ಚಿತ್ರದುರ್ಗ: ಶವ ಸಾಗಿಸುತ್ತಿದ್ದ ಅಂಬ್ಯುಲೆನ್ಸ್‌ಗೆ ಲಾರಿ ಡಿಕ್ಕಿ, ಓರ್ವ ಮಹಿಳೆ ಸಾವು

By Kannadaprabha News  |  First Published Aug 27, 2024, 10:59 PM IST

ಹೃದಯರೋಗಕ್ಕೀಡಾಗಿದ್ದ ಹಾವೇರಿಯ ಶಿವಬಸವ ಎಂಬುವವರು ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಅವರ ಶವವನ್ನು ಬೆಂಗಳೂರಿನಿಂದ ಹಾವೇರಿಗೆ ಖಾಸಗಿ ಅಂಬ್ಯುಲೆನ್ಸ್‌ನಲ್ಲಿ ಸಾಗಿಸುವ ವೇಳೆ ಕಾತ್ರಾಳು ಬಳ್ಳೇಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಯೊಂದು ರಭಸವಾಗಿ ಅಂಬ್ಯುಲೆನ್ಸ್‌ಗೆ ಡಿಕ್ಕಿ ಒಡೆದಿದೆ. ಇದರಿಂದ ವಾಹನದಲ್ಲಿ ಶವದ ಜೊತೆಗೆ ಸಂಚರಿಸುತ್ತಿದ್ದ ಶಿವಬಸವ ಸಂಬಂಧಿ ಸರೋಜಮ್ಮ  ಮೃತಪಟ್ಟಿದ್ದಾರೆ.


ಚಿತ್ರದುರ್ಗ(ಆ.27):  ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದ ವ್ಯಕ್ತಿಯೊಬ್ಬನ ಶವವನ್ನು ಸಾಗಿಸುತ್ತಿದ್ದ ಅಂಬ್ಯುಲೆನ್ಸ್‌ಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಅಂಬ್ಯುಲೆನ್ಸ್‌ನಲ್ಲಿದ್ದ ಮಹಿಳೆಯೋರ್ವಳು ಸಾವನ್ನಪ್ಪಿದ್ದಾರೆ.  ಸಿರಿಗೆರೆ ಸಮೀಪದ ಕಾತ್ರಳ್‌ ಬಳ್ಳೇಕಟ್ಟೆ ಸಮೀಪ ಈ ದುರ್ಘಟನೆ ನಡೆದಿದೆ. 

ಹೃದಯರೋಗಕ್ಕೀಡಾಗಿದ್ದ ಹಾವೇರಿಯ ಶಿವಬಸವ ಎಂಬುವವರು ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಅವರ ಶವವನ್ನು ಬೆಂಗಳೂರಿನಿಂದ ಹಾವೇರಿಗೆ ಖಾಸಗಿ ಅಂಬ್ಯುಲೆನ್ಸ್‌ನಲ್ಲಿ ಸಾಗಿಸುವ ವೇಳೆ ಕಾತ್ರಾಳು ಬಳ್ಳೇಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಯೊಂದು ರಭಸವಾಗಿ ಅಂಬ್ಯುಲೆನ್ಸ್‌ಗೆ ಡಿಕ್ಕಿ ಒಡೆದಿದೆ. ಇದರಿಂದ ವಾಹನದಲ್ಲಿ ಶವದ ಜೊತೆಗೆ ಸಂಚರಿಸುತ್ತಿದ್ದ ಶಿವಬಸವ ಸಂಬಂಧಿ ಸರೋಜಮ್ಮ (೫೨) ಮೃತಪಟ್ಟಿದ್ದಾರೆ.

Tap to resize

Latest Videos

undefined

ಹುಬ್ಬಳ್ಳಿ: ಓಮಿನಿ ಕಾರು, ಲಾರಿ ಮಧ್ಯೆ ಭೀಕರ ಅಪಘಾತ, ಒಂದೇ ಕುಟುಂಬದ ಮೂವರ ದುರ್ಮರಣ

ಅಂಬ್ಯುಲೆನ್ಸ್‌ನಲ್ಲಿದ್ದ ಇಬ್ಬರು ಗಾಯಗೊಂಡಿದ್ದು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಭರಮಸಾಗರ ಠಾಣೆಯ ವ್ಯಾಪ್ತಿಯಲ್ಲಿ ಈ ಪ್ರಕರಣ ಜರುಗಿದೆ.

click me!