ಕ್ರೂಸರ್‌ ಪಲ್ಟಿ: ಕೂಲಿಗೆ ಮಹಾರಾಷ್ಟ್ರಕ್ಕೆ ಹೋಗ್ತಿದ್ದ ಅಥಣಿಯ ಮೂವರ ಸಾವು

Published : May 12, 2024, 05:30 AM IST
 ಕ್ರೂಸರ್‌ ಪಲ್ಟಿ: ಕೂಲಿಗೆ ಮಹಾರಾಷ್ಟ್ರಕ್ಕೆ ಹೋಗ್ತಿದ್ದ ಅಥಣಿಯ ಮೂವರ ಸಾವು

ಸಾರಾಂಶ

ಮಹಾರಾಷ್ಟ್ರಕ್ಕೆ ಕೂಲಿ ಕೆಲಸಕ್ಕೆ ಬಳ್ಳಿಗೇರಿ ಗ್ರಾಮದಿಂದ ತೆರಳುತ್ತಿದ್ದ ಸಂದರ್ಭದಲ್ಲಿ ಕ್ರೂಸರ್‌ ವಾಹನದ ಎಡಬದಿಯ ಟೈರ್‌ ಸ್ಫೋಟ ಆಗಿದ್ದರಿಂದ ವಾಹನ ಉರುಳಿಬಿದ್ದಿದೆ. ಸ್ಥಳದಲ್ಲೇ ಮೂವರು ಮಹಿಳೆಯರು ಮೃತಪಟ್ಟಿದ್ದಾರೆ. 13 ಪ್ರಯಾಣಿಕರು ಗಾಯಗೊಂಡಿದ್ದು, ಹಲವರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಥಣಿ(ಮೇ.12):  ಕ್ರೂಸರ್‌ ವಾಹನ ಉರುಳಿಬಿದ್ದು ಅಥಣಿ ತಾಲೂಕಿನ ಮೂವರು ಮಹಿಳೆಯರು ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಸಾಂಗೋಲಾ- ಜತ್ತ ಮಾರ್ಗ ಬಳಿ ಶನಿವಾರ ನಡೆದಿದೆ. ಬೆಳಗಾವಿ ಜಿಲ್ಲೆಯ ತಾಲೂಕಿನ ಬಳ್ಳಿಗೇರಿ ಗ್ರಾಮದ ನಿವಾಸಿಗಳಾದ ಮಹಾದೇವಿ ಚೌಗಲಾ, ಗೀತಾ ದೊಡಮನಿ ಮತ್ತು ಮಲಬಾದ ಗ್ರಾಮದ ಕಸ್ತೂರಿ ತಾಂವಶಿ ಮೃತಪಟ್ಟವರು.

ಮಹಾರಾಷ್ಟ್ರಕ್ಕೆ ಕೂಲಿ ಕೆಲಸಕ್ಕೆ ಬಳ್ಳಿಗೇರಿ ಗ್ರಾಮದಿಂದ ತೆರಳುತ್ತಿದ್ದ ಸಂದರ್ಭದಲ್ಲಿ ಕ್ರೂಸರ್‌ ವಾಹನದ ಎಡಬದಿಯ ಟೈರ್‌ ಸ್ಫೋಟ ಆಗಿದ್ದರಿಂದ ವಾಹನ ಉರುಳಿಬಿದ್ದಿದೆ. ಸ್ಥಳದಲ್ಲೇ ಮೂವರು ಮಹಿಳೆಯರು ಮೃತಪಟ್ಟಿದ್ದಾರೆ. 13 ಪ್ರಯಾಣಿಕರು ಗಾಯಗೊಂಡಿದ್ದು, ಹಲವರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಎಕ್ಸ್‌ಪ್ರೆಸ್‌ ವೇಯಲ್ಲಿ ಅಪಘಾತ: 6 ಸಾವು, ಮಕ್ಕಳ ಉಳಿಸಿ ಪೋಷಕರ ಹೊತ್ತೊಯ್ದ ಜವರಾಯ

ಕ್ರೂಸರ್‌ ವಾಹನ ಚಾಲಕ ಅತಿವೇಗವಾಗಿ ಚಾಲನೆ ಮಾಡುತ್ತಿದ್ದಾಗ ವಾಹನದ ಎಡಬದಿಯ ಟೈರ್‌ ಬ್ಲಾಸ್ಟ್‌ ಆಗಿದ್ದರಿಂದ ವಾಹನ ಉರುಳಿ ಬಿದ್ದು ಈ ಘಟನೆ ಜರುಗಿದೆ.

PREV
Read more Articles on
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ