ರಾಣಿಬೆನ್ನೂರು: ಕಾರು ತೊಳೆಯಲು ನದಿಗಿಳಿದ ಇಬ್ಬರು ಯುವತಿಯರು ನೀರುಪಾಲು!

By Kannadaprabha News  |  First Published Aug 2, 2020, 10:33 AM IST

ಕಾರು ತೊಳೆಯಲು ಹೋಗಿ ನದಿಯಲ್ಲಿ ಮುಳುಗಿ ಯುವತಿರಿಬ್ಬರು ಸಾವು| ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಹಿರೇಬಿದರಿ ಗ್ರಾಮದ ಬಳಿ ನಡೆದ ಘಟನೆ| ಮೃತರು ತಮ್ಮ ಸೋದರ ಮಾವನ ಜತೆ ಕಾರು ತೊಳೆಯಲು ನದಿ ಬಳಿ ತೆರಳಿದಾಗ ನಡೆದ ದುರ್ಘಟನೆ|


ರಾಣಿಬೆನ್ನೂರು(ಆ.02): ತುಂಗಭದ್ರಾ ನದಿಯಲ್ಲಿ ಕಾರು ತೊಳೆಯಲು ಹೋಗಿ ಯುವತಿರಿಬ್ಬರು ಮೃತಪಟ್ಟ ಘಟನೆ ಶನಿವಾರ ಸಂಜೆ ತಾಲೂಕಿನ ಹಿರೇಬಿದರಿ ಗ್ರಾಮದ ಜಾಲಿಮರಡಿ ಬಳಿಯಲ್ಲಿ ಸಂಭವಿಸಿದೆ. 

ಹಿರೇಕೆರೂರು ತಾಲೂಕು ಅಬಲೂರು ಗ್ರಾಮದ ಕೀರ್ತಿ ನಿಜಲಿಂಗಪ್ಪ ಇಂಗಳಗುಂದಿ (17) ಹಾಗೂ ಬ್ಯಾಡಗಿ ತಾಲೂಕು ಕಾಟೇನಹಳ್ಳಿ ಗ್ರಾಮದ ಅಭಿಲಾಷಾ ಚಂದ್ರಪ್ಪ ಹಲಗೇರಿ (19) ಮೃತರು. 

Tap to resize

Latest Videos

ಅಯ್ಯೋ ವಿಧಿಯೇ..! ನೀರಲ್ಲಿ ಮುಳುಗಿ 4 ಪುಟ್ಟ ಕಂದಮ್ಮಗಳು ಸಾವು

ಮೃತರು ತಮ್ಮ ಸೋದರ ಮಾವನ ಜತೆ ಕಾರು ತೊಳೆಯಲು ನದಿ ಬಳಿ ತೆರಳಿದಾಗ ಈ ಘಟನೆ ಜರುಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
 

click me!