ಶಿಗ್ಗಾಂವಿ: ರಸ್ತೆ ಅಪಘಾತ, ಸ್ಥಳದಲ್ಲೇ ಇಬ್ಬರು ಸಾವು

By Kannadaprabha News  |  First Published Aug 13, 2023, 9:30 PM IST

ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ತಿಮ್ಮಾಪೂರದ ರಾಷ್ಟ್ರೀಯ ಹೆದ್ದಾರಿ 4ರ ಮೇಲ್ಸೇತುವೆ ಬಳಿ ನಡೆದ ಘಟನೆ


ಶಿಗ್ಗಾಂವಿ(ಆ.13): ಹುಬ್ಬಳ್ಳಿ ಕಡೆಗೆ ಹೊರಟಿದ್ದ ಎರ್ಟಿಗಾ ಕಾರೊಂದು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲಿ ಮೃತಪಟ್ಟು ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ತಿಮ್ಮಾಪೂರದ ರಾಷ್ಟ್ರೀಯ ಹೆದ್ದಾರಿ 4ರ ಮೇಲ್ಸೇತುವೆ ಬಳಿ ಶನಿವಾರ ಬೆಳಗ್ಗೆ ನಡೆದಿದೆ.

ಮನೋಹರ್‌ ಬಿ.(38), ಪ್ರಿಯಾಂಕ(23) ಮೃತರು. ಕಾರಿನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಮೊನಾಲಿಸಾ (38), ಸೀಖಾ(7) ಗಾಯಗೊಂಡಿದ್ದು, ಇವರನ್ನು ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಲಾಗಿದೆ.

Tap to resize

Latest Videos

undefined

ಪುತ್ರನಿಗೆ ಲೋಕಸಭೆ ಎಲೆಕ್ಷನ್‌ ಟಿಕೆಟ್‌ಗಾಗಿ ಈಶ್ವರಪ್ಪ ಲಾಬಿ: ಮಗನಿಗೆ ಮಠಾಧೀಶ್ವರ ಆಶೀರ್ವಾದವೂ ಇದೆ ಎಂದ ಮಾಜಿ ಸಚಿವ

ಎರಡು ವಾಹನಗಳು ಡಿಕ್ಕಿ ಹೊಡೆದಿದ್ದರಿಂದ ಎರ್ಟಿಗಾ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಈ ಕುರಿತು ತಾಲೂಕಿನ ತಡಸ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!