ತಾಳಿ ಅಡವಿಟ್ಟು ಟೀವಿ ಖರೀದಿಸಿದ ಮಹಿಳೆಗೆ ನೆರವಿನ ಮಹಾಪೂರ

By Kannadaprabha NewsFirst Published Aug 2, 2020, 9:51 AM IST
Highlights

ಮಕ್ಕಳ ಆನ್‌ಲೈನ್‌ ಶಿಕ್ಷಣಕ್ಕಾಗಿ ತನ್ನ ತಾಳಿಯನ್ನೇ ಅಡವಿಟ್ಟು ಟಿವಿ ಖರೀದಿಸಿದ್ದ ಜಿಲ್ಲೆಯ ನರಗುಂದ ತಾಲೂಕಿನ ರಡ್ಡೇರನಾಗೂರ ಗ್ರಾಮದ ಕಸ್ತೂರೆವ್ವ ಚಲವಾದಿ ಅವರ ಕುಟುಂಬಕ್ಕೆ ನೆರವಿನ ಮಹಾಪೂರವೇ ಹರಿದು ಬಂದಿದೆ.

ಗದಗ(ಆ.02): ಮಕ್ಕಳ ಆನ್‌ಲೈನ್‌ ಶಿಕ್ಷಣಕ್ಕಾಗಿ ತನ್ನ ತಾಳಿಯನ್ನೇ ಅಡವಿಟ್ಟು ಟಿವಿ ಖರೀದಿಸಿದ್ದ ಜಿಲ್ಲೆಯ ನರಗುಂದ ತಾಲೂಕಿನ ರಡ್ಡೇರನಾಗೂರ ಗ್ರಾಮದ ಕಸ್ತೂರೆವ್ವ ಚಲವಾದಿ ಅವರ ಕುಟುಂಬಕ್ಕೆ ನೆರವಿನ ಮಹಾಪೂರವೇ ಹರಿದು ಬಂದಿದೆ.

6, 8 ಹಾಗೂ 9ನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳ ಶಿಕ್ಷಣಕ್ಕಾಗಿ ತಾಯಿ ಮಾಡಿದ ತ್ಯಾಗಕ್ಕೆ ರಾಜ್ಯಾದ್ಯಂತ ಭಾರೀ ಸ್ಪಂದನೆ ವ್ಯಕ್ತವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ ಮೇರೆಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ದಿನೇಶ್‌ ನೇತೃತ್ವದ ಅಧಿಕಾರಿಗಳು ಕಸ್ತೂರೆವ್ವ ಅವರ ಮನೆಗೆ ಭೇಟಿ ನೀಡಿ, ಮಕ್ಕಳ ರಕ್ಷಣಾ ಘಟಕದಿಂದ ಪ್ರಾಯೋಜಕತ್ವ ಸೌಲಭ್ಯದಡಿ ಪ್ರತಿ ತಿಂಗಳು ಸಾವಿರ ರುಪಾಯಿಯಂತೆ ಮೂರು ವರ್ಷದವರಿಗೆ ಸೌಲಭ್ಯ ಕಲ್ಪಿಸುವ ಭರವಸೆ ನೀಡಿದ್ದಾರೆ.

ತಾಳಿ ಬಂತು ತಾಳಿ..: ಮಕ್ಕಳ ಶಿಕ್ಷಣಕ್ಕಾಗಿ ಮಾರಿದ್ದ ತಾಳಿ ಕೊನೆಗೂ ತಾಯಿ ಕೊರಳಿಗೆ

ಇನ್ನೂ ಅನೇಕ ಜನ​ಪ್ರ​ತಿ​ನಿ​ಧಿ​ಗಳು, ಸಾರ್ವ​ಜ​ನಿ​ಕರು ಸಹಾಯ ಹಸ್ತ ಚಾಚಿದ್ದಾರೆ. ಮಕ್ಕಳ ಶಿಕ್ಷಣಕ್ಕಾಗಿ ತಾಯಿ ತನ್ನ ಚಿನ್ನದ ತಾಳಿಯನ್ನೇ ಮಾರಿ ಟಿವಿ ಖರೀದಿ ಮಾಡಿದ್ದ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ರಡ್ಡೆರ ನಾಗನೂರ ಗ್ರಾಮದಲ್ಲಿ ನಡೆದಿತ್ತು. ಈ ವರದಿಯನ್ನು ನಿಮ್ಮ ಸುವರ್ಣ ನ್ಯೂಸ್ ನಿರಂತರವಾಗಿ ಬಿತ್ತರಿಸಿ ಕೊನೆಗೆ ಮಾರಿದ್ದ ತಾಳಿ ಮರಳಿ ತಾಯಿ ಕೊರಳಿಗೆ ಬಂದಿದೆ. 

click me!