ಮನೆಯ ತೋಟದಲ್ಲಿ ನಿಂತಿದ್ದ ವೇಳೆ ಸಂಜೀವ ಮಠಂದೂರು ಅವರಿಗೆ ಹಾವು ಕಚ್ಚಿದೆ. ತಕ್ಷಣವೇ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಜೀವ ಮಠಂದೂರು ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಪುತ್ತೂರು(ನ.16): ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಹಾವು ಕಡಿತದಿಂದ ಅಸ್ವಸ್ಥರಾದ ಘಟನೆ ಇಂದು(ಗುರುವಾರ) ನಡೆದಿದೆ.
ಮನೆಯ ತೋಟದಲ್ಲಿ ನಿಂತಿದ್ದ ವೇಳೆ ಹಾವು ಕಚ್ಚಿದೆ. ತಕ್ಷಣವೇ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಜೀವ ಮಠಂದೂರು ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
MANGALURU: ಭಜರಂಗದಳ ಕಾರ್ಯಕರ್ತರಿಗೆ ಗಡೀಪಾರು ನೋಟಿಸ್: ನಳಿನ್ ಕಟೀಲ್ ಆಕ್ರೋಶ!
ಹಾವಿನ ವಿಷ ಏರುವ ಮುನ್ನವೇ ಮಠಂದೂರು ಅವರಿಗೆ ವೈದ್ಯರು ತುರ್ತು ಚಿಕಿತ್ಸೆ ನೀಡಿದ್ದಾರೆ. ತುರ್ತು ಚಿಕಿತ್ಸೆಯಿಂದ ಸಂಜೀವ ಮಠಂದೂರು ಸದ್ಯ ಅಲ್ಪ ಚೇತರಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.