ಬೈಕ್ ಸವಾರನನ್ನು ಉಳಿಸಲು ಹೋಗಿ ಮೂವರು ಸಾವು..!

Published : Jun 26, 2019, 07:16 PM IST
ಬೈಕ್ ಸವಾರನನ್ನು ಉಳಿಸಲು ಹೋಗಿ ಮೂವರು ಸಾವು..!

ಸಾರಾಂಶ

ಅಡ್ಡ ಬಂದ ಬೈಕಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಮೂವರು ಪ್ರಾಣ ಕಳೆದುಕೊಂಡಿರುವ ಘಟನೆ ಬುಧವಾರ ದೇವನಹಳ್ಳಿಯಲ್ಲಿ ಸಂಭವಿಸಿದೆ.

ಬೆಂಗಳೂರು, [ಜೂ.26]:  ಅಡ್ಡ ಬಂದ ಬೈಕ್​ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಕಾರು ಪಲ್ಟಿಯಾಗಿದೆ. ಪರಿಣಾಮ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದರೆ, ಇಬ್ಬರಿಗೆ ಗಂಭೀರ ಗಾಯವಾಗಿದೆ.

ಬೆಂಗಳೂರು ಗ್ರಾಮಾಮತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕನ್ನಮಂಗಲ ಪಾಳ್ಯ ಗೇಟ್​ ಬಳಿ ಬೆಂಗಳೂರು -ಹೈದರಾಬಾದ್​ ರಾಷ್ಟ್ರೀಯ ಹೆದ್ದಾರಿ 7 ರಲ್ಲಿ ಅಪಘಾತ ನಡೆದಿದೆ. ಮೃತ ಗುರುತು ಪತ್ತೆಯಾಗಿಲ್ಲ.

ಹೆದ್ದಾರಿಯಲ್ಲಿ ಕಾರಿಗೆ ಅಡ್ಡ ಬಂದ ಬೈಕ್​ ತಪ್ಪಿಸಲು ಹೋಗಿ ಕಾರು ಪಲ್ಟಿಯಾಗಿದೆ ಎಂದು ತಿಳಿದು ಬಂದಿದೆ. ದೇವನಹಳ್ಳಿ ವಿಮಾನ ನಿಲ್ದಾಣ ಸಂಚಾರ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

PREV
click me!

Recommended Stories

ಬೆಂಗಳೂರಿನ ₹36000 ಕೋಟಿ ಟೆಂಡರ್ ರದ್ದು ಸಾಧ್ಯತೆ; ‘ಕ್ಲೀನ್ ಚಿಟ್’ ಇದ್ರೂ ಯಾಕೆ ನಿರ್ಧಾರ?
ಅಕಸ್ಮಾತ್ ಬಿಜೆಪಿ ದಲಿತರ ಮೀಸಲಾತಿ ಕಸಿದರೆ... ವಿಜಯಪುರದಲ್ಲಿ ಸಂಸದ ರಮೇಶ್ ಜಿಗಜಿಣಗಿ ಸ್ಫೋಟಕ ಹೇಳಿಕೆ