ಶಿಕಾರಿಪುರ: ಟ್ರ್ಯಾಕ್ಟರ್ ಗೆ ಕಾರು ಡಿಕ್ಕಿ, ಸ್ಥಳದಲ್ಲೇ ಇಬ್ಬರು ಸಾವು

Published : May 12, 2024, 11:10 AM IST
ಶಿಕಾರಿಪುರ: ಟ್ರ್ಯಾಕ್ಟರ್ ಗೆ ಕಾರು ಡಿಕ್ಕಿ, ಸ್ಥಳದಲ್ಲೇ ಇಬ್ಬರು ಸಾವು

ಸಾರಾಂಶ

ಹೊನ್ನಾಳಿ ರಸ್ತೆಯಲ್ಲಿ ಏಕಾಏಕಿ ಅಡ್ಡರಸ್ತೆಯಿಂದ ನೀರಿನ ಟ್ರ್ಯಾಕ್ಟರ್ ಚಾಲಕನ ನಿರ್ಲಕ್ಷ್ಯದಿಂದ ಮುಖ್ಯ ರಸ್ತೆ ಕಡೆ ಚಲಿಸಿ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಕಾರಿನಲ್ಲಿದ್ದ ಸೈಯದ್ ಇಸ್ಮಾಯಿಲ್ ಹಾಗೂ ಪುತ್ರಿ ಅಬೀಬಾ ಸ್ಥಳದಲ್ಲೇ ಮೃತಪಟ್ಟಿದ್ದು ಪತ್ನಿ, ಮೊಮ್ಮಗಳು ಹಾಗೂ ಕಾರು ಚಾಲಕನಿಗೆ ಗಾಯಗಳಾಗಿವೆ. 

ಶಿಕಾರಿಪುರ(ಮೇ.12): ಮೊಮ್ಮಗಳನ್ನು ತುಮಕೂರಿನ ವಸತಿ ಶಾಲೆಗೆ ಕಳುಹಿಸಲು ಕಾರಿನಲ್ಲಿ ಶನಿವಾರ ಬೆಳಿಗ್ಗೆ ತೆರಳುತ್ತಿದ್ದ ಇಲ್ಲಿನ ಗಾರೆ ಮೇಸ್ತ್ರಿ ಸೈಯದ್ ಇಸ್ಮಾಯಿಲ್ [65] ಹಾಗೂ ಪುತ್ರಿ ಅಬೀಬಾ [35] ಪಟ್ಟಣದ ಹೊನ್ನಾಳಿ ರಸ್ತೆಯ ಸಿದ್ದನಪುರ ಬಳಿ ಟ್ರ್ಯಾಕ್ಟರ್ ಗೆ ಕಾರು ಡಿಕ್ಕಿಯಾದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟ ಧಾರುಣ ಘಟನೆ ನಡೆದಿದೆ.

ಪಟ್ಟಣದ ಹಳಿಯೂರು ಹೊಸಕೇರಿ ನಿವಾಸಿ ಸೈಯದ್ ಇಸ್ಮಾಯಿಲ್ , ಪುತ್ರಿ ಅಬೀಬಾ ಜತೆ ಪತ್ನಿ, ಮೊಮ್ಮಗಳ ಕರೆದುಕೊಂಡು ತುಮಕೂರಿನ ವಸತಿ ಶಾಲೆಗೆ ದಾಖಲಿಸಲು ಶನಿವಾರ ಬೆಳಗ್ಗೆ 7ರ ವೇಳೆ ತೆರಳುತ್ತಿದ್ದಾಗ ಪಟ್ಟಣದಿಂದ ಕೇವಲ 7-8 ಕಿ.ಮೀ ದೂರದಲ್ಲಿನ ಹೊನ್ನಾಳಿ ರಸ್ತೆಯಲ್ಲಿ ಏಕಾಏಕಿ ಅಡ್ಡರಸ್ತೆಯಿಂದ ನೀರಿನ ಟ್ರ್ಯಾಕ್ಟರ್ ಚಾಲಕನ ನಿರ್ಲಕ್ಷ್ಯದಿಂದ ಮುಖ್ಯ ರಸ್ತೆ ಕಡೆ ಚಲಿಸಿ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಕಾರಿನಲ್ಲಿದ್ದ ಸೈಯದ್ ಇಸ್ಮಾಯಿಲ್ ಹಾಗೂ ಪುತ್ರಿ ಅಬೀಬಾ ಸ್ಥಳದಲ್ಲೇ ಮೃತಪಟ್ಟಿದ್ದು ಪತ್ನಿ, ಮೊಮ್ಮಗಳು ಹಾಗೂ ಕಾರು ಚಾಲಕನಿಗೆ ಗಾಯಗಳಾಗಿವೆ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕರೆದೊಯ್ಯಲಾಗಿದೆ. 

ಕ್ರೂಸರ್‌ ಪಲ್ಟಿ: ಕೂಲಿಗೆ ಮಹಾರಾಷ್ಟ್ರಕ್ಕೆ ಹೋಗ್ತಿದ್ದ ಅಥಣಿಯ ಮೂವರ ಸಾವು

ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಸಂಜೆ ವೇಳೆಗೆ ಶಿರಾಳಕೊಪ್ಪ ರಸ್ತೆಯ ಖಬರಸ್ತಾನದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

PREV
Read more Articles on
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ