* ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ನಿಲಜಿ ಗ್ರಾಮದಲ್ಲಿ ನಡೆದ ಘಟನೆ
* ಬಾವಿ ಮೋಟರ್ ಸ್ಟಾರ್ಟ್ ಮಾಡಲು ಹೋಗಿ ಅವಘಡ
* ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಕುಡಚಿ ಪೊಲೀಸರು
ಚಿಕ್ಕೋಡಿ(ಆ.29): ಆಕಸ್ಮಿಕವಾಗಿ ಪ್ರವಹಿಸಿ ಸಹೋದರರಿಬ್ಬರು ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ನಿಲಜಿ ಗ್ರಾಮದಲ್ಲಿ ಇಂದು(ಭಾನುವಾರ) ನಡೆದಿದೆ. ರಾಜು ಬಾಳಪ್ಪ ಬಡಿಗೇರ(25) ಹಾಗೂ ಶಂಕರ್ ರಾಮಪ್ಪ ಬಡಿಗೇರ(24) ಎಂಬುವರೇ ಮೃತಪಟ್ಟ ದುರ್ದೈವಿಗಳಾಗಿದ್ದಾರೆ.
ಇಂದು ಬೆಳ್ಳಂ ಬೆಳಗ್ಗೆ ಹೊಲಕ್ಕೆ ನೀರು ಹಾಯಿಸಲು ಬಾವಿಯ ಮೋಟರ್ ಸ್ಟಾರ್ಟ್ ಮಾಡಲು ಹೋದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ಕರೆಂಟ್ ಶಾಕ್ ಹೊಡೆದಿದ್ದರಿಂದ ತೀವ್ರ ಅಸ್ವಸ್ಥಗೊಂಡಿದ್ದ ಸಹೋದರನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ದಾರಿ ಮಧ್ಯೆಯೇ ಸಹೋರರಿಬ್ಬರ ಸಾವನ್ನಪ್ಪಿದ್ದಾರೆ.
ಹಾಸನ: ಬೋರ್ ಕೊರೆಸುವಾಗ ವಿದ್ಯುತ್ ಪ್ರವಹಿಸಿ ಇಬ್ಬರು ಸಾವು!
ಘಟನಾ ಸ್ಥಳಕ್ಕೆ ಕುಡಚಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಡಚಿ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.