ಮಂಡ್ಯ: ಕಲುಷಿತ ನೀರು ಸೇವಿಸಿ ಇಬ್ಬರು ವೃದ್ಧರ ಸಾವು, ಮೂವರ ಸ್ಥಿತಿ ಗಂಭೀರ

By Girish Goudar  |  First Published Aug 27, 2024, 11:29 PM IST

ಕಳೆದ 4 ದಿನಗಳ ಹಿಂದೆ ಗ್ರಾಮಸ್ಥರು ಕಲುಷಿತ ನೀರು ಸೇವಿಸಿದ್ದರು. ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಜವರಮ್ಮ ಹಾಗೂ ಚಿಕ್ಕಮ್ಮ ಎಂಬ ವೃದ್ಧರು ಸಾವನ್ನಪ್ಪಿದ್ದಾರೆ. 12 ಮಂದಿ ಅಸ್ವಸ್ಥಗೊಂಡಿದ್ದು ಮೂವರ ಸ್ಥಿತಿ ಗಂಭೀರವಾಗಿದೆ. 

ಮಂಡ್ಯ(ಆ.27):  ಕಲುಷಿತ ನೀರು ಸೇವಿಸಿ ಇಬ್ಬರು ವೃದ್ಧರು ಸಾವನ್ನಪ್ಪಿ, ಮೂವರು ಸ್ಥಿತಿ ಗಂಭೀರವಾದ ಘಟನೆ ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಮಾರೇನಹಳ್ಳಿ ಗ್ರಾಮದಲ್ಲಿ ಇಂದು(ಮಂಗಳವಾರ) ನಡೆದಿದೆ. 

ಕಳೆದ 4 ದಿನಗಳ ಹಿಂದೆ ಗ್ರಾಮಸ್ಥರು ಕಲುಷಿತ ನೀರು ಸೇವಿಸಿದ್ದರು. ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಜವರಮ್ಮ ಹಾಗೂ ಚಿಕ್ಕಮ್ಮ ಎಂಬ ವೃದ್ಧರು ಸಾವನ್ನಪ್ಪಿದ್ದಾರೆ. 12 ಮಂದಿ ಅಸ್ವಸ್ಥಗೊಂಡಿದ್ದು ಮೂವರ ಸ್ಥಿತಿ ಗಂಭೀರವಾಗಿದೆ. 
ಹಾಸನ ಜಿಲ್ಲಾಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಮೂವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಉಳಿದ ಅಸ್ವಸ್ಥರು ಚನ್ನರಾಯಪಟ್ಟಣ ಹಾಗೂ ಶ್ರವಣಬೆಳಗೊಳ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. 

Latest Videos

undefined

ಯಾದಗಿರಿ: ಕಲುಷಿತ ನೀರು ಸೇವಿಸಿ 14 ಜನ ಅಸ್ವಸ್ಥ

ಘಟನೆ ನಡೆದು 4-5 ದಿನ ಕಳೆದರೂ ಆರೋಗ್ಯ ಇಲಾಖೆ ಕ್ರಮವಹಿಸಿಲ್ಲ. ವೃದ್ಧರಿಬ್ಬರು ಸಾವನ್ನಪ್ಪಿದರೂ ಅಧಿಕಾರಿಗಳು ಮಾತ್ರ ಗ್ರಾಮಕ್ಕೆ ಭೇಟಿ ನೀಡಿಲ್ಲ.  ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ನಡೆಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಕ್ರಮವಹಿಸಬೇಕು ಎಂದು ಗ್ರಾಮಸಸ್ಥರು ಆಗ್ರಹಿಸಿದ್ದಾರೆ. 

click me!