ಬೆಳಗಾವಿ: ವಿದ್ಯುತ್‌ ಅವಘಡಕ್ಕೆ ಅಜ್ಜಿ-ಮೊಮ್ಮಗ ಸಾವು

Kannadaprabha News   | Asianet News
Published : Oct 04, 2021, 01:25 PM IST
ಬೆಳಗಾವಿ: ವಿದ್ಯುತ್‌ ಅವಘಡಕ್ಕೆ ಅಜ್ಜಿ-ಮೊಮ್ಮಗ ಸಾವು

ಸಾರಾಂಶ

*  ​ಬೆಳಗಾವಿ ಜಿಲ್ಲೆ​ಯ ಹುಕ್ಕೇರಿ ತಾಲೂ​ಕಿ​ನ ​ಸಂಕೇ​ಶ್ವ​ರ ಪಟ್ಟಣದಲ್ಲಿ ನಡೆದ ಘಟನೆ *  ಘಟನೆಯಲ್ಲಿ ಮೃತ ಅಜ್ಜಿಯ ಸೊಸೆಗೂ ಗಂಭೀರ ಗಾಯ *  ಈ ಕುರಿತು ಸಂಕೇಶ್ವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು   

ಸಂಕೇಶ್ವರ(ಅ.04):  ಬಟ್ಟೆಒಣ ಹಾಕಲು ಹೋಗಿದ್ದ ವೃದ್ಧಗೆ ವಿದ್ಯುತ್‌ ತಂತಿ ತಗುಲಿದೆ. ಆ ವೇಳೆ ಮೊಮ್ಮಗ ಅಜ್ಜಿ​ ಸಹಾಯಕ್ಕೆ ಆಗಮಿಸಿದ್ದ ವೇಳೆ ಆತನಿಗೂ ವಿದ್ಯುತ್‌ ಶಾಕ್‌(Electric shock) ತಗುಲಿ ಇಬ್ಬರು ಅಜ್ಜಿ-ಮೊಮ್ಮಗ ಮೃತಪಟ್ಟು, ಸೊಸೆಗೆ ಗಂಭೀರ ಗಾಯವಾದ ಘಟನೆ ಬೆಳ​ಗಾವಿ(Belagavi) ಜಿಲ್ಲೆ​ಯ ಹುಕ್ಕೇರಿ ತಾಲೂ​ಕಿ​ನ ​ಸಂಕೇ​ಶ್ವ​ರ(Sankeshwar) ಪಟ್ಟಣದ ಮಡ್ಡಿ ಗಲ್ಲಿಯಲ್ಲಿ ಭಾನುವಾರ ನಡೆದಿದೆ.

ಪಟ್ಟಣದ ಮಡ್ಡಿಗಲ್ಲಿ ನಿವಾಸಿ ಶಾಂತವ್ವ ದುಂಡಪ್ಪ ಬಸ್ತವಾಡಿ(75) ಹಾಗೂ ಸಿದ್ದಾರ್ಥ ಬಾಪು ಬಸ್ತವಾಡಿ(25 ) ಮೃತರು. ಮೃತ ಶಾಂತವ್ವ ಬಸ್ತವಾಡಿ ಬೆಳಗ್ಗೆ ಬಟ್ಟೆಒಣ ಹಾಕಲು ಹಿತ್ತಲಿಗೆ ಹೋದ ಸಂದರ್ಭದಲ್ಲಿ ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ನಿಂದ ಬಟ್ಟೆಒಣ ಹಾಕುತ್ತಿದ್ದ ತಂತಿಯಲ್ಲಿ ವಿದ್ಯುತ್‌ಹರಿದು ವೃದ್ಧೆಗೆ ವಿದ್ಯುತ್‌ತಗು​ಲಿ​ದೆ. ಅಲ್ಲೆ ಇದ್ದ ಮೊಮ್ಮಗ ಸಿದ್ಧಾರ್ಥ ಬಸ್ತವಾಡಿ ಅಜ್ಜಿಯ ಸಹಾಯಕ್ಕೆ ಧಾವಿಸಿದ್ದ ವೇಳೆ ಆತನಿಗೂ ವಿದ್ಯುತ್‌ತಗುಲಿ ಗಂಭೀರ ಗಾಯವಾಗಿತ್ತು.

ರಾಯಭಾಗ: ವಿದ್ಯುತ್ ಪ್ರವಹಿಸಿ ಸಹೋದರರಿಬ್ಬರ ದುರ್ಮರಣ

ಕೂಡಲೇ ಇಬ್ಬರನ್ನು ಪಟ್ಟಣದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಸ್ಥಳದಲ್ಲಿ ಮೊಮ್ಮಗ ಸಿದ್ಧಾರ್ಥ ನಿಧನ ಹೊಂದಿದ, ವೃದ್ಧೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗಿದೆ ಕೊನೆಯುಸಿರೆಳೆದಿದ್ದಾಳೆ. ಇನ್ನೋರ್ವ ಗಾಯಾಳು ಮೃತ ಅಜ್ಜಿಯ ಸೊಸೆಗೂ ಗಂಭೀರ ಗಾಯವಾಗಿದೆ. ಈ ಕುರಿತು ಸಂಕೇಶ್ವರ ಪೊಲೀಸ್‌(Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

PREV
click me!

Recommended Stories

ಬಂಡೀಪುರದಲ್ಲಿ ಡ್ರೋನ್‌ ಮೂಲಕ ನಿಗಾವಹಿಸುತ್ತಿದ್ದ ಅಧಿಕಾರಿಗಳಿಗೆ ಕಂಡ ಬೇಟೆಗಾರ, ಡ್ರೋನ್‌ ಕಣ್ಣಿಗೆ ಸೆರೆಯಾದವನ ಬಂಧನ!
ಬಳ್ಳಾರಿ ಸೆಂಟ್ರಲ್ ಜೈಲಲ್ಲಿ ಗಾಂಜಾ ಬೇಕೆಂದು ಜೈಲರ್‌ನನ್ನೇ ಅಟ್ಟಾಡಿಸಿ ಹೊಡೆದ ಕೈದಿಗಳು: ಆಸ್ಪತ್ರೆಗೆ ದಾಖಲು