ರೈತರಿಗೆ ಇಲ್ಲಿದೆ ಗುಡ್ ನ್ಯೂಸ್. ಕೊಟ್ಯಂತರ ರು. ಹಣ ಬಿಡುಗಡೆ ಮಾಡಲಾಗಿದ್ದು, ಅಗತ್ಯ ನೆರವು ನೀಡಲಾಗುತ್ತದೆ.
ಪುತ್ತೂರು (ಆ.27): ತೋಟಗಾರಿಕೆ ಇಲಾಖೆಯ ಮೂಲಕ ರೈತರಿಗೆ ರಿಯಾಯಿತಿ ದರದಲ್ಲಿ ಸವಲತ್ತು ಒದಗಿಸುವ ನಿಟ್ಟಿನಲ್ಲಿ 400 ಕೋ.ರು. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಪೌರಾಡಳಿತ, ರೇಷ್ಮೆ ಹಾಗೂ ತೋಟಗಾರಿಕೆ ಸಚಿವ ಡಾ. ಕೆ.ಸಿ. ನಾರಾಯಣ ಗೌಡ ಹೇಳಿದ್ದಾರೆ.
'ರೈತ ಯುವಕನ ವರಿಸಿದ ಹುಡುಗಿಗೆ ನೆರವು '...
undefined
ತೋಟಗಾರಿಕೆ ಇಲಾಖೆಗಳಲ್ಲಿ ರೈತರಿಗೆ ದೊರೆಯುವ ಸವಲತ್ತು ವಿತರಣೆ ವಿಳಂಬದ ಕುರಿತಂತೆ ಬುಧವಾರ ಪುತ್ತೂರಿನಲ್ಲಿ ಪತ್ರಕರ್ತರರ ಪ್ರಶ್ನೆಗೆ ಉತ್ತರಿಸಿದ ಅವರು, ಗುಣಮಟ್ಟಕಾಯ್ದುಕೊಳ್ಳುವ ಸಲುವಾಗಿ ಸಲಕರಣೆಗಳನ್ನು ಉತ್ಪನ್ನ ಮಾರಾಟ ಕಂಪೆನಿ ಮೂಲಕ ರೈತರಿಗೆ ನೇರವಾಗಿ ತಲುಪಿಸಲು ಸರ್ಕಾರ ನಿರ್ಧರಿಸಿದ ಕಾರಣ ಕೆಲ ಸವಲತ್ತು ಸಿಗಲು ವಿಳಂಬವಾಗಿತ್ತು.
ಕೊರೋನಾ ನಡುವೆ ಹಾಲು ಉತ್ಪಾದಕರಿಗೆ ಶಾಕ್; ಖರೀದಿ ದರ ಕಡಿತ.
ಈಗ ಆ ಎಲ್ಲ ಪ್ರಕ್ರಿಯೆ ಪೂರ್ಣಗೊಂಡು ಪೂರೈಕೆಗೆ ಸಂಬಂಧಿಸಿ ಸಚಿವ ಸಂಪುಟದ ಒಪ್ಪಿಗೆ ಪಡೆದು ಅನುದಾನ ಮಂಜೂರು ಮಾಡಲಾಗಿದೆ ಎಂದಿದ್ದಾರೆ.
ಈಗಾಲೇ ರೈತರಿಗೆ ನೆರವು ನೀಡುವ ಸಲುವಾಗಿ ಸರ್ಕಾರದಿಂದ ವಿವಿಧ ರೀತಿಯ ನೆರವು ನೀಡಲಾಗುತ್ತಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅಲ್ಲದೇ ಅಭಿವೃದ್ಧಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.