ಮಂಗಳೂರು- ಬೆಂಗಳೂರು ನಡುವೆ ಪ್ರತಿದಿನ ಎರಡು ವಿಮಾನ

By Kannadaprabha News  |  First Published Nov 17, 2023, 12:00 AM IST

ಇದು ಬೆಂಗಳೂರು ಮೂಲಕ ತಿರುವನಂತಪುರಕ್ಕೆ ತೆರಳುವ ವಿಮಾನವಾಗಿದೆ. ಮಂಗಳೂರಿನಿಂದ ರಾತ್ರಿ 8.15ಕ್ಕೆ ಹೊರಟು ರಾತ್ರಿ 9.30ಕ್ಕೆ ಬೆಂಗಳೂರು ತಲುಪಲಿದೆ. ಬೆಂಗಳೂರಿನಿಂದ ರಾತ್ರಿ 10.20ಕ್ಕೆ ಹೊರಟು ರಾತ್ರಿ 11.25ಕ್ಕೆ ಕೇರಳದ ತಿರುವನಂತಪುರ ತಲುಪಲಿದೆ. 


ಮಂಗಳೂರು(ನ.17):  ಕರಾವಳಿ ನಗರವಾದ ಮಂಗಳೂರಿನಿಂದ ರಾಜ್ಯ ರಾಜಧಾನಿ ಬೆಂಗಳೂರಿಗೆ ದೈನಂದಿನ ವಿಮಾನ ಸಂಪರ್ಕಕ್ಕೆ ದೊಡ್ಡ ಉತ್ತೇಜನ ದೊರೆತಿದೆ. ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ಬುಧವಾರದಿಂದ ಮಂಗಳೂರು-ಬೆಂಗಳೂರು ನಡುವೆ ಯಾನ ಆರಂಭಿಸಿದೆ. 2 ಶಿಶುಗಳು ಸೇರಿದಂತೆ 107 ಪ್ರಯಾಣಿಕರನ್ನು ಹೊತ್ತ ಫ್ಲೈಟ್ ಐಎಕ್ಸ್ 782 ಮಧ್ಯಾಹ್ನ 12.30 ಕ್ಕೆ ಮಂಗಳೂರಿಗೆ ಆಗಮಿಸಿದೆ. ಮಂಗಳೂರು-ಬೆಂಗಳೂರು ನಡುವೆ ಪ್ರತಿದಿನ ಏಳು ವಿಮಾನ ಸಂಚಾರ ಇದೆ.

ಪೈಲಟ್‌ ಗೌರವ್ ವಸಿಸ್ಟ್ ನೇತೃತ್ವದ ವಿಮಾನ ಏಪ್ರನ್‌ಗೆ ಇಳಿಯುತ್ತಿದ್ದಂತೆ ವಿಮಾನ ನಿಲ್ದಾಣ ವತಿಯಿಂದ ಸಾಂಪ್ರದಾಯಿಕ ವಾಟರ್ ಕ್ಯಾನನ್ ವಂದನೆ ಸಲ್ಲಿಸಲಾಯಿತು. ದೇಶೀಯ ಆಗಮನ ಸಭಾಂಗಣದಲ್ಲಿ ಮೊದಲ ಬ್ಯಾಚ್ ಪ್ರಯಾಣಿಕರನ್ನು ಕೇಕ್ ಕತ್ತರಿಸುವ ಮೂಲಕ ಸ್ವಾಗತಿಸಲಾಯಿತು. ಐಎಕ್ಸ್ 678 ವಿಮಾನ ಮಧ್ಯಾಹ್ನ 1.10 ಕ್ಕೆ ಒಂದು ಮಗು ಮತ್ತು ವೀಕ್ಷಕ ಪೈಲಟ್ ಸೇರಿದಂತೆ ಏಳು ಸಿಬ್ಬಂದಿ ಸೇರಿದಂತೆ 92 ಪ್ರಯಾಣಿಕರೊಂದಿಗೆ ಬೆಂಗಳೂರಿಗೆ ಹೊರಟಿತು.

Tap to resize

Latest Videos

ಪುತ್ತೂರು ಮಾಜಿ ಶಾಸಕ ಮಠಂದೂರಿಗೆ ವಿಷಪೂರಿತ ಹಾವು ಕಡಿತ: ಆಸ್ಪತ್ರೆಗೆ ದಾಖಲು

ಈ ಸಂದರ್ಭ ಮುಖ್ಯ ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿ ವೀರೇಂದ್ರ ಮೋಹನ್ ಜೋಶಿ, ವಿಮಾನ ನಿಲ್ದಾಣದ ವಿವಿಧ ವಿಭಾಗಗಳ ಮುಖ್ಯಸ್ಥರು, ಏರ್ ಇಂಡಿಯಾ ಎಕ್ಸ್‌ಪ್ರೆಸ್‌, ಏರ್ ಇಂಡಿಯಾ, ಎಐಎಸ್ಎಟಿಎಸ್, ಕಸ್ಟಮ್ಸ್, ವಲಸೆ ವಿಭಾಗದ ಮುಖ್ಯಸ್ಥರು, ಸಿಐಎಸ್ಎಫ್ ಮತ್ತು ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಸಾಂಪ್ರದಾಯಿಕ ದೀಪವನ್ನು ಬೆಳಗಿಸಿ ಕೇಕ್ ಹಂಚಿಕೊಂಡರು.

ಎರಡನೇ ಎಐಇ ವಿಮಾನ ಐಎಕ್ಸ್ 1795 ಕಣ್ಣೂರು-ಬೆಂಗಳೂರು-ಮಂಗಳೂರು ನಡುವೆ ಕಾರ್ಯಚರಿಸಿದೆ. ಐಎಕ್ಸ್ 1795 ವಿಮಾನವು ಕಣ್ಣೂರಿನಿಂದ ಸಂಜೆ 4.30ಕ್ಕೆ ಹೊರಟು ಸಂಜೆ 5.50ಕ್ಕೆ ಬೆಂಗಳೂರು ತಲುಪಿತು. ಬೆಂಗಳೂರಿನಿಂದ ಸಂಜೆ 6.25ಕ್ಕೆ ಹೊರಟು ರಾತ್ರಿ 7.35ಕ್ಕೆ ಮಂಗಳೂರು ತಲುಪಲಿದೆ. ಇದೇ ವಿಮಾನ ಐಎಕ್ಸ್ 792 ಆಗಿ ಸಂಚರಿಸಲಿದೆ.

ಇದು ಬೆಂಗಳೂರು ಮೂಲಕ ತಿರುವನಂತಪುರಕ್ಕೆ ತೆರಳುವ ವಿಮಾನವಾಗಿದೆ. ಮಂಗಳೂರಿನಿಂದ ರಾತ್ರಿ 8.15ಕ್ಕೆ ಹೊರಟು ರಾತ್ರಿ 9.30ಕ್ಕೆ ಬೆಂಗಳೂರು ತಲುಪಲಿದೆ. ಬೆಂಗಳೂರಿನಿಂದ ರಾತ್ರಿ 10.20ಕ್ಕೆ ಹೊರಟು ರಾತ್ರಿ 11.25ಕ್ಕೆ ಕೇರಳದ ತಿರುವನಂತಪುರ ತಲುಪಲಿದೆ ಎಂದು ವಿಮಾನ ನಿಲ್ದಾಣದ ಪ್ರಕಟಣೆ ತಿಳಿಸಿದೆ.

click me!