ನಕಲಿ ಪಾಸ್ ಮಾರಾಟ ಮಾಡುತ್ತಿದ್ದ ಪ್ರಕರಣ ಪತ್ತೆ ಹಚ್ಚುವಲ್ಲಿ ಶನಿವಾರ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಸಂಬಂಧ ಮಹಿಳೆ ಸೇರಿ ಇಬ್ಬರನ್ನು ಬಂಧಿಸಿ, ಅಪ್ರಾಪ್ತ ಬಾಲಕನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಚಿಕ್ಕಮಗಳೂರು(ಏ.12): ನಕಲಿ ಪಾಸ್ ಮಾರಾಟ ಮಾಡುತ್ತಿದ್ದ ಪ್ರಕರಣ ಪತ್ತೆ ಹಚ್ಚುವಲ್ಲಿ ಶನಿವಾರ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಸಂಬಂಧ ಮಹಿಳೆ ಸೇರಿ ಇಬ್ಬರನ್ನು ಬಂಧಿಸಿ, ಅಪ್ರಾಪ್ತ ಬಾಲಕನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ನಗರದ ದಂಟರಮಕ್ಕಿ ಬಡಾವಣೆಯ ಮಹಿಳೆ ಹಾಗೂ ವ್ಯಕ್ತಿ ಹಾಗೂ ಬಾಲಕನನ್ನು ಬಂಧಿಸಿ ಅವರ ಬಳಿ ಇದ್ದ 15 ನಕಲಿ ಪಾಸ್‌ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ನಕಲಿ ಪಾಸ್‌ಗಳು ಜನರ ಕೈಯಲ್ಲಿ ಓಡಾಡುತ್ತಿವೆ ಎಂದು ಸಾರ್ವಜನಿಕರಿಂದ ಬಂದ ದೂರಿನನ್ವಯ ಜಿಲ್ಲಾ ರಕ್ಷಣಾಧಿಕಾರಿ ಹರೀಶ್ ಪಾಂಡೆ ಅವರು ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್‌ಸ್ಪೆಕ್ಟರ್ ಗವಿರಾಜ್, ಕ್ರೈಂ ಸಬ್‌ಇನ್ಸ್‌ಸ್ಪೆಕ್ಟರ್ ಸುದೇಶ್ ಹಾಗೂ ನಗರ ಪೊಲೀಸ್ ಠಾಣೆಯ ಸಬ್ ಇನ್ಸ್‌ಸ್ಪೆಕ್ಟರ್ ತೇಜಸ್ವಿ ನೇತೃತ್ವದಲ್ಲಿ ಎರಡು ತಂಡ ರಚಿಸಿದ್ದರು.
ಕೊರೋನಾ ಚಿಕಿತ್ಸೆಗೆ ದೇಶದಲ್ಲಿ 586 ಆಸ್ಪತ್ರೆ!
ತಪಾಸಣೆಯ ವೇಳೆಯಲ್ಲಿ ಮಂಜುನಾಥ್ ಎಂಬುವವರ ಬಳಿ ನಕಲಿ ಪಾಸ್ ಪತ್ತೆಯಾಗಿದ್ದು, ಆತ ಕೊಟ್ಟಮಾಹಿತಿಯ ಮೇರೆಗೆ ದಂಟರಮಕ್ಕಿಯಲ್ಲಿ ಅಪ್ರಾಪ್ತ ಬಾಲಕ ತನ್ನ ಮನೆಯಲ್ಲಿಯೇ ಕಲರ್ ಜೆರಾಕ್ಸ್‌ನಿಂದ ನಕಲಿ ಪಾಸ್ ಪ್ರಿಂಟ್ ತೆಗೆದು 50 ರುಪಾಯಿಗೆ ಒಂದರಂತೆ ಮಾರಾಟ ಮಾಡಲು ಯತ್ನಿಸಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆಯಲ್ಲಿದ್ದ ಎಲ್ಲಾ ನಕಲಿ ಪಾಸ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.