ರಸ್ತೆ ಬದಿ ಚರಂಡಿ ಕಟ್ಟೆಯಲ್ಲಿ ಮಾತನಾಡುತ್ತ ಕುಳಿತಿದ್ದ ವೃದ್ಧರ ಮೇಲೆ ಕ್ರೇನ್ ಹರಿದಿರುವ ಘಟನೆ ಕೊಳ್ಳೇಗಾಲದಲ್ಲಿ ನಡೆದಿದೆ. ಘಟನೆಯಲ್ಲಿ ಇಬ್ಬರು ವೃದ್ಧರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಚಾಮರಾಜನಗರ(ಫೆ.06): ರಸ್ತೆಬದಿಯ ಚರಂಡಿಯ ಸಮೀಪದಲ್ಲೆ ಮಾತನಾಡುತ್ತಾ (ಉಭಯ- ಕುಶಲೋಪರಿ ವಿಚಾರಿಸುತ್ತಿದ್ದ) ಕುಳಿತಿದ್ದ ವೃದ್ಧರಿಬ್ಬರಿಗೆ ಕ್ರೇನ್ ರೂಪದಲ್ಲಿ ಮೃತ್ಯು ಬಂದೆರಗಿರುವ ದಾರುಣ ಘಟನೆ ಕೊಳ್ಳೇಗಾಲ ತಾಲೂಕಿನ ಹೊಸ ಹಂಪಾಪುರ ಗ್ರಾಮ ಸಮೀಪದಲ್ಲೆ ಬುಧವಾರ ಸಂಜೆ ಜರುಗಿದೆ. ಹಳೇ ಹಂಪಾಪುರ ಗ್ರಾಮದ ಸಿದ್ದಯ್ಯ(74) ಹಾಗೂ ಹೊಸ ಹಂಪಾಪುರ ಗ್ರಾಮದ ಲಿಂಗರಾಜು (71) ಎಂಬುವರೇ ಮೃತಪಟ್ಟದುರ್ದೈವಿಗಳು.
ಇಬ್ಬರು ವೃದ್ಧರು ರಸ್ತೆ ಬದಿಯ ಬಾಕ್ಸ್ ಮಾದರಿಯ ಚರಂಡಿಯ ಸಮೀಪದಲ್ಲೆ ಉಭಯ ಕುಶಲೋಪರಿ ವಿಚಾರಿಸುತ್ತಾ ಕುಳಿತಿದ್ದರು ಎನ್ನಲಾಗಿದೆ. ಇಬ್ಬರು ಸಹ ಬುಧವಾರ ಸಂಜೆ 6 ಗಂಟೆ ಸುಮಾರಿನಲ್ಲಿ ಮಾತನಾಡುತ್ತಾ ಕುಳಿತಿದ್ದರು. ಹಂಪಾಪುರ ಕಡೆಯಿಂದ ಕೊಳ್ಳೇಗಾಲ ಕಡೆಗೆ ಹೋಗಲು ಆಗಮಿಸಿಸುತ್ತಿದ್ದ ಕ್ರೇನ್ ಶಂಕನಪುರದ ಕಡೆಗೆ ತಿರುವಿನಲ್ಲಿ ತಿರುಗಿಸುತ್ತಿದ್ದ ವೇಳೆ ಎದುರಿಗೆ ಬಂದ ಸೈಕಲ್ ಸವಾರನಿಗೆ ಡಿಕ್ಕಿ ಹೊಡೆಯವುದನ್ನು ತಪ್ಪಿಸಲು ಹೋಗಿ ರಸ್ತೆ ಬದಿಯ ಚರಂಡಿಯ ಬಳಿ ಕುಳಿತಿದ್ದ ಸಿದ್ದಯ್ಯ ಹಾಗೂ ಲಿಂಗರಾಜು ಅವರ ಮೇಲೆ ಹರಿದಿದೆ.
ಮಂಗಳೂರು: ಪುಟ್ಟ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ
ಕ್ರೇನ್ ಹರಿದ ಪರಿಣಾಮ ಲಿಂಗರಾಜು ಸ್ಥಳದಲ್ಲೆ ಮತಪಟ್ಟರೆ, ಸಿದ್ದಯ್ಯ ಅವರು ಕೊಳ್ಳೇಗಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮತಪಟ್ಟಿದ್ದಾರೆ. ಅಲ್ಲೆ ಚರಂಡಿ ಸಮೀಪ ಕುಳಿತಿದ್ದ ಇತರೆ ಮೂವರು ಸಹ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇಬ್ಬರ ಸಾವಿಗೆ ಕಾರಣವಾದ ಚಾಲಕನನ್ನು ಗ್ರಾಮಸ್ಥರೆ ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಇದಕ್ಕೂ ಮುನ್ನ ಸ್ಥಳೀಯ ಗ್ರಾಮಸ್ಥರೆ ಚಾಲಕನಿಗೆ ಧರ್ಮದೇಟು ನೀಡಿ ಪಟ್ಟಣ ಪೊಲೀಸರಿಗೊಪ್ಪಿಸಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಕ್ರೇನ್ ಚಾಲಕ ಸಂದನಪಾಳ್ಯ ಗ್ರಾಮದ ಮುರುಗನ್ ಎಂಬಾತನನ್ನು ಹಾಗೂ ಇಬ್ಬರ ಸಾವಿಗೆ ಕಾರಣವಾದ ಕ್ರೇನ್ ಅನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗಿದೆ. ಚಾಲಕನ ಅಜಾಗರೂಕತೆ ಹಾಗೂ ಅತಿವೇಗ ಇಬ್ಬರು ವೃದ್ಧರ ಸಾವಿಗೆ ಕಾರಣ ಎನ್ನಲಾಗಿದ್ದು, ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.