ವಿಜಯಪುರ: ಬೈಕ್‌-ಬುಲೆರೋ ಮಧ್ಯೆ ಮುಖಾಮುಖಿ ಡಿಕ್ಕಿ: ಇಬ್ಬರ ಸಾವು

By Kannadaprabha News  |  First Published Jun 22, 2022, 11:55 AM IST

*   ವಿಜಯಪುರ ತಾಲೂಕಿನ ಕವಲಗಿ ಗ್ರಾಮದ ಬಳಿ ನಡೆದ ಘಟನೆ
*  ಸ್ಥಳದಲ್ಲಿಯೇ ವಾಹನ ಬಿಟ್ಟು ಪರಾರಿಯಾದ ಬುಲೆರೋ ಚಾಲಕ 
*  ಈ ಕುರಿತು ವಿಜಯಪುರ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು
 


ವಿಜಯಪುರ(ಜೂ.22): ಬುಲೆರೋ ವಾಹನ ಹಾಗೂ ಬೈಕ್‌ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ಇಬ್ಬರು ಬೈಕ್‌ ಸವಾರರು ಸಾವನಪ್ಪಿರುವ ಘಟನೆ ವಿಜಯಪುರ ತಾಲೂಕಿನ ಕವಲಗಿ ಗ್ರಾಮದ ಬಳಿ ನಡೆದಿದೆ. 

ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರದೀಪ ಭೀಮು ರಾಠೋಡ (17) ಹಾಗೂ ಅನೀಲ ಚಿನ್ನು ರಾಠೋಡ (17) ಮೃತ ದುರ್ದೈವಿಗಳು. ವಿಜಯಪುರದಿಂದ ದೇವರಹಿಪ್ಪರಗಿ ಮಾರ್ಗವಾಗಿ ಹಿಟ್ನಳ್ಳಿ ತಾಂಡಾಕ್ಕೆ ಶಾಲಾ ದಾಖಲಾತಿಗಾಗಿ ಹೋಗಿ ಬರುತ್ತಿದ್ದ ಸಂದರ್ಭದಲ್ಲಿ ಘಟನೆ ಸಂಭವಿಸಿದೆ ಎನ್ನಲಾಗಿದೆ. 

Tap to resize

Latest Videos

Tumakuruನಲ್ಲಿ ಕಾರು - ಸರಕಾರಿ ಬಸ್ ಭೀಕರ ಅಪಘಾತ, ಇಬ್ಬರು ಬಲಿ

ಬುಲೆರೋ ಚಾಲಕ ಸ್ಥಳದಲ್ಲಿಯೇ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಈ ಕುರಿತು ವಿಜಯಪುರ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

click me!