರ್ ಶಿವಕುಮಾರ್ ಗೌಡ ಹಾಗೂ ಹಗರಿಬೊಮ್ಮನಹಳ್ಳಿ ಸಿಪಿಐ ಎಂ.ಎಂ. ಡಪೀನ್, ತಂಬ್ರಹಳ್ಳಿ ಪೊಲೀಸ್ ಠಾಣೆಯ ಪಿಎಸ್‌ಐ ಸರಳಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪಿಎಸ್‌ಐ ಸರಳಾ ದೂರು ದಾಖಲಿಸಿಕೊಂಡಿದ್ದಾರೆ.